ಅತಿಥಿ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ರಾಮನಗರ, ಜೂ. 09: ರಾಮನಗರ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ, ಕಾಲೇಜು ಹಾಗೂ ಮೌಲಾನಾ ಆಜಾ಼ದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಶಿಕ್ಷಕರ ಹಾಗೂ ಉಪನ್ಯಾಸಕರ ಹುದ್ದೆಗೆ ಅತಿಥಿ ಶಿಕ್ಷಕರ / ಉಪನ್ಯಾಸಕರಿಂದ ಗೌರವಧನದ ಆಧಾರದ ಮೇಲೆ ಅರ್ಜಿ ಅಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು, ಸಂಬಂಧಪಟ್ಟ ವಿಷಯದಲ್ಲಿ ಪದವಿ /ಸ್ನಾತಕೋತ್ತರ ಪದವಿ ಹಾಗೂ ಬಿಎಡ್/ಬಿಪಿಎಡ್ ಪದವಿ ಪಡೆದಿರುವುದು ಕಡ್ಡಾಯವಾಗಿರುತ್ತದೆ. ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಶಿಕ್ಷಕರು ಅರ್ಜಿ ಸಲ್ಲಿಸಬಹುದು. ಮೆರಿಟ್ ಹಾಗೂ ಅನುಭವವುಳ್ಳವರಿಗೆ ಆದ್ಯತೆ ನೀಡಲಾಗುವುದು. ಅಯ್ಕೆಯಾದ ಅತಿಥಿ ಶಿಕ್ಷಕರು / ಉಪನ್ಯಾಸಕರಿಗೆ ಗೌರವ ಸಂಭಾವನೆ ನೀಡಲಾಗುವುದು.
ಆಸಕ್ತರು ತಮ್ಮ ಸ್ವ-ವಿವರವುಳ್ಳ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಶಾಲೆಗಳು / ಕಾಲೇಜಿನಲ್ಲಿ ಪ್ರಾಂಶುಪಾಲರು / ಮುಖೋಪಾದ್ಯಾಯರಿಗೆ ಜೂ. 17 ರೊಳಗೆ ಸಲ್ಲಿಸುವುದು.
*ಹೆಚ್ಚಿನ ಮಾಹಿತಿಗೆ ಪ್ರಾಂಶುಪಾಲರು, ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಪಿ.ಎಸ್.ವಿ ನಗರ, ರಾಮನಗರ ಟೌನ್. ಮೊ.ನಂ. 8880005415. ಪ್ರಾಂಶುಪಾಲರು, ಡಾ|| ಅಬ್ದುಲ್ ಕಲಾಂ ವಸತಿ ಶಾ¯,ೆ ಪಿ.ಎಸ್.ವಿ ನಗರ್, ರಾಮನಗರ ಟೌನ್. ಮೊ.ನಂ. 7829489428. ಪ್ರಾಂಶುಪಾಲರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾಗಡಿ. ಮೊ.ನಂ. 9741555441, ಪ್ರಾಂಶುಪಾಲರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಚನ್ನಪಟ್ಟಣ ಮೊ.ನಂ. 9945152034, ಮುಖೋಪಾದ್ಯಾಯರು ಮೌಲಾನಾ ಅಜಾದ್ ಶಾಲೆ, ರಾಮನಗರ ಟೌನ್. ಮೊ.ನಂ. 9886464696, ಮುಖೋಪಾದ್ಯಾಯರು ಮೌಲಾನಾ ಅಜಾದ್ ಶಾಲೆ, ಚಿಕ್ಕಮುದುವಾಡಿ, ಕನಕಪುರ ತಾ|| ಮೊ.ನಂ. 7829489428, ಮುಖೋಪಾದ್ಯಾಯರು ಮೌಲಾನಾ ಅಜಾದ್ ಶಾಲೆ, ಮಾಗಡಿ. ಮೊ.ನಂ. 9740778589ಗೆ ಸಂಪರ್ಕಿಸುವAತೆ ರಾಮನಗರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*
ಗೋ ರಾ ಶ್ರೀನಿವಾಸ...
ಮೊ,:9845856139.
ಪ್ರತಿಕ್ರಿಯೆಗಳು