ದೊಡ್ಡಮಳೂರು ಗ್ರಾಮದಲ್ಲಿ ದೀರ್ಘಾಯು ವೆಲ್ ನೆಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ಶಿಬಿರ

ಚನ್ನಪಟ್ಟಣ: ತಾಲ್ಲೂಕಿನ ದೊಡ್ಡಮಳೂರು ಗ್ರಾಮದ ದೇವಸ್ಥಾನದ ಬೀದಿಯಲ್ಲಿರುವ ದೀರ್ಘಾಯು ವೆಲ್ ನೆಸ್ ಸೆಂಟರ್ ಇವರ ವತಿಯಿಂದ ನಾಳೆ (ಭಾನುವಾರ) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಆಯುರ್ವೇದ ಉಚಿತ ಆರೋಗ್ಯ ಶಿಬಿರವನ್ನು ಏರ್ಪಾಡಿಸಲಾಗಿದೆ, ಇದರ ಸದುಪಯೋಗವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಲು ಆಯುರ್ವೇದ ಮುಖ್ಯ ವೈದ್ಯೆ ಸಹನಾ ಕೃಷ್ಣ ತಿಳಿಸಿದ್ದಾರೆ.
ಜೈ ಶ್ರೀ ಕೃಷ್ಣ ಚಾರಿಟಬಲ್ ಟ್ರಸ್ಟ್ರ್ ರಿ. ಮತ್ತು ರೋಟರಿ ಸಂಸ್ಥೆ ಚನ್ನಪಟ್ಟಣ ಇವರ ಸಹಯೋಗದಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ದೊಡ್ಡಮಳೂರಿನ ದಿವ್ಯಶಾಂತಿ ಕುಟೀರ ದೇವಸ್ಥಾನದ ಬೀದಿಯಲ್ಲಿ ಆಯೋಜಿಸಲಾಗಿದೆ.
ಮಧುಮೇಹ, ಬಿಪಿ, ಗ್ಯಾಸ್ಟ್ರಿಕ್, ಮಂಡಿನೋವು, ಬೆನ್ನು ನೋವು, ಕೀಲು ನೋವು, ಮೂಲವ್ಯಾಧಿ, ಚರ್ಮರೋಗ, ಬೊಜ್ಜು, ಥೈರಾಯ್ಡ್, ರಕ್ತ ಹೀನತೆ, ಸ್ತ್ರೀರೋಗ, ಕೆಮ್ಮು, ನೆಗಡಿ, ಅಸ್ತಮಾ, ಕಣ್ಣು, ಕಿವಿ, ಮೂಗು ಹಾಗೂ ಗಂಟಲಿಗೆ ಸಂಬಂಧಿಸಿದ ರೋಗಗಳು, ಸಾಮಾನ್ಯ ತೊಂದರೆಗಳಿಗೆ ತಪಾಸಣೆ ಮಾಡಿ ಸೂಕ್ತ ಸಲಹೆ ಹಾಗೂ ಔಷಧಿಗಳನ್ನ ಉಚಿತವಾಗಿ ನೀಡಲಾಗುತ್ತದೆ.
ಇನ್ನು ಇದರ ಜೊತೆಗೆ ಉಚಿತವಾಗಿ ಬಿಪಿ ಶುಗರ್ ಲೆವೆಲ್ ಟೆಸ್ಟಿಂಗ್, ದೃಷ್ಟಿ ಐ ಹಾಸ್ಪಿಟಲ್ ವತಿಯಿಂದ ಕಣ್ಣಿನ ತಪಾಸಣೆ ಹಾಗೂ ಜೀವಾಮೃತ ಬ್ಲಡ್ ಬ್ಯಾಂಕ್ ವತಿಯಿಂದ ಬ್ಲಡ್ ಡೊನೆಷನ್ , ಚಂದ್ರು ಡಯೊಗ್ನೋಸ್ಟಿಕ್ ವತಿಯಿಂದ ಕ್ಯಾಂಪಿನ ರೋಗಿಗಳಿಗೆ ಬೇಕಾದಂತಹ ಇನ್ವೆಸ್ಟಿಗೇಷನ್ ಮೇಲೆ ರಿಯಾಯಿತಿ ಸಹ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು