ಸಾರ್ವಜನಿಕರನ್ನು ಕಛೇರಿಗೆ ಅಲೆದಾಡಿಸುವುದನ್ನು ಸರಿಯಲ್ಲಾ, ಡಿ ಕೆ ಸುರೇಶ್

ಚನ್ನಪಟ್ಟಣ: ತಮ್ಮ ಕೆಲಸ ಕಾರ್ಯಗಳಿಗಾಗಿ ಜನರನ್ನು ಅಧಿಕಾರಿಗಳು ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ.. ಅಧಿಕಾರಿಗಳು ಈ ಹಿಂದೆ ಯಾವ ರೀತಿ ಕೆಲಸ ಮಾಡಿದರೋ ಗೊತ್ತಿಲ್ಲ, ಆದರೆ, ಇನ್ನು ಮುಂದೆ ಜನರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಿ ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಜನರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಆಲಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಗ್ರಾಮ ಪಂಚಾಯಿತಿಗಳೇ ಸ್ಥಳೀಯ ಸರ್ಕಾರವಾಗಿದ್ದು, ಜನರ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಪಂಚಾಯಿತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತನ್ನದೇ ಆದ ಶಕ್ತಿ ನೀಡಿದೆ. ಏನೇ ಕೆಲಸ ಆಗಬೇಕಾದರೂ ಪಂಚಾಯೀತಿಯಿಂದಲೇ ಆಗಬೇಕು. ಮೊದಲು ಪಂಚಾಯಿತಿ ಅಂದರೆ ಲೈಟ್ ನೀರಿಗೆ ಕಾಸಿಲ್ಲ ಎಂಬ ವಾತಾವರಣ ಇತ್ತು. ಆದರೆ ಇಂದು ಸುಮಾರು ೫೦ ಲಕ್ಷ ಅನುದಾನ ಸಿಗುತ್ತಿದೆ. ಜತೆಗೆ ಕಂದಾಯ ಇತರೆ ಆಧಾಯ ಮೂಲ ಬಳಸಿಕೊಂಡು ಕಾರ್ಯಕ್ರಮ ರೂಪಿಬಹುದಾಗಿದೆ ಎಂದು ತಿಳಿಸಿದರು.
*ನಮ್ಮದು ನುಡಿದಂತೆ ನಡೆಯುವ ಸರ್ಕಾರವಾಗಿದೆ.* ಚುನಾವಣಾ ಪೂರ್ವದಲ್ಲಿ ನೀಡಿದ್ದ ೫ ಗ್ಯಾರೆಂಟಿಗಳಲ್ಲಿ ೪ ಗ್ಯಾರೆಂಟಿಗಳನ್ನು ಜಾರಿಗೆ ತರಲಾಗಿದೆ. ಸರ್ಕಾರ ನೀಡಿದ ವಾಗ್ದಾನ ನೀಡಿದಂತೆ ನಡೆದುಕೊಂಡಿದೆ. ೫ ಗ್ಯಾರೆಂಟಿಯಾದ ನಿರುದ್ಯೋಗಿ ಪದವಿಧರರಿಗಾಗಿ ಘೋಷಿಸಿದ್ದ ಯುವನಿಧಿ ಯೋಜನೆ ರೂಪುರೇಷೆಗಳ ತಯಾರಿ ಸಹ ನಡೆದಿದ್ದು, ಡಿಸೆಂಬರ್ ಅಥವಾ ಜನವರಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ರಾಜ್ಯದಲ್ಲಿ ೧.೨೮ ಕೋಟಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದು, ಎಲ್ಲರಿಗೂ ಹಣ ನೀಡುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಗೃಹ ಲಕ್ಷ್ಮಿ ಯೋಜನೆಯಲ್ಲಿ ಜಿಲ್ಲೆಗೆ ೩೯ ಕೋಟಿ ರೂ. ಹಣ ಬಿಡುಗಡೆಯಾಗಿದೆ.
ಎಲ್ಲರಿಗೂ ಆಹಾರ ಭದ್ರತೆ ಕಲ್ಪಿಸಬೇಕೆಂಬ ಈಗ ೧೦ ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಜನರಿಗೆ ಆಹಾರಭದ್ರತೆ ಒದಗಿಸಲು ನಾವು ಹಣ ನೀಡುತ್ತೇವೆ ಹೆಚ್ಚುವರಿ ಅಕ್ಕಿ ನೀಡಿ ಎಂದರೂ ಕೇಂದ್ರ ಸರ್ಕಾರ ಅಕ್ಕಿ ನೀಡಲಿಲ್ಲ. ಆದರೂ ಕಾಂಗ್ರೆಸ್ ಗ್ಯಾರೆಂಟಿಯಂತೆ ಪಡಿತರ ಕುಟುಂಬದ ಒಬ್ಬ ವ್ಯಕ್ತಿಗೆ ೫ ಕೆ.ಜಿ. ಅಕ್ಕಿ ಬದಲಿಗೆ ೧೭೦ ರೂ. ನಂತೆ ನೀಡಲಾಗುತ್ತದೆ ಎಂದರು.
ಕಾಂಗ್ರೆಸ್ ಇದ್ದಾಗ ಆಹಾರದ ಮೇಲೆ ಜಿಎಸ್ಟಿ ಇರಲಿಲ್ಲ. ಆದರೆ ಇಂದು ಎಲ್ಲ ವಸ್ತುಗಳ ಮೇಲೆ ಜಿಎಸ್ಟಿ ಹೇರಲಾಗಿದೆ. ಇಂಥ ಹೊತ್ತಿನಲ್ಲಿ ನಿಮಗೆ ನೆರವಾಗಲು ಕಾಂಗ್ರೆಸ್ ಪಂಚ ಗ್ಯಾರೆಂಟಿಗಳನ್ನು ನೀಡಿದೆ. ಅದರೆ ಕಾಂಗ್ರೆಸ್ ಯಶಸ್ಸನ್ನು ಸಹಿಸದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ವಿರೋಧಿಗಳು ನಾವು ಸೋತಿದ್ದೇವೆ ಅವರು ಕೆಲಸ ಮಾಡಲಿ ಎಂದು ಬಿಡುತ್ತಿಲ್ಲ ಎಂದು ಕಿಡಿಕಾರಿದರು.
*ಶೀಘ್ರದಲ್ಲೇ ನಿವೇಶನ:*
ಹೋದ ಕಡೆಯಲ್ಲೆಲ್ಲಾ ಜನ ನಿವೇಶನ ಇಲ್ಲ ಅಂತ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ಭೂಮಿ ಇರುವ ಕಡೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಎಲ್ಲರಿಗೂ ಇ-ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಇ-ಖಾತೆಗೆ ಯಾರೂ ಹಣ ನೀಡಬೇಡಿ. ಎಲ್ಲ ಸಮಸ್ಯೆಗೆ ಬೇಗ ಇತಿಶ್ರೀ ಹಾಡಲಾಗುದು ಎಂದು ಭರವಸೆ ನೀಡಿದರು. ಜಿಲ್ಲೆಯ ಎಲ್ಲ ಜಮೀನು ಪೋಡಿ ಮಾಡಿ ಪಿ ನಂಬರ್ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜನಸಂಪರ್ಕ ಸಭೆಯಲ್ಲಿ ನೀರು, ಚರಂಡಿ, ರಸ್ತೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಿದ್ದು ಸ್ಥಳೀಯವಾಗಿ ಬಗೆಹರಿಯುವಂತವುಗಳನ್ನು ಇಲ್ಲೇ, ಜಿಲ್ಲಾಮಟ್ಟದಲ್ಲಿ ಪರಿಹಾರವಾಗುವಂತಹವುಗಳನ್ನು ಜಿಲ್ಲಾಮಟ್ಟದಲ್ಲಿ, ಸರ್ಕಾರದ ಮಟ್ಟದಲ್ಲಿ ಪರಿಹಾರವಾಗುವ ಸಮಸ್ಯೆಯನ್ನು ಸರ್ಕಾರದ ಮಟ್ಟದಲ್ಲಿ ಪರಿಹರಿಸಲಾಗುವುದು ಎಂದರು.
ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್ಕುಮಾರ್, ಮುಖಂಡರಾದ ದುಂತೂರು ವಿಶ್ವನಾಥ್, ಬೋರ್ವೆಲ್ ರಂಗನಾಥ್, ತಾಪಂ ಇಓ ಶಿವಕುಮಾರ್ ಇತರರು ಇದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು