ನೆಲಬಾವಿಗೆ ಬಿದ್ದ ಕಾಡಾನೆ

ಚನ್ನಪಟ್ಟಣ.ಡಿ.೦೩ :ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ದಾಳಿ ಮಿತಿಮೀರಿದ್ದು, ಅವು ಕೃಷಿಕರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುವುದು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಹಾರ ಅರಸಿ ಬಂದ ಕಾಡಾನೆಯೊಂದು ಬಾವಿಗೆ ಬಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವ ಮೊದಲೇ ತನ್ನ ಸ್ವಪ್ರಯತ್ನದಿಂದ ಬಾವಿ ಇದ್ದ ಮೇಲೆದ್ದು ಅರಣ್ಯದ ಕಡೆಗೆ ಓಡಿದ ಘಟನೆ ನಡೆದಿದೆ.
ತಾಲ್ಲೂಕಿನ ಅಮ್ಮಳ್ಳಿದೊಡ್ಡಿ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ತಮ್ಮಯ್ಯ ಎಂಬುವವರ ಜಮೀನಿಲ್ಲಿ ಇರುವ ನೆಲ ಬಾವಿಯಲ್ಲಿ ಆನೆ ಬಿದ್ದು ಮೇಲಕ್ಕೆ ಬರಲಾಗದೆ ಸಂಕಷ್ಟ ಪಡುತ್ತಿತ್ತು. ಬೆಳಿಗ್ಗೆ ಜಮೀನಿಗೆ ಬಂದ ರೈತರು ಬಾವಿಯಲ್ಲಿ ಆನೆ ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಬಂದು ರಕ್ಷಿಸುವ ಮೊದಲೇ ಆನೆಯು ಜನರ ಸಪ್ಪಳ, ಗದ್ದಲದಿಂದ ಗಾಬರಿಯಾಗಿ ಬಾವಿಯಿಂದ ಮೇಲೇಳಲು ಶತಪ್ರಯತ್ನ ಮಾಡುತ್ತಲೇ ಇತ್ತು. ಸತತ ಎರಡು ಗಂಟೆ ಪ್ರಯತ್ನ ಮಾಡಿಯೂ ಸೋಲದೆ ತನ್ನ ಸ್ವಪ್ರಯತ್ನದಿಂದಲೇ ಬಾವಿಯಿಂದ ಮೇಲೆ ಬಂದು ಅರಣ್ಯದ ಕಡೆಗೆ ದಾಪುಗಾಲು ಇಟ್ಟಿತು. ಹಿಟಾಚಿ, ಜೆಸಿಬಿ ಹಾಗೂ ಸಿಬ್ಬಂದಿಗಳ ಜೊತೆ ಬಂದಂತಹ ಅರಣ್ಯಾಧಿಕಾರಿಗಳು ಬರಿಗೈಲಿ ಹಿಂದುರುಗಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು