Tel: 7676775624 | Mail: info@yellowandred.in

Language: EN KAN

    Follow us :


ಸ್ವತಃ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಚ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಇಓ

Posted date: 20 Sep, 2022

Powered by:     Yellow and Red

ಸ್ವತಃ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಚ ಸೇವಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಇಓ

ಚನ್ನಪಟ್ಟಣ: ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದಿಗ್ವಿಜಯ್ ಬೋಡ್ಕೆ ರವರು ಸ್ವಚ್ಛತೆಯ ಸೇವೆ ಎಂಬ ಅಭಿಯಾನದ ಅಂಗವಾಗಿ ಚನ್ನಪಟ್ಟಣ ತಾಲೂಕಿನ ಹೊಂಗನೂರು ಮತ್ತು ಕೋಡಂಬಳ್ಳಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಸ್ವತಃ ಪೊರಕೆ ಹಿಡಿದು ರಸ್ತೆಯಲ್ಲಿರುವ ಕಸವನ್ನು ಗುಡಿಸುವ ಮೂಲಕ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿದರು. ಅಲ್ಲಿನ ಸ್ಥಳಿಯರಿಗೂ  ಪೊರಕೆಯನ್ನು ನೀಡಿ ಸ್ವಚ್ಛತೆಯ ಅರಿವು ಮೂಡಿಸಿದರು. ಇದರಿಂದ ಪ್ರೇರೇಪಣೆಗೊಂಡ ಊರಿನ ಗ್ರಾಮಸ್ಥರು ಪಂಚಾಯತಿ ಸದಸ್ಯರು ಅಧ್ಯಕ್ಷರು ಇತರೆ ಎಲ್ಲಾ ವರ್ಗದವರು ಸ್ವಚ್ಛತೆ ಕಾರ್ಯಕ್ಕೆ ಮುಂದಾದರು. 


ಕೋಡಂಬಳ್ಳಿ ಗ್ರಾಮ ಪಂಚಾಯಿತಿಯ ಕ್ಲಸ್ಟರ್ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ವಿರುಪಾಕ್ಷಿಪುರ ಮತ್ತು ಕೋಡಂಬಳ್ಳಿ ಗ್ರಾಮ ಪಂಚಾಯಿತಿಯ ತ್ಯಾಜ್ಯ ಸಂಗ್ರಹಿಸಿರುವುದನ್ನು ವೀಕ್ಷಿಸಿ ಈ ಎರಡು ಗ್ರಾಮ ಪಂಚಾಯಿತಿಯ ತ್ಯಾಜ್ಯವನ್ನು ಬಿಟ್ಟರೆ ಉಳಿದ ಮೂರು ಪಂಚಾಯಿತಿಯ ತ್ಯಾಜ್ಯವನ್ನು ತಂದು ಸಂಗ್ರಹಿಸಲು ಸೂಚಿಸಿದರು.


 ಇದೇ ಸಂದರ್ಭದಲ್ಲಿ ಹೊಂಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೋಟೆಲ್ ಒಂದಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಚನ್ನಪಟ್ಟಣ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಖುದ್ದು ಭೇಟಿ ನೀಡಿ ಜನರಿಗೆ ಊಟ ಪಾರ್ಸಲ್ ಮಾಡುವ ಕವರ್ ಗಳನ್ನು ಬಳಸದಂತೆ ಅಂಗಡಿ ಮಾಲೀಕರುಗಳಿಗೆ  ಜಾಗೃತಿ ಮೂಡಿಸಿದರು. ವಿವಿಧ ಕಡೆ  ಏಕಬಳಕೆ ಪ್ಲಾಸ್ಟಿಕ್ ನಿಷೇಧದ (ಎಸ್ ಯು ಪಿ) ಸ್ಟಿಕ್ಕರ್ ಗಳನ್ನು ಅಂಟಿಸಲಾಯಿತು.

ಹಾಗೂ ಮುಖ್ಯ ಯೋಜನಾಧಿಕಾರಿಗಳು  ಹೊಂಗನೂರು ಗ್ರಾಮ ಪಂಚಾಯಿತಿಯ ಅಂಗನವಾಡಿಗಳಿಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪರೀಕ್ಷಿಸಿದರು.


 ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿಗಳಾದ  ಚಿಕ್ಕಸುಬ್ಬಯ್ಯ ರವರು,    ಚನ್ನಪಟ್ಟಣ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಕುಮಾರ್ ರವರು ಗ್ರಾಮ ಪಂಚಾಯತಿ ಸದಸ್ಯರು ಜಿಲ್ಲಾ ಸಮಾಲೋಚಕರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑