Tel: 7676775624 | Mail: info@yellowandred.in

Language: EN KAN

    Follow us :


ಸೇವೆಯ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ನಿವೃತ್ತ ಶಿಕ್ಷಕ ವಸಂತ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಪ್ರೊ. ಜಯಪ್ರಕಾಶ್ ಗೌಡ ಅಭಿಮತ

Posted date: 24 Jul, 2023

Powered by:     Yellow and Red

ಸೇವೆಯ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಿ ನಿವೃತ್ತ ಶಿಕ್ಷಕ ವಸಂತ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ  ಪ್ರೊ. ಜಯಪ್ರಕಾಶ್ ಗೌಡ ಅಭಿಮತ

ಚನ್ನಪಟ್ಟಣ: ಜನ ಮೆಚ್ಚುವಂತಹ ಹಾಗೂ ಶಾಶ್ವತವಾಗಿ ಉಳಿಯುವಂತಹ ಒಳ್ಳೆಯ ಸೇವಾ ಕೆಲಸಗಳನ್ನು ಮಾಡಿ ನಮ್ಮ ಜೀವನವನ್ನು   ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ತಿಳಿಸಿದರು. ಅವರು ಪಟ್ಟಣದ ಶತಮಾನೋತ್ಸವ ಭವನದಲ್ಲಿ ಭಾನುವಾರ ಬೊಂಬೆ ನಗರಿಯ ವಿಶ್ರಾಂತ ಅಧ್ಯಾಪಕ ಸಂಘ ಸಂಸ್ಥೆಗಳ ಸೇವಾಕರ್ತ ವಸಂತ್ ಕುಮಾರ್ 60 ರ ಅಭಿನಂದನೆ ಮತ್ತು ಗ್ರಂಥ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ  ಹಣತೆ ಎಂಬ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.


ಮನುಷ್ಯ ಹುಟ್ಟು, ಸಾವಿನ ನಡುವೆ ಸನ್ಮಾರ್ಗದಲ್ಲಿ ನಡೆದು, ಸಾಮಾಜಿಕ ಚಿಂತನೆಗಳಿಗೆ  ಬದುಕನ್ನು ಮೀಸಲಿಡುವ ಮೂಲಕ ಸಾರ್ಥಕತೆ ಕಾಣಬೇಕು ,ಅಂತೆಯೇ 

ವಸಂತ್ ಕುಮಾರ್ ರವರು  ಶಿಕ್ಷಕ ವೃತ್ತಿಯನ್ನು ಹಾಗೂ ಸಾಮಾಜಿಕ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ 60 ವಸಂತಗಳನ್ನು ಪೂರೈಸಿದ್ದಾರೆ , ಕಳೆದ ಮೂರು ದಶಕಗಳಿಂದ ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ, ಶಿಕ್ಷಕರಾಗಿ  ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಇಂತಹ ಸಮಾಜಮುಖಿ ವ್ಯಕ್ತಿಗೆ ಅಭಿನಂದಿಸಿ, ಗ್ರಂಥ ಹೊರ ತರುತ್ತಿರುವುದು ನಿಜಕ್ಕೂ ಶ್ಲಾಘನೀಯ  ವಿಚಾರವಾಗಿದೆ ಎಂದರು.


 ವಸಂತ್ ಕುಮಾರ್ ರವರನ್ನು ಅಭಿನಂದಿಸಿ ಮಾತನಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಪ್ರತಿಯೊಬ್ಬ ವ್ಯಕ್ತಿಯು ಈ ಭೂಮಿ ಮೇಲೆ ಯಾವುದಾದರೂ ಮಹತ್ವಕಾಂಕ್ಷೆಯನ್ನು ಈಡೇರಿಸುವ ಸಲುವಾಗಿ  ಸಕಾರಣದಿಂದ ಜನಿಸಿರುತ್ತಾನೆ, ಹುಟ್ಟಿದ ಮೇಲೆ ನಾಲ್ಕಾರು ಜನರಿಗೆ ಒಳ್ಳೆಯ ಕೆಲಸ ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಸಮಾಜ ಹಾಗೂ  ದೇಶದ ಬಗ್ಗೆ ನಿಷ್ಠೆ ಮತ್ತು  ಗೌರವ ಹೊಂದಿರಬೇಕು. ವಸಂತ್ ಕುಮಾರ್ ರವರು ಜೀವನದ ಸಾರವನ್ನು ಅರ್ಥೈಸಿಕೊಂಡು ವೃತ್ತಿಯ ಜೊತೆ ಜೊತೆಗೆ ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳನ್ನು ಮಾಡುವ ಮೂಲಕ  ಜನ್ಮ ಭೂಮಿಯ ಋಣವನ್ನು ತೀರಿಸುವ ಕೆಲಸ ಮಾಡಿದ್ದಾರೆ. ನಿವೃತ್ತಿ ನಂತರದ ಮುಂದಿನ ದಿನಗಳಲ್ಲಿಯೂ ಅವರ ಸಮಾಜ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.


ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ  ಪ್ರತಿಯೊಬ್ಬ ವ್ಯಕ್ತಿಗೂ ಸಾಮಾಜಿಕ ತುಡಿತ ಇರುವುದು ಅಗತ್ಯ, ನನಗಾಗಿ ಬದುಕುವುದಕ್ಕಿಂತ ನಮಗಾಗಿ ಬದುಕಿದಾಗ ಮಾತ್ರ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ.   ಸಮಾಜದ ಮೇಲಿನ ಕಾಳಜಿ ಮತ್ತು ಸೇವಾ ಮನೋಭಾವನೆಯನ್ನು ರೂಡಿಸಿಕೊಂಡು 60 ವಸಂತಗಳನ್ನು ಪೂರೈಸಿರುವ ವಸಂತ್ ಕುಮಾರ್ ರವರು ಸಮಾಜ ನೆನಪಿಸಿಕೊಳ್ಳುವ  ರೀತಿಯಲ್ಲಿ ಬದುಕಿದ್ದಾರೆ ಎಂದರು .


ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ತೌಟನಹಳ್ಳಿ ಪುಟ್ಟಸ್ವಾಮಿ ಮಾತನಾಡಿ ಭೂಮಿಯ ಮೇಲಿನ ಸಂತರು ಮನುಷ್ಯನನ್ನು ಮೊದಲು  ಮನುಷ್ಯನಾಗಿ ಬದುಕು ಎಂದು ಹೇಳಿದ್ದಾರೆ. ಆದರೆ ಈಗ ಉತ್ತಮ ಮನುಷ್ಯನಾಗಿ ಬದುಕುವುದೇ ಕಷ್ಟವಾಗಿದೆ. ಮನುಷ್ಯನಾಗಿ ಬದುಕುವುದೇ ಅತ್ಯಂತ ಮುಖ್ಯವಾದುದು. ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ಆಚರಣೆಯಲ್ಲಿ ಮಾನವನಾಗಲು ಪ್ರಯತ್ನಿಸಬೇಕು, ವಸಂತ್ ಕುಮಾರ್ ರವರು ಒಬ್ಬ ಮನುಷ್ಯನಾಗಿ ಬದುಕಿ ಜೀವನದ ಸಾರ್ಥಕತೆ ಕಂಡಿದ್ದಾರೆ ಎಂದರು.


ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷ ರಾಮಲಿಂಗೇಶ್ವರ (ಸಿಸಿರಾ) ಪ್ರಸ್ತಾವಿಕವಾಗಿ ಮಾತನಾಡಿದರು. ಅಭಿನಂದನಾ ಸಮಿತಿ ವತಿಯಿಂದ ವಸಂತ್ ಕುಮಾರ್ ರವರಿಗೆ ಹೃತ್ಪೂರ್ವಕವಾಗಿ ಅಭಿನಂದಿಸಲಾಯಿತು. ಸಮಗ್ರ  ಶಿಕ್ಷಣ ಕರ್ನಾಟಕದ ನಿರ್ದೇಶಕ ಎಂ. ಪಿ. ಮಾದೇಗೌಡ  ಸು.ತ. ರಾಮೇಗೌಡ ಶಿಕ್ಷಣಾಧಿಕಾರಿ ಶಿವಪ್ಪ ,ಡಿ ಪುಟ್ಟಸ್ವಾಮಿ (ಡಿಪಿಎಸ್ ), ಪ್ರಾಂಶುಪಾಲ ಡಾ.ವೆಂಕಟೇಶ್ , ಭಾ.ವಿ.ಪ. ಅಧ್ಯಕ್ಷ  ಗುರುಮಾದಯ್ಯ, ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ, ಬೆಸ್ಕಾಂ ಶಿವಲಿಂಗಯ್ಯ ವಿ. ಟಿ. ರಮೇಶ್, ರವಿಕುಮಾರ್ ಗೌಡ, ಆರ್. ಶೇಖರ್, ಡಾ. ಎಚ್ .ಕೃಷ್ಣೇಗೌಡ, ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವಿ. ಗಿರೀಶ್ ,ಬಿ.ಎನ್. ಕಾಡಯ್ಯ, ತಿಪ್ರೇಗೌಡ, ಯೋಗಾನಂದ, ಚಕ್ಕೆರೆ ವಿಜೇಂದ್ರ, ಗೋವಿಂದಯ್ಯ, ಜಿ.ಕೆ. ರಂಗನಾಥ್, ಸತ್ಯನಾರಾಯಣ, ಬಿ.ವಿ. ಜಯರಾಮೇಗೌಡ ,ವಿ.ಸಿ. ಚಂದ್ರೇಗೌಡ ,ಬೈ.ಪು. ಪ್ರಭುಸ್ವಾಮಿ, ಟಿ. ಚನ್ನಪ್ಪ , ಶಿವರಾಮ ಭಂಡಾರಿ , ಯು.ಸಿ.ಪ್ರವೀಣ್ ಕುಮಾರ್ ,ಡಾ. ಪವನ್ ಕುಮಾರ್, ಕೃಷ್ಣಮ್ಮ  ಸೋಮರಾಜು, ಡಾ. ರಾಜಶ್ರೀ .ಮಮತಾ ಲಕ್ಷ್ಮಣ್ ಗೌಡ , ಎಸ್ .ಪೂರ್ಣಿಮಾ, ಕುಸುಮಲತಾ ,ಪಾರ್ವತಮ್ಮ ಶಿವಪ್ಪ, ರೇಷ್ಮಾ, ರಾಧಿಕಾ ರವಿಕುಮಾರ್ ಗೌಡ   , ಶೈಲಜಾಶಿವಾನಂದ, ಪದ್ಮಾವತಿ ಮುತ್ತುರಾಜು , ,ಡಾ. ಸ್ಪೂರ್ತಿ , ಆಶಾಲತಾ ,ಚಂದ್ರಿಕಾ, ಪ್ರಮೀಳಾ ನಾಗರಾಜು, ಮೊದಲಾದವರು ಉಪಸ್ಥಿತರಿದ್ದರು .ಭಾರತ ವಿಕಾಸ್ ಪರಿಷತ್ ಕಣ್ವ ಶಾಖೆ ಮಹಿಳಾ ತಂಡದಿಂದ ಗೀತಕಾಯನ ಕಾರ್ಯಕ್ರಮ ನಡೆಯಿತು, ರಂಗಭೂಮಿ ಕಲಾವಿದರಿಂದ ರಂಗಗೀತೆ ಕಾರ್ಯಕ್ರಮ ನಡೆಯಿತು . ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಸಂತ್ ಕುುಮಾರ್ ರವರನ್ನು   ಸನ್ಮಾನಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑