Tel: 7676775624 | Mail: info@yellowandred.in

Language: EN KAN

    Follow us :


ಸಮಾಜ ಸೇವಕ ಕೆ ಜಿ ಕೃಷ್ಣ ಪರ, ಉನ್ನತ ಪೋಲಿಸ್ ಅಧಿಕಾರಿಗಳ ವಿರುದ್ದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Posted date: 23 Sep, 2023

Powered by:     Yellow and Red

ಸಮಾಜ ಸೇವಕ ಕೆ ಜಿ ಕೃಷ್ಣ ಪರ, ಉನ್ನತ ಪೋಲಿಸ್ ಅಧಿಕಾರಿಗಳ ವಿರುದ್ದ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಚನ್ನಪಟ್ಟಣ: ಮೂಲತಃ ಹುಲಿಯೂರುದುರ್ಗದ ಸಮಾಜ ಸೇವಕ, ದಾನಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಕೆ ಜಿ ಕೃಷ್ಣ ರವರಿಗೆ ಉನ್ನತ ಪೋಲೀಸ್ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಹಲವಾರು ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದರು.


ಪೊಲೀಸ್ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿರುವ ರವಿಕಾಂತೇಗೌಡ ಹಾಗೂ ಮತ್ತೋರ್ವ ಅಧಿಕಾರಿಯಾದ ಯು.ಡಿ.ಕೃಷ್ಣಕುಮಾರ್ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಸಾವಿರಾರು ಸಂಘಟನಕಾರರು ಪಟ್ಟಣದ ಗಾಂಧಿ ಭವನದಿಂದ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿ ಮಹೇಂದ್ರ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ಕೂಡಲೆ ಅವರನ್ನು ಹುದ್ದೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ರಾಜ್ಯಾಪಾಲರು. ಮುಖ್ಯಮಂತ್ರಿಗಳು. ಹಾಗೂ ಗೃಹ ಸಚಿವರಿಗೆ ಅಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.


ಉದ್ಯಮಿ. ಸಮಾಜ ಸೇವಕ ಕೆ.ಜಿ.ಕೃಷ್ಣ ವಿರುದ್ದ ಇಲ್ಲ ಸಲ್ಲದ ಅರೋಪ ಮಾಡುವ ಮೂಲಕ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕೆ.ಜಿ.ಕೃಷ್ಣ ವಿರುದ್ದ ಕಿರುಕುಳ ನೀಡುತ್ತಿದ್ದು, ಅವರನ್ನು ರೌಡಿ ಶೀಟರ್ ಪಟ್ಟಿಯಲ್ಲಿ ಸೇರಿಸುವ ಮೂಲಕ ಅವರಿಗೆ ಅವಮಾನ ಮಾಡಲು ಮುಂದಾಗಿರುವ ಈ ಅಧಿಕಾರಿಗಳು ದಕ್ಷ, ಪ್ರಾಮಾಣಿಕತೆಯ ಇಲಾಖೆ ಎಂದು  ಹೆಸರು ವಾಸಿಯಾಗಿರುವ ಪೊಲೀಸ್ ಇಲಾಖೆಗೆ ಕಳಂಕ ತರುತ್ತಿದ್ದಾರೆ. ಇಂತಹವರನ್ನು ಕೂಡಲೆ ಅಮಾನತ್ತುಗೊಳಿಸಿ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ, ಉನ್ನತ ಮಟ್ಟದಲ್ಲಿ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆ ಹೊರಬರುವ ಮೂಲಕ ಭ್ರಷ್ಟ ಅಧಿಕಾರಿಗಳ ಮುಖವಾಡ ಕಳಚುವಂತಾಗಲಿ ಎಂದು ಆಗ್ರಹಿಸಿದರು.


ಸಾವಿರಾರು ಮಂದಿ ಪ್ರತಿಭಟನಕಾರರು ಹಾಗೂ ಅವರ ಅಭಿಮಾನಿಗಳು ಕೆ.ಜಿ.ಕೃಷ್ಣ ಅವರ ಪರವಾಗಿ ಮತ್ತು ಪೊಲೀಸ್ ಇಲಾಖೆಯ ಭ್ರಷ್ಠ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗುವ ಮೂಲಕ ಸಮಾಜದಲ್ಲಿ ಗೌರವಯುತವಾಗಿ ನಡೆಯುತ್ತಿರುವವರ ವಿರುದ್ಧ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಇಂತಹ ಅಧಿಕಾರಿಗಳಿಂದ ಬಡ ವರ್ಗದ ಮತ್ತು ಸಾಮಾನ್ಯ ವರ್ಗದವರಿಗೆ ಯಾವ ನ್ಯಾಯ ಸಿಗಬಹುದು ಎಂದು ಪ್ರಶ್ನೆ ಮಾಡುತ್ತ ಧಿಕ್ಕಾರ ಧಿಕ್ಕಾರ ಎಂದು ಕೂಗುವ ಮೂಲಕ ಕೂಡಲೆ ಭ್ರಷ್ಠ ಅಧಿಕಾರಿಗಳ ವಿರುದ್ಧ ತನಿಖೆ ಆಗಲೆ ಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.


ಪ್ರತಿಭಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹೆಚ್.ಸಿ.ಜಯಮುತ್ತು. ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಮು, ಬಿಜೆಪಿ ಮುಖಂಡರಾದ ಜಯರಾಮು, ಆನಂದಸ್ವಾಮಿ, ಮುದಗೆರೆ ಜಯಕುಮಾರ್, ಸುರೇಶ್, ಮಳೂರುಪಟ್ಟಣ ರವಿ, ಆತ್ಮರಾಮ್, ಮೇಹರೀಶ್(ಮನು), ಕ.ಜ.ವೇ.ಜಿಲ್ಲಾಧ್ಯಕ್ಷ ಯೋಗೇಶ್‌ಗೌಡ, ಮೈಲನಾಯಕನಹಳ್ಳಿ ಸಾಗರ್, ಮಹಿಳಾ ಮುಖಂಡರಾದ ಬಿಂದುಶ್ರೀ, ರೇಖಾ ಉಮಾಶಂಕರ್, ಸೇರಿದಂತೆ ಎಲ್ಲಾ ಸಂಘಟನೆಯ ಪದಾಧಿಕಾರಿಗಳು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


*ಒತ್ತಾಯದ ಬೇಡಿಕೆಗಳು:*

ಐಪಿಎಸ್ ಅಧಿಕಾರಿ ರವಿಕಾಂತೇಗೌಡರ ವಿರುದ್ಧ ಸಿಬಿಐ ತನಿಖೆಗೆ ಅದೇಶಿಸಬೇಕು. ಭ್ರಷ್ಟ ಅಧಿಕಾರಿ ಯು.ಡಿ.ಕೃಷ್ಣಕುಮಾರ್.ಅವರನ್ನು ವಜಾಗೊಳಿಸಿ ಅವರ ವಿರುದ್ಧ ತನಿಖೆಗೆ ಅದೇಶಿಸಬೇಕು. ರೌಡಿ ಶೀಟರ್ ಬೆಮೆಲ್ ಕಾಂತರಾಜು ಅವರನ್ನು ಕೂಡಲೇ ಬಂಧಿಸಬೇಕು. ಸಮಾಜ ಸೇವೆ.ಕೆ.ಜಿ.ಕೃಷ್ಣ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು. ಕೂಡಲೆ ಕರ್ನಾಟಕ ಸರ್ಕಾರ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ.ದಾಖಲಿಸಿ ಸಬಿಐ ನಿಂದ ತನಿಖೆಗೆ ಅದೇಶಿಸ ಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑