Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ

Posted date: 11 Nov, 2023

Powered by:     Yellow and Red

ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಟಿ ವಿ ಗಿರೀಶ್ ಆಯ್ಜೆ, ಹಲವರಿಂದ ಅಭಿನಂದನೆ

ಚನ್ನಪಟ್ಟಣ:ನಗರದ ನ್ಯಾಯಾಲಯದಲ್ಲಿರುವ ವಕೀಲರ ಸಂಘದ ಕಛೇರಿಯಲ್ಲಿ ತಾಲ್ಲೂಕು ವಕೀಲರ ಸಂಘದ ಚುನಾವಣೆಯು ಶನಿವಾರ ಜರುಗಿದ್ದು ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಟಿ ವಿ ಗಿರೀಶ್ ಆಯ್ಕೆಯಾದರು. ಎರಡು ವರ್ಷಕ್ಜೊಮ್ಮೆ ನಡೆಯುವ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಗಾದಿಗೆ ನಾಲ್ಕು ಮಂದಿ, ಉಪಾಧ್ಯಕ್ಷ ಗಾದಿಗೆ ಇಬ್ಬರು, ಕಾರ್ಯದರ್ಶಿ ಗಾದಿಗೆ ಮೂವರು ಹಾಗೂ ಖಜಾಂಚಿ ಸ್ಥಾನಕ್ಕೆ ಇಬ್ಬರು ಸ್ಪರ್ಧೆ ಮಾಡಿದ್ದು ಟಿ ವಿ ಗಿರೀಶ್ ೯೨ ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.


ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟಿ ವಿ ಗಿರೀಶ್ ಮಾತನಾಡಿ ಅಧ್ಯಕ್ಷ ಗಾದಿಗೆ ಒಟ್ಟು ಮೂರು ಬಾರಿ ಸ್ಪರ್ಧೆ ಮಾಡಿದ್ದು, ಎರಡನೇ ಅವಧಿಯಲ್ಲಿ ಒಮ್ಮೆ ಕೇವಲ ಒಂದು ಮತದಿಂದ ಸೋಲನ್ನು ಅನುಭವಿಸಿದ್ದೆ, ಮೊದಲ ಮತ್ತು ಮೂರನೇ ಬಾರಿ ಜಯಭೇರಿ ಬಾರಿಸಿದ್ದು, ಬೆಂಬಲಿಸಿದ ಎಲ್ಲಾ ವಕೀಲರಿಗೂ ವಂದಿಸುತ್ತೇನೆ. ನನ್ನ ಅಧ್ಯಕ್ಷ ಅವಧಿಯಲ್ಲಿ ವಕೀಲರಿಗೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವುದು ನನ್ನ ಪ್ರಥಮ ಗುರಿಯಾಗಿದೆ. ಪದಾಧಿಕಾರಿಗಳು ಹಾಗೂ ಎಲ್ಲಾ ವಕೀಲರನ್ನು ಒಗ್ಗೂಡಿಸಿ ಗ್ರಂಥಾಲಯ ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.


ಚನ್ನಪಟ್ಟಣ ದಲ್ಲಿ ೧೯೮೭ ರಲ್ಲಿ ನ್ಯಾಯಾಲಯ ಆರಂಭವಾಗಿದ್ದು, ಹಿರಿಯ ವಕೀಲರಾದ ಆರ್ ಟಿ ಕೃಷ್ಣ ರವರ ನೇತೃತ್ವದಲ್ಲಿ ಆರಂಭವಾದ ವಕೀಲರ ಸಂಘಕ್ಕೆ ಇಲ್ಲಿಯವರೆಗೆ ಯಾವುದೇ ಮಹಿಳಾ ವಕೀಲರು ಅಧ್ಯಕ್ಷ ಗಾದಿಗೆ ಸ್ಪರ್ಧಿಸಿರಲಿಲ್ಲ. ಇದೇ ಪ್ರಥಮ ಬಾರಿಗೆ ಕಳೆದ ಬಾರಿ ಉಪಾಧ್ಯಕ್ಷರಾಗಿದ್ದ ಅಂಬಿಕಾ ರವರು ೪೩ ಮಹಿಳಾ ವಕೀಲರ ಜೊತೆಗೆ ಎಲ್ಲಾ ವಕೀಲರ ಬೆಂಬಲ ಸಿಗಬಹುದು ಎಂಬ ಹಿನ್ನೆಲೆಯಲ್ಲಿ ಸ್ಪರ್ಧಿಸಿದ್ದು, ಕೇವಲ ೧೮ ಮತಗಳನ್ನು ಪಡೆದು ಪರಾಜಿತರಾದರು. ಉಳಿದಂತೆ ಜೆ ಟಿ ಪ್ರಕಾಶ್ ೧೧ ಹಾಗೂ ವೆಂಕಟೇಶ್ ೦೩ ಮತಗಳನ್ನು ಪಡೆದು ಪರಾಜಿತರಾದರು.


ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದು, ಎಸ್ ಬಿ ಧನಂಜಯ ೬೪ ಮತಗಳನ್ನು ಪಡೆದು ವಿಜಯಶಾಲಿಯಾದರೆ, ರಂಗಸ್ವಾಮಿ ೫೯ ಮತಗಳನ್ನು ಪಡೆದು ಪರಾಜಿತರಾದರು.

ಕಾರ್ಯದರ್ಶಿ ಸ್ಥಾನಕ್ಕೆ ಮೂರು ಮಂದಿ ಸ್ಪರ್ಧಿಸಿದ್ದು, ದೇವರಾಜು ೬೩ ಮತಗಳನ್ನು ಪಡೆದು ಜಯಶಾಲಿಯಾದರೆ, ವಸಂತಕುಮಾರ್ ೪೦ ಮತಗಳು ಹಾಗೂ ಎಲ್ ಶಿವರಾಜು ೧೮ ಮತಗಳನ್ನು ಪಡೆದರು.

ಖಜಾಂಚಿ ಸ್ಥಾನಕ್ಕೆ ಈರ್ವರು ಸ್ಪರ್ಧೆ ಮಾಡಿದ್ದು, ಹೇಮಂತ್ ೬೭ ಮತಗಳನ್ನು ಪಡೆದು ಬೀಗಿದರೆ ಹನುಮಂತಯ್ಯ ೫೩ ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ.


ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಒಟ್ಟು ೧೨೮ ಮತದಾರರ ಪೈಕಿ ಮೂವರು ಗೈರಾಗಿದ್ದು, ೧೨೫ ಮಂದಿ ಮತ ಚಲಾಯಿಸಿದರು. ಚುನಾವಣಾಧಿಕಾರಿಗಳಾಗಿ ಬಿ ಶಿವರಾಜೇಗೌಡ, ಎಲ್ ಸತೀಶ್, ಎಸ್ ಗಂಗಾಧರ್ ಮತ್ತು ಸಿ ಸುಕನ್ಯಾ ಕಾರ್ಯನಿರ್ವಹಿಸಿದರು. ಗೆದ್ದ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑