Tel: 7676775624 | Mail: info@yellowandred.in

Language: EN KAN

    Follow us :


ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು

Posted date: 15 Sep, 2022

Powered by:     Yellow and Red

ಸಾರಿಗೆ ಬಸ್​ಗೆ ಅಡ್ಡಬಂದ ಆನೆ. ಭಯಗೊಂಡು ಕಿರುಚಾಡಿದ ಪ್ರಯಾಣಿಕರು

ರಾಮನಗರ: ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದುವರೆಗೂ ರೈತರ ಜಮೀನಿಗೆ ದಾಳಿ ಇಡುತ್ತಿದ್ದ ಒಂಟಿ ಸಲಗವೊಂದು ಶಿವನಹಳ್ಳಿ ಗ್ರಾಮದ ರಸ್ತೆಯ ಮಧ್ಯ ನಿಂತು ಬಸ್​ಗೆ ಅಡ್ಡ ಬಂದು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ.


ಕನಕಪುರ ತಾಲೂಕಿನ ಕಾಡು ಶಿವನಹಳ್ಳಿ ಗ್ರಾಮದಿಂದ‌ ಇಂದು ಬೆಳಗ್ಗೆ ಸಾರಿಗೆ ಬಸ್ಸಿಗೆ ಅಡ್ಡಲಾಗಿ ಬಂದ ಒಂಟಿ ಸಲಗ ಸುಮಾರು ಹೊತ್ತು ರಸ್ತೆಯಲ್ಲಿಯೇ ಅಡ್ಡಲಾಗಿ ನಿಂತಿತ್ತು. ಬಸ್ಸಿನಲ್ಲಿದ್ದ ಪ್ರಯಾಣಿಕರು ಜೋರಾಗಿ ಕಿರುಚಿದ ಪರಿಣಾಮ ಸ್ವಲ್ಪ ಹೊತ್ತು ಹಿಂಭಾಗಕ್ಕೆ ತೆರಳಿ ಮತ್ತೆ ಬಸ್ಸಿನ ಮುಂಭಾಗಕ್ಕೆ ಈ ಒಂಟಿ ಸಲಗ ಬರುತ್ತಿತ್ತು. ನಂತರ ಬಸ್​ನ ಹಾರನ್ ಶಬ್ದ ಹೊಡೆದಾಗಲೂ ಕೂಡ ಹಿಂದೆ ಹೋಗುವ ಆನೆ ಮತ್ತೆ ಬಸ್ಸಿನ ಮುಂಭಾಗ ಬಂದಿದೆ.


ರಾಮನಗರದಲ್ಲಿ ಬಸ್​ಗೆ ಅಡ್ಡಬಂದ ಆನೆಯಿಂದ ಪ್ರಯಾಣಿಕರು ಭಯಗೊಂಡು ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಸದ್ಯಕ್ಕೆ ಒಂಟಿ ಸಲಗ ಪ್ರಯಾಣಿಕರಿಗೆ ಹಾಗೂ ಬಸ್ಸಿಗೆ ಯಾವುದೇ ತೊಂದರೆ ನೀಡದೆ ಕಾಡಿನತ್ತ ಪಯಣ ಬೆಳೆಸಿತು. ಆಗ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.


ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑