Tel: 7676775624 | Mail: info@yellowandred.in

Language: EN KAN

    Follow us :


ಜೆಡಿಎಸ್ ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ಬಹಿರಂಗ ಕ್ಷಮೆ ಯಾಚಿಸಬೇಕು ಕಾಂಗ್ರೆಸ್ ಮುಖಂಡರ ಆಗ್ರಹ

Posted date: 06 Oct, 2023

Powered by:     Yellow and Red

ಜೆಡಿಎಸ್ ತಾಲ್ಲೂಕು ಅಲ್ಪಸಂಖ್ಯಾತ ಅಧ್ಯಕ್ಷ ಬಹಿರಂಗ ಕ್ಷಮೆ ಯಾಚಿಸಬೇಕು ಕಾಂಗ್ರೆಸ್ ಮುಖಂಡರ ಆಗ್ರಹ

ಚನ್ನಪಟ್ಟಣ: ಪ್ರಾದೇಶಿಕ ಹಾಗೂ ಜಾತ್ಯಾತೀತ ಎಂಬ ಹಣೆಪಟ್ಟಿ ಹೊಂದಿದ ಜೆಡಿಎಸ್ ಪಕ್ಷದ ನಾಯಕರು ಕೋಮುವಾದಿ ಬಿಜೆಪಿ ಜೊತೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ, ಜೆಡಿಎಸ್ ನಲ್ಲಿದ್ದ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ನಮಗೆ ಕಾಂಗ್ರೆಸ್ ಪಕ್ಷದಿಂದ ಗ್ಯಾರಂಟಿ ಯೋಜನೆ ಅಲ್ಲದೆ, ಅಲ್ಪಸಂಖ್ಯಾತರಿಗೆ ಅನೇಕ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಹಾಗಾಗಿ ಬಿಜೆಪಿ ಪಕ್ಷದ ಜೊತೆ ಜೆಡಿಎಸ್ ಪಕ್ಷ ಸೇರಿದ್ದರಿಂದ ಬಹುತೇಕ ಎಲ್ಲಾ ಅಲ್ಪಸಂಖ್ಯಾತರು ಕಾಂಗ್ರೆಸ್ ಸೇರಿದ್ದಾರೆ ಹಾಗೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಫರೀದ್ ಉಲ್ಲಾಖಾನ್ ಘೋರಿ ಹೇಳಿದರು. ಅವರು ನಗರದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಫಾಜಿಲ್ ವಿರುದ್ಧ ಆಯೋಜಿಸಿದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.


ಇಡೀ ರಾಜ್ಯದಲ್ಲಿ ಎಪ್ಪತ್ತರಿಂದ ಎಂಭತ್ತು ಕ್ಷೇತ್ರಗಳಲ್ಲಿ ಮುಸ್ಲಿಮ್ ಮತದಾರರು ನಿರ್ಣಾಯಕವಾಗಿದ್ದಾರೆ, ಅಲ್ಪಸಂಖ್ಯಾತರಿಗಾಗಿ ಆಯಾಯ ಕ್ಷೇತ್ರಗಳಲ್ಲಿ ಉನ್ನತ ಮಟ್ಟದ  ಕಾಲೇಜು ತೆರೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ, ಇದಕ್ಕೆಲ್ಲಾ ನಮ್ಮ ರಾಜ್ಯ ನಾಯಕರಾದ ಜಮೀರ್ ಅಹ್ಮದ್ ಖಾನ್ ರವರೇ ಕಾರಣವಾಗಿದ್ದು, ರಾಜ್ಯ ಮಟ್ಟದ ನಾಯಕರನ್ನು ನಿನ್ನೆ-ಮೊನ್ನೆ ಪಕ್ಷಕ್ಕೆ ಬಂದವರು ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷ ಎನಿಸಿಕೊಂಡವರು ತೆಗಳುವುದು ಸರಿಯಲ್ಲಾ ಎಂದರು.


ನಗರಸಭೆ ಮಾಜಿ ಸದಸ್ಯ ಜಬಿಉಲ್ಲಾಖಾನ್ ಘೋರಿ ಮಾತನಾಡಿ ಕುಮಾರಸ್ವಾಮಿ ಯವರೇ ಅಲ್ಪಸಂಖ್ಯಾತರು ಬೇಡಾ ಎಂದು ಹೇಳಿದ್ದಾರೆ, ಜಮೀರ್ ಅಹ್ಮದ್ ವಿರುದ್ಧ ಮಾತನಾಡಲು ಸೈಯ್ಯದ್ ಫಾಜಿಲ್ ಯಾರು, ಅವರ ಸ್ಥಾನಮಾನ ಏನು, ಜೆಡಿಎಸ್ ಪಕ್ಷದಲ್ಲಿ ಆತನ ಪಾತ್ರ ಏನು ಎಂಬುದೇ ಆತನಿಗೆ ಗೊತ್ತಿಲ್ಲಾ, ಇಂತಹ ವ್ಯಕ್ತಿ ನಮ್ಮ ನಾಯಕ ಜಮೀರ್ ವಿರುದ್ದ ಮಾತನಾಡುವ ನೈತಿಕತೆ ಇಲ್ಲಾ ಎಂದರು.


ಜೆಡಿಎಸ್ ನಲ್ಲಿ ಕೇವಲ ಶೇಕಡಾ ಐದರಷ್ಟು ಮಾತ್ರ ಅಲ್ಪಸಂಖ್ಯಾತರು ಉಳಿದುಕೊಂಡಿದ್ದಾರೆ, ಅವರು ಕಾಂಗ್ರೆಸ್ ಪಕ್ಷಕ್ಕೆ ಬರಲು ಕಾತುರರಾಗಿದ್ದಾರೆ, ಈ ಹಿಂದಿನ ಸರ್ಕಾರದಲ್ಲಿ ನಮಗೆ ಹಲವಾರು ತೊಂದರೆ ಕೊಟ್ಟಿದ್ದರು, ಈಗ ಕಾಂಗ್ರೆಸ್ ಸರ್ಕಾರದಲ್ಲಿ ನಮಗೆ ಯಾವುದೇ ತೊಂದರೆಯಾಗಿಲ್ಲಾ, ಹಲವಾರು ಯೋಜನೆಗಳನ್ನು ಸರ್ಕಾರ ನಮಗಾಗಿ ನೀಡಿದೆ, ಮುಂದಿನ ದಿನಗಳಲ್ಲಿ ಡಿ ಕೆ ಶಿವಕುಮಾರ್, ಇಕ್ಬಾಲ್ ಹುಸೇನ್, ಜಮೀರ್ ಅಹ್ಮದ್ ಖಾನ್ ರವರ ನೇತೃತ್ವದಲ್ಲಿ ಸಮಾರಂಭಗಳನ್ನು ಹಮ್ಮಿಕೊಂಡು ನಮ್ಮ ಒಗ್ಗಟ್ಟನ್ನು ಪ್ರದರ್ಶನ ಮಾಡುತ್ತೇವೆ ಎಂದರು.


ತಾಲ್ಲೂಕಿನ ಕಾಂಗ್ರೆಸ್ ಪಕ್ಷದಲ್ಲಿದ್ದವರೇ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಜೆಡಿಎಸ್ ನಾಯಕರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಬಹುತೇಕ ಎಲ್ಲಾ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಮರಳಿ ಮಾತೃ ಪಕ್ಷಕ್ಕೆ ಬಂದಿದ್ದೇವೆ, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ಈ ಹಿಂದೆ ನಾವು ತಾಲ್ಲೂಕಿನ ಎಲ್ಲಾ ಜೆಡಿಎಸ್ ನಾಯಕರಿಗೂ ನಮ್ಮ ಸಮುದಾಯ ಬೆಂಬಲ ನೀಡಿದ್ದೇವೆ. ಆಮದರೆ ಅವರು ನಾವು ಬೇಡಾ ಎಂದಿದ್ದು ಬೇಸರ ತರಿಸಿದೆ. ಮುಂದಿನ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮುಖಂಡ ಸಯ್ಯದ್ ಮೂಸಾ ಅಭಿಪ್ರಾಯ ಪಟ್ಟರು.


ತಾಲ್ಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನನ್ನ ಸಹೋದರ, ನಮಗೆಲ್ಲಾ ಜಮೀರ್ ಅಹ್ಮದ್ ಏನೂಂತ ಗೊತ್ತಿದೆ, ನನ್ನ ಸಹೋದರನಿಗೆ ಎಳ್ಳಷ್ಟು ವಿಷಯ ಗೊತ್ತಿಲ್ಲಾ, ಯಾರೋ ಹೇಳಿ ಕೊಟ್ಟಿದ್ದನ್ನು ಅವನು ಹೇಳಿದ್ದಾನೆ. ನಾನು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಸಮುದಾಯದ ಎಲ್ಲಾ ಮಹಿಳೆಯರೇ ಮತ ಹಾಕಿ ಗೆಲ್ಲಿಸುತ್ತಾರೆ ಎಂದು ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ತಾಲ್ಲೂಕು ಅಧ್ಯಕ್ಷ ಫಾಜಿಲ್ ರವರ ಸಹೋದರ ಸಯ್ಯದ್ ವಲೀಂ ಹೇಳಿದರು.


ದೇಶದ ಯಾವುದೇ ರಾಜ್ಯಗಳಲ್ಲಿ ಮುಸ್ಲಿಂ ಸಮುದಾಯದವರಿಲ್ಲದೆ ಸರ್ಕಾರ ರಚನೆ ಸಾಧ್ಯವಿಲ್ಲಾ, ರಾಜ್ಯದಲ್ಲೂ ಸಹ ನಮ್ಮ ಬೆಂಬಲವಿಲ್ಲದೆ ಸರ್ಕಾರ ರಚನೆ ಅಸಾಧ್ಯ, ನಾವೆಲ್ಲರೂ ಹೆಚ್ ಡಿ ದೇವೆಗೌಡರಿಗಾಗಿ ಜೆಡಿಎಸ್ ಪಕ್ಷದಲ್ಲಿದ್ದೆವು. ಕುಮಾರಸ್ವಾಮಿ ಯವರ ಋಣ ನಮ್ಮ ಮೇಲಿಲ್ಲಾ, ನಮ್ಮ ಋಣ ಕುಮಾರಸ್ವಾಮಿ ಮೇಲಿದೆ ಎಂದು ಸಮುದಾಯದ ಮುಖಂಡ ಅಮಾನುಲ್ಲಾ ಷರೀಫ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಸದಸ್ಯ ಮಥೀನ್ ಖಾನ್, ಸಾಬೀಲ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑