Tel: 7676775624 | Mail: info@yellowandred.in

Language: EN KAN

    Follow us :


ಕನ್ನಮಂಗಲ ಗ್ರಾಮದ ದೇವರ ಕೊಡುಗೆ ಜಮೀನು ವಿವಾದ, ಕೊಂಡವನ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ, ಪ್ರೊ ಡಿವೈಎಸ್ಪಿ ಸ್ನೇಹರಾಜ್ ಭೇಟಿ

Posted date: 14 Jul, 2023

Powered by:     Yellow and Red

ಕನ್ನಮಂಗಲ ಗ್ರಾಮದ ದೇವರ ಕೊಡುಗೆ ಜಮೀನು ವಿವಾದ, ಕೊಂಡವನ ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ, ಪ್ರೊ ಡಿವೈಎಸ್ಪಿ ಸ್ನೇಹರಾಜ್ ಭೇಟಿ

ಚನ್ನಪಟ್ಟಣ: ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿರುವ ಮಾಧವರಾಯ ಸ್ವಾಮಿ ದೇವಾಲಯದ ಅರ್ಚಕರಿಗೆ ದೇವರ ಕೊಡುಗೆ ಜಮೀನು ಎಂದು ಸರ್ವೇ ನಂಬರ್ 133/1, & 134/2 ರಲ್ಲಿ ಆರು ಎಕರೆ ಇಪ್ಪತ್ತೈದು ಗುಂಟೆ ಜಮೀನನ್ನು ನೀಡಲಾಗಿದ್ದು, ಇತ್ತೀಚೆಗೆ ಅರ್ಚಕರು ಆ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಅದನ್ನು ವಿರೋಧಿಸಿ, ಗ್ರಾಮಸ್ಥರು ಜೆಎಂಎಫ್ಸಿ ನ್ಯಾಯಾಲಯದ ಮೊರೆ ಹೋಗಿದ್ದು, ಆ ಜಮೀನು ಅ ಕೊಂಡವರ ಪರವಾಗಿ ನ್ಯಾಯಾಲಯ ತೀರ್ಪಿತ್ತಿತ್ತು.


ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದು, ಅಲ್ಲಿ ಅವರ ಅರ್ಜಿ ವಜಾಗೊಂಡಿರುವುದಾಗಿ ಮಾಹಿತಿ ಇದೆ. ಇದರ ಮಧ್ಯೆ ಜೆಎಂಎಫ್ಸಿ ನ್ಯಾಯಾಲಯವು ಜಮೀನು ಮಾಲೀಕರಿಗೆ ಯಾರೂ ತೊಂದರೆ ನೀಡಬಾರದು, ಒಂದು ವೇಳೆ ತೊಂದರೆ ನೀಡಿದರೆ ಪೋಲೀಸರು ಅವರಿಗೆ ರಕ್ಷಣೆ ನೀಡಬೇಕೆಂದು ಆದೇಶ ನೀಡಿತ್ತು.


ಇಂದು ಜಮೀನು ಮಾಲೀಕರು ಬಂದು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವ ಸಂದರ್ಭದಲ್ಲಿ ಗ್ರಾಮಸ್ಥರು ತಡೆಹಿಡಿದು ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಮಾಲೀಕರು ಪೋಲೀಸರಿಗೆ ಮಾಹಿತಿ ನೀಡಿದ್ದು, ಎಂ ಕೆ ದೊಡ್ಡಿ ಪೋಲಿಸ್ ಠಾಣೆಯ ಪ್ರೊಬೆಷನರಿ ಡಿವೈಎಸ್ಪಿ ಸ್ನೇಹರಾಜ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ, ಪ್ರಕರಣದ ಸತ್ಯಾಸತ್ಯತೆಯನ್ನು ಗ್ರಾಮಸ್ಥರಿಗೆ ತಿಳಿ ಹೇಳಿ ಸಮಾಧಾನಿಸಿದ್ದಾರೆ. ಆದರೆ ಗ್ರಾಮಸ್ಥರು ಹೈಕೋರ್ಟ್ ನಲ್ಲಿ ಕೇಸು ಇದ್ದು, ಇತ್ಯರ್ಥ ಆಗುವವರೆಗೂ ಯಥಾಸ್ಥಿತಿ ಕಾಪಾಡಬೇಕೆಂದು ಪೋಲೀಸರಿಗೆ ಮನವಿ ಮಾಡಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿದ ಸ್ನೇಹರಾಜ್ ರವರು ನೀವು ಹೂಡಿರುವ ದಾವೆಗೆ ಸಂಬಂಧಿಸಿದಂತೆ, ತಡೆಯಾಜ್ಞೆ ಇದ್ದರೆ ನಾವು ಯಥಾಸ್ಥಿತಿ ಕಾಪಾಡುತ್ತೇವೆ. ಆದರೆ ಸದ್ಯಕ್ಕೆ ಆದೇಶ ಮಾಲೀಕರ ಪರವಾಗಿ ಇರುವುದರಿಂದ ಹಾಗೂ ನ್ಯಾಯಾಲಯವು ಅವರಿಗೆ ರಕ್ಷಣೆ ನೀಡಲು ಸೂಚಿಸಿರುವುದರಿಂದ ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑