Tel: 7676775624 | Mail: info@yellowandred.in

Language: EN KAN

    Follow us :


ಜಿಯೋ ಸ್ಪೇಷಿಯಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ

Posted date: 15 Nov, 2022

Powered by:     Yellow and Red

ಜಿಯೋ ಸ್ಪೇಷಿಯಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ  ಸಂಪನ್ಮೂಲ ನಿರ್ವಹಣೆ

ರಾಮನಗರ: ರಾಮನಗರ ಜಿಲ್ಲೆ ಹಾಗೂ ತಾಲ್ಲೂಕಿನ, ಸಾಮಥ್ಯ೯ ಸೌಧದಲ್ಲಿ "ಜಲ ಸಂಜೀವಿನಿ ಕಾರ್ಯಕ್ರಮದಡಿ ಜಿಯೋ ಸ್ಪೇಷಿಯಲ್‌ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ  ಸಂಪನ್ಮೂಲ ನಿರ್ವಹಣೆ (NRM) ಕಾಮಗಾರಿಗಳ ವೈಜ್ಞಾನಿಕ ಯೋಜನಾ ವರದಿ (DPR) ತಯಾರಿಕೆ ಮತ್ತು ಅನುಷ್ಠಾನ" ಗೊಳಿಸುವ ಕುರಿತು ಇಂದು ತರಬೇತಿ  ಆಯೋಜಿಸಲಾಗಿತ್ತು. 


ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ (ಗ್ರಾ.ಉ) ರೂಪೇಶ್ ಕುಮಾರ್ ಅವರು ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಅವರು ಗಿಡಕ್ಕೆ ನೀರೆರೆಯುವ‌ ಮೂಲಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ. ಮಾತನಾಡಿದ ಅವರು ನರೇಗಾ ಯೋಜನೆಯಡಿ ಸಾಕಷ್ಟು ಪ್ರಮಾಣದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಜಿಯೋ ಸ್ಪೇಷಿಯಲ್ ತಂತ್ರಜ್ಞಾನವನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಮಾಡಬೇಕಿದೆ ಎಂದರು.  


ನಂತರ ಜಲಸಂಪನ್ಮೂಲಗಳ ರಕ್ಷಣೆಯಲ್ಲಿ ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಹಾಗೂ ವಿವಿಧ ಅನುಷ್ಠಾನ ಇಲಾಖೆಗಳ ಪಾತ್ರ ಏನಿದೆ ಎಂಬ ವಿಚಾರದ ಕುರಿತು ಪ್ರಾಸ್ತಾವಿಕವಾಗಿ ತಿಳಿಸಿದರು.


ನಂತರ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾದ ಜಯಶಂಕರ್ ಅವರು, ಕೃಷಿ ಅಧಿಕಾರಿ ಚಿಕ್ಕವೀರಯ್ಯ ಅವರು, ತಾಲ್ಲೂಕು ತಾಂತ್ರಿಕ ಸಂಯೋಜಕರಾದ ಕಾರ್ತಿಕ್ ಕುಮಾರ್ (ನರೇಗಾ), ತಾಲ್ಲೂಕು ಎಂ.ಐ.ಎಸ್ ಸಂಯೋಜಕರಾದ ಹರೀಶ್ ಅವರು (ನರೇಗಾ), ಕೃಷಿ ಇಲಾಖೆ ತಾಂತ್ರಿಕ ಸಹಾಯಕ ವ್ಯವಸ್ಥಾಪಕರಾದ ನವ್ಯ, ಕೃಷಿ ಇಲಾಖೆ ತಾಂತ್ರಿಕ ಸಹಾಯಕಾರಾದ ಶಿಲ್ಪಶ್ರೀ ಹಾಗೂ ಕಾವ್ಯಶ್ರೀ ಅವರು ತರಬೇತಿ ನೀಡಿದರು. 


ತರಬೇತಿಯಲ್ಲಿ ಸಹಾಯಕ ನಿರ್ದೇಶಕರು (ಗ್ರಾ. ಉ), ಅನುಷ್ಠಾನ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಅಭಿಯಂತರರು, ಅನುಷ್ಠಾನ ಇಲಾಖೆಯ ತಾಂತ್ರಿಕ ಸಹಾಯಕರು, TC,TMIS, TIEC, AA, ಡಿಇಒಗಳು, ಬಿಎಫ್ಟಿ ಹಾಗೂ ಗ್ರಾಮ ಕಾಯಕ ಮಿತ್ರರು, ಐಇಸಿ ಸಂಯೋಜಕರು ಭಾಗವಹಿಸಿದ್ದರು. 


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑