ಜೂ. 23ರಂದು ಡಾಕ್ ಅದಾಲತ್
ರಾಮನಗರ, ಜೂ. 17: ಚನ್ನಪಟ್ಟಣದ ಅಂಚೆ ಇಲಾಖೆ ವತಿಯಿಂದ ಜೂ. 23ರಂದು ಬೆಳಿಗ್ಗೆ 11 ಗಂಟೆಗೆ ಚನ್ನಪಟ್ಟಣದ ಅಂಚೆ ವಿಭಾಗೀಯ ಕಚೇರಿಯಲ್ಲಿ ಡಾಕ್ ಅದಾಲತ್ ಅನ್ನು ಏರ್ಪಡಿಸಲಾಗಿದೆ.
ಅಂಚೆ ಇಲಾಖೆಯ ಸೇವೆಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ದೂರುಗಳನ್ನು ಇಲ್ಲಿ ಸಲ್ಲಿಸಬಹುದಾಗಿದೆ. ಜೂ. 21ರೊಳಗೆ ನಿಮ್ಮ ಪೂರ್ಣ ವಿಳಾಸದೊಂದಿಗೆ ಹಾಗೂ ಸೂಕ್ತ ದಾಖಲಾತಿಗಳೊಂದಿಗೆ ಅಂಚೆ ಅಧೀಕ್ಷಕರು, ಚನ್ನಪಟ್ಟಣ ವಿಭಾಗ, ಚನ್ನಪಟ್ಟಣ-562160 ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ ಎಂದು ಚನ್ನಪಟ್ಟಣ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು