ಕಾಡುಹಂದಿ ಕೊಲ್ಲಲು ಅವಕಾಶವಿದ್ದರೂ ಅರಣ್ಯ ಇಲಾಖೆ ಪ್ರಚಾರ ನೀಡಿಲ್ಲ ರೈತರ ಆರೋಪ

ಮದ್ದೂರು: ಮಾನವರ ಪ್ರಾಣಹಾನಿ, ರೈತ ಬೆಳೆದ ಬೆಳೆ ನಾಶಮಾಡುವ ಕಾಡುಹಂದಿಗಳನ್ನು ಕೊಲ್ಲಲು ಸರ್ಕಾರ ಅನುಮತಿ ನೀಡಿದೆ. ಆದರೆ ರೈತರಿಗೆ ಅರಣ್ಯಾಧಿಕಾರಿಗಳು ಈ ಕುರಿತು ಮಾರ್ಗದರ್ಶನ ಮಾಡದಿರುವುದರಿಂದ
ಕಾಡುಹಂದಿ ಹಾಗೂ ಮುಳ್ಳುಹಂದಿಗಳ ಹಾವಳಿಯಿಂದ ಮಾನವನ ಪ್ರಾಣಕ್ಕೆ ಹಾಗೂ ಸ್ವತ್ತಿಗೆ ಹಾನಿಯಾಗುತ್ತಿರುವ ಮತ್ತು ಬೆಳೆ ನಷ್ಠ ಆಗುತ್ತಿರುವ ಅಂಶ ಪರಿಗಣಿಸಿ ಕರ್ನಾಟಕ ಸರ್ಕಾರ ನಡಾವಳಿಯಲಿ ದಿ 1-10-216 ರಲ್ಲಿ ಆದೇಶ ಹೊರಡಿಸಿರುತ್ತದೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯತನದಿಂದ ರೈತರು ಕಷ್ಟ ಅನುಭವಿಸುವಂತಾಗಿದೆ ಎಂದು ಮದ್ದೂರು ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನ ಲಿ ಕೃಷ್ಣ ಆರೋಪಿಸಿದ್ದಾರೆ.
ಆದೇಶ ಸಂಖ್ಯೆ:ಅ ಪ ಜಿ 96 ಎಪ್ ಡಬ್ಲ್ಯೂ ಎಲ್ 2016 ರಂತೆ ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ರ ಅಧ್ಯಾಯ - 111 ರಲ್ಲಿ ವನ್ಯಪ್ರಾಣಿ ಗಳನ್ನು ಬೇಟೆಯಾಡುವ ಬಗ್ಗೆ ಪ್ರಸ್ತಾಪಿಸಿದ್ದು ಸೆಕ್ಷನ್ 11 (ಬಿ) ರ ಪ್ರಕಾರ ಅನುಸೂಚಿ ಅನುಸೂಚಿ 2 ,3, ಅಥವಾ 4 ರಲ್ಲಿ ನಿಗದಿಪಡಿಸಿದ ಯಾವುದೇ ವನ್ಯಪ್ರಾಣಿಯು ಮನುಷ್ಯನ ಪ್ರಾಣಕ್ಕೆ ಅಥವಾ ಸ್ವತ್ತಿಗೆ ಆಪಾಯಕಾರಿಯಾಗಿದೆ ಎಂದು ವನ್ಯಜೀವಿ ಪರಿಪಾಲಕರಿಗೆ ಅಥವಾ ಅಧಿಕೃತ ಅಧಿಕಾರಿಗೆ ಮನದಟ್ಟಾದರೆ ಕಾರಣ ನಮೂದಿಸಿ ಅಥವಾ ಲಿಖಿತ ಆದೇಶದ ಮೂಲಕ ನಿರ್ದಿಷ್ಠ ಪ್ರದೇಶದಲ್ಲಿ ಅಂತಹ ಪ್ರಾಣಿಯನ್ನು ಬೇಟೆಯಾಡಲು ಯಾವುದೆ ವ್ಯಕ್ತಿಗೆ ಅನುಮತಿಕೊಡಬಹುದಾಗಿದೆ ಎಂಬ ಅಂಶ ಪರಿಗಣಿಸಿ ಕೇರಳಸರ್ಕಾರದ ಮಾದರಿ ಅನುಸರಿಸಿ ಈ ಆದೇಶ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.
ಸರ್ಕಾರಿ ಅದಿಸೂಚನೆ ಸಂಖ್ಯೆ ಅ ಪ ಜೀ 81ಎಪ್ ಡಬ್ಲೂ ಎಲ್ 2009 ರ ಅನ್ವಯ ಮುಖ್ಯ ಅರಣ್ಯ ಸಂಯೊಜನಾಧಿಕಾರಿ ( ಹುಲಿಯೊಜನೆ) ಮುಖ್ಯ ಅರಣ್ಯಸಂರಕ್ಷಣಾಧಿಕಾರಿ /ಅರಣ್ಯ ಸಂರಕ್ಷಣಾಧಿಕಾರಿಗಳನ್ನು/ ಪ್ರಾದೇಶಿಕ/ವನ್ಯಜೀವಿ ಇವರನ್ನು ಅಧಿಕೃತ ಅಧಿಕಾರಿಗಳೆಂದು ನೇಮಿಸಲಾಗಿದೆ. ಮಾನವನ ಪ್ರಾಣಕ್ಕೆ ಅಥವಾ ಸ್ವತ್ತಿಗೆ ಆಪಾಯಕಾರಿಯಾಗಿರುವಂತಹ ಕಾಡುಹಂದಿಯ ಹಾವಳಿಯನ್ನು ನಿವಾರಿಸುವ ಉದ್ದೇಶಕ್ಕಾಗಿ ಹೆಚ್ಚುವರಿ ಪರಿಣಾಮಕಾರಿಯಾಗಿ ರುವಂತಹ ಕಾಡುಹಂದಿ ಹಾವಳಿಯನ್ನು ನಿವಾರಿಸುವ ಉದ್ದೇಶಕ್ಕಾಗಿ ಹೆಚ್ಚುವರಿ ಪರಿಣಾಮಕಾರಿ ಕ್ರಮಗಳನ್ನು ಜರುಗಿಸಲು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಮಾದರಿಯಲ್ಲಿ ಇನ್ನು ಹೆಚ್ಚಿನ ಕ್ರಮಗಳನ್ನು ತೆಗೆದುಕ್ಕೊಳ್ಳುವುದು ಹಾಗೂ ಕ್ಷೇತ್ರಮಟ್ಟದ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಸೂಚನೆ ನೀಡುವ ಅಗತ್ಯಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ.
ಇದರಂತೆ ಬೆಳೆ ಹಾನಿಮಾಡುವ ಕಾಡುಹಂದಿಗಳನ್ನು ಮಾಲೀಕರು ಬೆಳೆ ಬೆಳೆದಿರುವ ಪ್ರದೇಶದ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿರುವ ಬಂದೂಕಿನಿಂದ ಗುಂಡು ಹಾರಿಸಬಹುದಾಗಿದೆ ಅಥವಾ ಬೇಟೆಯಾಡಬಹುದಾಗಿದೆ.
ಇದರ ಅನ್ವಯ ಎಲ್ಲಾ ಬೆಳೆ ಹಾನಿ ಭಾದಿತ ರೈತರು ಕಾಡುಹಂದಿಗಳ ಬೇಟೆಯಾಡಬಹುದಾಗಿದೆ ಎಂಬುದು ಗಮನಾರ್ಹ ವಾಗಿದೆ.
ಹೀಗೆ ಬೇಟೆಯಾಡಿದ ಸತ್ತ ಅಥವಾ ಜೀವಂತ ಹಂದಿಗಳನ್ನು 24 ಘಂಟೆಯೊಳಗೆ ಹತ್ತಿರದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂಬುದು ಈ ಆದೇಶದಲ್ಲಿನ ಷರತ್ತುಗಳಲ್ಲಿ ತಿಳಿಸಲಾಗಿದೆ.
2016ರಲ್ಲಿ ಇಂತಹ ಆದೇಶ ಬಂದಿದ್ದರು ಅರಣ್ಯ ಇಲಾಖೆಯ ವರು ಅಗತ್ಯ ಪ್ರಚಾರ ಮಾಡದ ಕಾರಣಕ್ಕಾಗಿ ಭಾದಿತ ರೈತರಿಗೆ ಈ ಸಂಗತಿ ತಿಳಿಯದೆ ಲಕ್ಷಾಂತರ ಸಂಖ್ಯೆ ಯ ತೆಂಗಿನ ಗಿಡಗಳು ಸೇರಿದಂತೆ ವಿವಿಧ ರೀತಿಯ ಬೆಳೆಗಳು ಹಾನಿಯಾಗಿ ಕೊಟ್ಯಾಂತರ ರೂ ನಷ್ಠ ಉಂಟಾಗಿದೆ.
ಮಂಡ್ಯ ಜಿಲ್ಲೆಯಾದ್ಯಂತ ಹೆಚ್ಚಾಗಿರುವ ಕಾಡು ಹಂದಿಗಳ ಹಾವಳಿ ಮತ್ತು ಕಷ್ಠ ನಷ್ಠದ ಹಿನ್ನಲೆಯಲ್ಲಿ
ಇನ್ನಾದರು ಈ ಕುರಿತು ಅರಣ್ಯಾ ಇಲಾಖೆ ಈ ಕಾಡುಹಂದಿಗಳ ಹಾವಳಿಯಿಂದ ಸ್ವತ್ತುಹಾನಿ, ಬೆಳೆಹಾನಿ ಆದ ಸಂದರ್ಭದಲ್ಲಿ ಮತ್ತು ಪ್ರಾಣಹಾನಿ ತಡೆಯಲು ಕಾಡು ಹಂದಿಯ ಬೇಟೆಯಾಡಲು ಇರುವ ಅವಕಾಶ ಬಳಸಿಕೊಳ್ಳಲು ತಿಳಿಸಬೇಕು ಮತ್ತು ಈ ಬಗ್ಗೆ ಪ್ರಚಾರ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇತ್ತೀಚಿಗೆ ಮದ್ದೂರು ತಾಲ್ಲೂಕು ಕಛೇರಿಯಲ್ಲಿ ನಡೆದ ಕಾಡು ಹಂದಿಗಳ ನಿಯಂತ್ರಣ ಕುರಿತ ಚಳವಳಿ ಹಿನ್ನಲೆ ಯಲ್ಲಿ ತಹಶಿಲ್ದಾರರು ಕೂಡ ಈ ವಿಷಯದ ಪ್ರಚಾರಕ್ಕೆ ಅಗತ್ಯಕ್ರಮ ವಹಿಸಬೇಕು ಎಂದು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದರಾದರೂ ಇನ್ನೂ ಕ್ರಮ ಕೈಗೊಳ್ಳದಿರುವುದು ಯಾಕೆ ಎಂದು ಪ್ರಶ್ನಿಸಿದ ಅವರು, ಇದೇ ರೀತಿ ಮುಂದುವರೆದರೆ ಅರಣ್ಯ ಇಲಾಖೆಯ ಕಛೇರಿ ಮುಂದೆ ಆಹೋರಾತ್ರಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು