Tel: 7676775624 | Mail: info@yellowandred.in

Language: EN KAN

    Follow us :


ಗಿಡ ನೆಡುವುದಷ್ಟೇ ಮುಖ್ಯವಲ್ಲಾ ನೆಟ್ಟ ಗಿಡಗಳನ್ನು ಕಾಪಾಡಿ ಮರಮಾಡುವುದು ಮುಖ್ಯ ಡಿವೈಎಸ್ಪಿ ಓಂಪ್ರಕಾಶ್

Posted date: 18 Sep, 2022

Powered by:     Yellow and Red

ಗಿಡ ನೆಡುವುದಷ್ಟೇ ಮುಖ್ಯವಲ್ಲಾ ನೆಟ್ಟ ಗಿಡಗಳನ್ನು ಕಾಪಾಡಿ ಮರಮಾಡುವುದು ಮುಖ್ಯ ಡಿವೈಎಸ್ಪಿ ಓಂಪ್ರಕಾಶ್

ಚನ್ನಪಟ್ಟಣ: ಗಿಡಗಳನ್ನು ನೆಡುವಷ್ಟೇ ಕಾತುರ ಮರವಾಗುವ ತನಕ ಇರಬೇಕು. ಆ ಕೆಲಸವನ್ನು ಡಾ ಮಲವೇಗೌಡರು ಮಾಡುತಿದ್ದಾರೆ. ಅವರು ಮತ್ತು ಅವರ ತಂಡದವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ  ಎಂದು ಡಿವೈಎಸ್ಪಿ ಓಂಪ್ರಕಾಶ್ ತಿಳಿಸಿದರು. ಅವರು

ಚನ್ನಪಟ್ಟಣ ನಗರದ ಚಿಕ್ಕಮಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರೆದು ಮಾತನಾಡಿದರು.


ಕಳೆದ ಎರಡು ತಿಂಗಳಿಂದ ದಾನಿಗಳ ನೆರವು ಪಡೆದು ಸರಿಸುಮಾರು ಎರಡು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೀರು ತುಂಬಿಕೊಂಡು ಜೊಂಡು, ಬೇಲಿ ಬೆಳೆದು ನಿಂತಿದ್ದ ಶಾಲಾ ಆವರಣವನ್ನು ಶುಚಿಗೊಳಿಸಿ, ಮಕ್ಕಳು ಓಡಾಡಲು ರಸ್ತೆ ನಿರ್ಮಿಸಲಾಗಿದೆ.ಈ ರಸ್ತೆಯ ಇಕ್ಕೆಲಗಳು ಮತ್ತು ತಡೆಗೋಡಯ ಸುತ್ತಲೂ ಗಿಡಗಳನ್ನು ನೆಡುತ್ತಿದ್ದೇವೆ ಎಂದು ನಗರದ ಮಾತೃಶ್ರೀ ಆರ್ಥೋಫೆಡಿಕ್ ಆಸ್ಪತ್ರೆಯ ವೈದ್ಯ ಮಲವೇಗೌಡ ತಿಳಿಸಿದರು.


ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತೃಭೂಮಿ ಫೌಂಡೇಶನ್ ನ ಮಹೇಶ್ ಮತ್ತು ಆಶ್ರಮದ ಮಕ್ಕಳು, ನಗರಸಭೆ ಸದಸ್ಯ ಲಿಂಗೇಗೌಡ, ಗಗನ್ ಎಲೆಕೇರಿ, ವಿಜಯ್ ರಾಂಪುರ, ಚೌಪು ಸ್ವಾಮಿ, ಗೋ ರಾ ಶ್ರೀನಿವಾಸ ಮುಖ್ಯ ಶಿಕ್ಷಕ ಮುತ್ತಯ್ಯ ಮತ್ತು ಶಾಲಾ ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಚಿಕ್ಕಮಳೂರು ಗ್ರಾಮದ ಯುವಕರು ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑