Tel: 7676775624 | Mail: info@yellowandred.in

Language: EN KAN

    Follow us :


ವಳಗೆರೆದೊಡ್ಡಿ ಎಂಪಿಸಿಎಸ್ ಅಧ್ಯಕ್ಷರಾಗಿ ಮಹದೇವ್ ಉಪಾಧ್ಯಕ್ಷರಾಗಿ ಜಯಲಕ್ಷ್ಮಮ್ಮ ಅವಿರೋಧ ಆಯ್ಕೆ:

Posted date: 17 Sep, 2022

Powered by:     Yellow and Red

ವಳಗೆರೆದೊಡ್ಡಿ ಎಂಪಿಸಿಎಸ್  ಅಧ್ಯಕ್ಷರಾಗಿ ಮಹದೇವ್  ಉಪಾಧ್ಯಕ್ಷರಾಗಿ ಜಯಲಕ್ಷ್ಮಮ್ಮ  ಅವಿರೋಧ ಆಯ್ಕೆ:

ಚನ್ನಪಟ್ಟಣ:ತಾಲೂಕಿನ ವಳಗೆರೆದೊಡ್ಡಿ ಹಾಲು ಉತ್ಪಾದಕರ ಸಹಕಾರ  ಸಂಘದ ಆಡಳಿತ ಮಂಡಳಿಯ  ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ನಿರ್ದೇಶಕರಾದ  ಮಹದೇವ ಮತ್ತು ಉಪಾಧ್ಯಕ್ಷರಾಗಿ  ಜಯಲಕ್ಷ್ಮಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹದೇವ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಯಲಕ್ಷ್ಮಮ್ಮ ಅವರು ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದಿದ್ದರು. ಅವರ ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾಧಿಕಾರಿ ರಮ್ಯಾ ಅವರು ಅಧ್ಯಕ್ಷರಾಗಿ ಮಹದೇವ ಮತ್ತು ಉಪಾಧ್ಯಕ್ಷರಾಗಿ  ಜಯಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.


ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹದೇವ ಅವರು ಮಾತನಾಡಿ ನಿಮ್ಮೆಲ್ಲರ ಸಹಕಾರದಿಂದ ಇಂದು ನಾನು ಅಧ್ಯಕ್ಷ ನಾಗಿ ಆಯ್ಕೆಯಾಗಿದ್ದೆನೆ. ನಾನು ಈ ಸ್ಥಾನಕ್ಕೆ ಚ್ಯುತಿ ಬಾರದಂತೆ

ಸಂಘದ ಎಲ್ಲಾ ನಿರ್ದೇಶಕರ ಸಲಹೆ ಸಹಕಾರವನ್ನು ಪಡೆದು  ಬಮೂಲ್ ನಿಂದ ಹಾಗೂ ಸರ್ಕಾರದಿಂದ ದೊರಕುವ 

 ಸೌಲಭ್ಯಗಳನ್ನು ಸಂಘದ  ಎಲ್ಲಾ ಸದಸ್ಯರಿಗೆ ಯಾವುದೇ ಪಕ್ಷಪಾತವಿಲ್ಲದೇ ಪ್ರಾಮಾಣಿಕವಾಗಿ ದೊರಕಿಸಿ ಕೊಡುವುದರ ಜೊತೆಗೆ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ  ಎಂದು ಹೇಳಿ, ಗೆಲುವಿಗಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

 

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹದೇವ ಮತ್ತು ಜಯಲಕ್ಷ್ಮಮ್ಮ ಅವರನ್ನು  ಗ್ರಾಮದ ಮುಖಂಡರಾದ ಉಮೇಶ್. ಕೆ, ಗೋಪಾಲಕೃಷ್ಣ, ವೆಂಕಟರಾಮು( ಸುನಿ), ಚಂದ್ರು, ಚಂದ್ರಯ್ಯ, ರಾಮಚಂದ್ರು ( ಮೂಗಣ್ಣ) ವೆಂಕಟಚಲಾ, ಸಿ ತಿಮ್ಮಯ್ಯ, ನಂಜಯ್ಯ, ರಾಮಚಂದ್ರ(ಛೆರ್ಮನ್), ಅನಿಲ್, ಸಿ ಜಯರಾಮು,   ಸಂಘದ ಕಾರ್ಯದರ್ಶಿ ಗೊವಿಂದ, ಹರ್ಷ ವರ್ದನ , ಮಹೇಶ್ ಹಾಗೂ ಸಂಘದ ನಿರ್ದೇಶಕರಾದ ಸಿದ್ದರಾಜು ಎಸ್, ರಾಮದಾಸ್ ಆರ್,ವೆಂಕಟೇಶ್, ಶಿವಣ್ಣ, ವೆಂಕಟೇಶ್, ಲಕ್ಷ್ಮಣ, ಗೀತಾ, ಸವಿತ ಬಿಎಸ್,  ಶಂಕರ್,  ಚಿಕ್ಕರಾಜು ಕೆ  ಸೇರಿದಂತೆ ಮುಂತಾದವರು ಅಭಿನಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑