ಮನೆ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಬಂದ ವಿಚಿತ್ರ ದೂರು.!

ಸಕ್ಕರೆನಾಡು ಮಂಡ್ಯದಲೊಂದು ವಿಚಿತ್ರ ದೂರು ಪ್ರಕರಣ.!!
ಬೆಲೆಬಾಳುವ ವಸ್ತುಗಳು ಕಳವು ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡುವುದು ಸಹಜ.
ಆದರೆ ಇಲ್ಲೊಬ್ಬ ಮನೆ ಕಳವಾಗಿದೆ ಹುಡುಕಿಕೊಡಿ ಎಂದು ಪೊಲೀಸರಿಗೆ ದೂರು ಕೊಟ್ಟ ಆಸಾಮಿ.
ಹಳೆ ಬೂದನೂರು ಗ್ರಾಮದಲ್ಲಿ ನನ್ನ ಮಾವನ ಮನೆ ಕಳುವಾಗಿದೆ ಎಂದು ದೂರು ನೀಡಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳ ಜೊತೆಗೆ ಇದೀಗ ಪೋಲಿಸರನ್ನು ಪೇಚಿಗೆ ಸಿಲುಕಿಸಿದ್ದಾನೆ.
*ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿ ಸಂಚಾಲಕ ಬಿ.ಕೆ.ಸತೀಶ್ ಎಂಬ ವ್ಯಕ್ತಿಯಿಂದ ಈ ವಿಚಿತ್ರ ದೂರು ದಾಖಲಾಗಿದೆ.*
ಎಸ್ಪಿ ಕಚೇರಿಯಲ್ಲಿ ಎಎಸ್.ಪಿ ತಿಮ್ಮಯ್ಯ ಅವರಿಗೆ ದೂರು ನೀಡಿದ ವ್ಯಕ್ತಿಯಾಗಿದ್ದಾನೆ.
*ಬೂದನೂರು ಗ್ರಾ.ಪಂ. ಖಾತೆ ಸಂಖ್ಯೆ 291/288 ರಲ್ಲಿ ಬಿ.ಟಿ.ಸಿದ್ದರಾಮಯ್ಯ ಬಿನ್ ತಮ್ಮೇಗೌಡ ಅವರ ಮನೆ ಇತ್ತು.*
ಆ ಜಾಗಕ್ಕೆ ಹೋಗಿ ನೋಡಿದಾಗ ಅಲ್ಲಿ ಮನೆ ಇರಲಿಲ್ಲ. ಖಾಲಿ ನಿವೇಶನ ಮಾತ್ರ ಇತ್ತು.
*ಗ್ರಾಮ ಪಂಚಾಯತಿಗೆ ತೆರಳಿ ವಿಚಾರಿಸಿ ದಾಖಲೆ ಕೇಳಿದಾಗ ಅದರಲ್ಲಿ ಮನೆ ಇದೆ ಎಂದು ದಾಖಲೆ ನೀಡಿದ್ದಾರೆ.*
ಮನೆ ಇಲ್ಲದ ಬಗ್ಗೆ ವಾಸ್ತವವಾಗಿ ಮನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ಅಗಲೀಕರಣಕ್ಕಾಗಿ ಮನೆ ತೆರವುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
*ಈ ಮನೆಯನ್ನು ಮಕ್ಕಳಿಲ್ಲದೆ ಮಾವ ನನಗೆ ಉಡುಗೊರೆ ನೀಡುತ್ತೇನೆ ಎಂದಿದ್ದರು.*
ಇದೀಗ ಮಾವ ಅಮೆರಿಕಾಕ್ಕೆ ಹೋಗಿ ನೆಲೆಸಿದ್ದಾರೆ ದೂರವಾಣಿ ಸಂಪರ್ಕ ಸಿಗುತ್ತಿಲ್ಲ.
*ಗ್ರಾಮ ಪಂಚಾಯತಿ ಮನೆ ತೆರವುಗೊಳಿಸಿದ್ದರೂ ದಾಖಲೆ ಇಟ್ಟಿದ್ದಾರೆ.*
ಈ ಕುರಿತು ಮಾಹಿತಿ ಕೇಳಿದಾಗ ಇಲ್ಲ ಎಂದು ಮೌಖಿಕ ಮಾಹಿತಿ ನೀಡಿದ್ದಾರೆ.
*ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ಹಾಗೂ ಗ್ರಾ.ಪಂ. ಪಿಡಿಓ ಈ ಕೃತ್ಯಕ್ಕೆ ಕಾರಣವಾಗಿದೆ.*
ಮನೆ ಕಳವು ಮಾಡಿರುವ ಬಗ್ಗೆ ಏನು ಕ್ರಮ ವಹಿಸಿದ್ದಾರೆ ಎಂಬ ಮಾಹಿತಿಗಾಗಿ ದೂರು ನೀಡಲಾಗಿದೆ.
*ತನಿಖೆ ನಡೆಸಿ ನಮಗೆ ನ್ಯಾಯಕೊಡಿಸಿ ಎಂದು ಸತೀಶ್ ರವರು ಪೋಲಿಸರಿಗೆ ಮನವಿ ಮಾಡಿರುವ ವ್ಯಕ್ತಿಯಾಗಿದ್ದಾರೆ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು