ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಮಾರಮ್ಮನ ಹಬ್ಬ

ಚನ್ನಪಟ್ಟಣ: ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹುಚ್ಚಯ್ಯನದೊಡ್ಡಿ ಗ್ರಾಮದಲ್ಲಿ ಮಂಗಳವಾರ ಮಾರಮ್ಮನ ಹಬ್ಬ ಭಕ್ತಿಭಾವದಿಂದ ನೆರವೇರಿತು.
ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರು ಮಡಿಯುಟ್ಟು ತಂಬಿಟ್ಟಿನ ಆರತಿಯನ್ನು ಇಟ್ಟು ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ಪ್ರತಿವರ್ಷ ಮಾರಮ್ಮನ ಹಬ್ಬ ಆಚರಣೆ ಮಾಡುತ್ತಿದ್ದು, ಈ ವರ್ಷ ಉತ್ತಮವಾಗಿ ಮಳೆ ಬೆಳೆಯಾಗಿ ರೈತನ ಬದುಕು ಹಸನಾಗಲಿ ಎಂದು ಎಲ್ಲರೂ ಪ್ರಾರ್ಥಿಸಿದರು.
ಇದಕ್ಕೂ ಮೊದಲು ರಾತ್ರಿ ಗ್ರಾಮದಲ್ಲಿ ಗ್ರಾಮದ ಅದಿದೇವತೆಗಳಾದ ಮಹದೇಶ್ವರ, ಮುನೇಶ್ವರ ಹಾಗೂ ಹುಣಸನಹಳ್ಳಿಯ ಬಿಸಿಲೇಶ್ವರಿ ದೇವಿಯ ಮೆರವಣಿಗೆ ನಡೆಸಲಾಯಿತು. ಗ್ರಾಮಸ್ಥರು ಮೂರು ದೇವತೆಗಳಿಗೆ ಆರತಿ ಬೆಳಗಿದರು. ಹಬ್ಬದ ಪ್ರಯುಕ್ತ ಪಟಾಕಿ ಸಡಿಸಿ ಸಂಭ್ರಮಿಸಲಾಯಿತು.
ಗ್ರಾಮದ ಮುಖಂಡರಾದ ಎಂ.ಪುಟ್ಟೇಗೌಡ, ಎಂ.ರಾಮಕೃಷ್ಣ, ನಿಂಗೇಗೌಡ, ಎಚ್.ಎಸ್. ಬೋರೇಗೌಡ, ಪುಟ್ಟಣ್ಣ, ಮೂಗಣ್ಣ, ಚನ್ನಂಕೇಗೌಡರ ರಾಮಣ್ಣ, ನಾಗರಾಜು, ಯುವಕರಾದ ರಾಘವೇಂದ್ರ, ಸುನೀಲ್, ರಕ್ಷಿತ್, ಕೀರ್ತಿ, ಮಂಜುನಾಥ್, ಮಂಜೇಶ, ಇತರರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು