Tel: 7676775624 | Mail: info@yellowandred.in

Language: EN KAN

    Follow us :


ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ

Posted date: 28 Jun, 2023

Powered by:     Yellow and Red

ಅನಧಿಕೃತ ಶಾಲೆಗಳಿಗೆ ದಾಖಲಾತಿ ಮಾಡಿಸಬೇಡಿ: ಕ್ಷೇತ್ರ ಶಿಕ್ಷಣಾಧಿಕಾರಿ

ರಾಮನಗರ, ಜೂ. 28:   ಅನುದಾನ ರಹಿತ ಶಾಲೆಗಳು 2023-24ನೇ ಸಾಲಿನಲ್ಲಿ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಪಡೆಯದೇ ಶಾಲೆಗಳನ್ನು ನಡೆಸುತ್ತಿರುವುದು ಕಂಡುಬಂದಿರುತ್ತದೆ, ಆದುದರಿಂದ ಇಂತಹ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡದೇ ಇರಲು ಪೋಷಕರಿಗೆ ತಿಳಿಸಿದೆ.


*ಶಾಲೆಯ ವಿವರ:*

ಮಡಿಲು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ, ಬಿಡದಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಈ ಶಾಲೆಯು ಪೂರ್ವ ಪ್ರಾಥಮಿಕ ಶಾಲೆ (ಎಲ್.ಕೆ.ಜಿ & ಯು.ಕೆ.ಜಿ) ಮಾತ್ರ ಅನುಮತಿ ಪಡೆದಿದ್ದು, ಉಳಿದ ಯಾವುದೇ ತರಗತಿಗಳಿಗೆ ಅನುಮತಿ ಪಡೆದಿರುವುದಿಲ್ಲ. ಡಾಲ್ಫಿನ್ ಇಂಗ್ಲೀಷ್ ಸ್ಕೂಲ್, ನಾಲಬಂದವಾಡಿ ರಾಮನಗರ ಟೌನ್, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಈ ಶಾಲೆಯು ಪೂರ್ವ ಪ್ರಾಥಮಿಕ ಶಾಲೆ (ಎಲ್.ಕೆ.ಜಿ & ಯು.ಕೆ.ಜಿ) ಮತ್ತು 1 ರಿಂದ 5 ತರಗತಿಗಳಿಗೆ ಮಾತ್ರ ಅನುಮತಿ ಪಡೆದಿದ್ದು, ಉಳಿದ ಯಾವುದೇ ತರಗತಿಗಳಿಗೆ ಅನುಮತಿ ಪಡೆದಿರುವುದಿಲ್ಲ. ಸದ್ವಿದ್ಯಾ ಅಕಾಡೆಮಿ ಪಾರ್ ಕ್ರಿಯೇಟಿವ್ ಲರ್ನಿಂಗ್ ಬಿಡದಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ. ಈ ಶಾಲೆಯು ಉಪನಿರ್ದೇಶಕರು (ಆ) ಶಾಲಾ ಶಿಕ್ಷಣ ಇಲಾಖೆ, ರಾಮನಗರ ರವರ ಜ್ಞಾಪನ ಪತ್ರದ ದಿನಾಂಕ: 03-06-2023 ರನ್ವಯ ನೋಂದಣಿ ಮತ್ತು ಮಾನ್ಯತೆಯನ್ನು ಹಿಂಪಡೆದಿರುವುದರಿಂದ ಯಾವುದೇ ತರಗತಿಗಳನ್ನು ನಡೆಸಲು ಅನುಮತಿ ಇಲ್ಲದೇ ಇರುವುದಿರಂದ ಪೋಷಕರು ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ದಾಖಲು ಮಾಡಲು ತಿಳಿಸಿದೆ.


ಆದರೂ ಸಹ ಈ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಿದ್ದಲ್ಲಿ ನೀವೇ ಜವಾಬ್ದಾರರಾಗಿರುತ್ತೀರಿ, ಇಂತಹ ಶಾಲೆಗಳಿಗೆ ದಾಖಲಾತಿ ಮಾಡಿದ್ದಲ್ಲಿ ಇಲಾಖೆಯು ಯಾವುದೇ ಕಾರಣಕ್ಕೂ ಜವಾಬ್ದಾರರಾಗಿರುವುದಿಲ್ಲವೆಂದು ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑