Tel: 7676775624 | Mail: info@yellowandred.in

Language: EN KAN

    Follow us :


ಭಾರತ ದೇಶ ಐಕ್ಯತೆಯನ್ನು ಹೊಂದಿರುವ ದೇಶ: ಸುರೇಶ್

Posted date: 23 Nov, 2022

Powered by:     Yellow and Red

ಭಾರತ ದೇಶ ಐಕ್ಯತೆಯನ್ನು ಹೊಂದಿರುವ ದೇಶ: ಸುರೇಶ್

ರಾಮನಗರ, ನ.23: ಭಾರತ ದೇಶವು ಐಕ್ಯತೆಯನ್ನು ಹೊಂದಿರುವ ದೇಶ ಎಂದು ಕೋಡಂಬಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಅವರು ತಿಳಿಸಿದರು.

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೋಡಂಬಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಾಂಸ್ಕೃತಿಕ ಏಕತಾ ದಿನ ಕಾರ್ಯಕ್ರಮವನ್ನು ಉದ್ಪಾಟಿಸಿ ಮಾತನಾಡಿದರು. ಭಾರತ ದೇಶದಲ್ಲಿ ನಾವು ವಿವಿಧ ರೀತಿಯ ಆಚಾರ ವಿಚಾರ, ಸಂಸ್ಕಾರ ಸಂಸ್ಕೃತಿಗಳನ್ನು ಹೊಂದಿದ್ದೇವೆ ಎಂದರು. ಇಲಾಖೆಯು ನಮ್ಮ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು ಮಾತನಾಡಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಈ ನಮ್ಮ ಭಾರತ ದೇಶ. ನಾವೆಲ್ಲರೂ ಈ ದೇಶದ ಎಲ್ಲಾ ಭಾಷೆ, ಜನಾಂಗ ಮತ್ತು ಧರ್ಮವನ್ನು ಗೌರವಿಸಬೇಕು ಎಂದರು.

ವಿಶ್ವದ ಎಲ್ಲಾ ದೇಶಗಳಿಗಿಂತ ಧರ್ಮ ಮತ್ತು ಭಾಷೆಯಲ್ಲಿ ಭಾರತವು ಹೆಚ್ಚು ಮೌಲ್ಯಗಳನ್ನು ಹೊಂದಿದೆ. ಆದುದರಿಂದ ವಿದೇಶಿಗರು ಸಹ ಭಾರತ ದೇಶದ ಧರ್ಮ ಮತ್ತು ಭಾಷೆಯನ್ನು ಪ್ರೀತಿಸುತ್ತಾರೆ ಎಂದರು.


ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರಮಾಣವನ್ನು ಪ್ರಾಂಶುಪಾಲರು ಬೋಧಿಸಿದರು.

ಕಾರ್ಯಕ್ರಮದಲ್ಲಿ ಕೋಡಂಬಹಳ್ಳಿ ಗ್ರಾಮದ ನಾಗರಾಜು, ಕಲಾ ಸಂಘಟಕ ಡಾ. ಜಯಸಿಂಹ, ಗಾಯಕ ಶಿವಕುಮಾರ್, ಕಲಾವಿದ ಕನಕಪುರ ಶ್ರೀನಿವಾಸ್ ಹಾಗೂ ಕಾಲೇಜಿನ ಉಪನ್ಯಾಸಕರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑