Tel: 7676775624 | Mail: info@yellowandred.in

Language: EN KAN

    Follow us :


ಹಂಪಿ‌ ಕನ್ನಡ ವಿವಿಯಿಂದ ಶಿಕ್ಷಕಿ ಎಂ.ಕಮಲಮ್ಮ‌ ಅವರಿಗೆ ಪಿಎಚ್.ಡಿ. ಪದವಿ

Posted date: 04 Dec, 2022

Powered by:     Yellow and Red

ಹಂಪಿ‌ ಕನ್ನಡ ವಿವಿಯಿಂದ ಶಿಕ್ಷಕಿ ಎಂ.ಕಮಲಮ್ಮ‌ ಅವರಿಗೆ ಪಿಎಚ್.ಡಿ. ಪದವಿ

ರಾಮನಗರ, ಡಿ.3- ಶಿಕ್ಷಕಿ ಎಂ.ಕಮಲಮ್ಮ‌ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಸ್ತುತ ಪಡಿಸಿದ "ಮೈಸೂರು ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿ ಮಹಿಳಾ ಅಸ್ಮಿತೆಯ ಹುಡುಕಾಟ" ಮಹಾ ಪ್ರಬಂಧಕ್ಕೆ ಪಿಎಚ್.ಡಿ ಪದವಿ ಲಭಿಸಿದೆ.

ಇವರು ಮೈಸೂರಿನ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಚ್.ಪಿ.ಗೀತಾ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ. 

ಮಂಡ್ಯದ ಕರ್ನಾಟಕ ಸಂಘದ ಎಂ.ಎಲ್. ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಸಂಶೋದನೆ‌ ಕೈಗೊಂಡಿದ್ದರು.


ಇವರು ಪ್ರಸ್ತುತ ರಾಮನಗರದ ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದು, ರಾಜ್ಯಕ್ಕೆ 5 ನೇ ರ್ಯಾಂಕ್ ಪಡೆದಿದ್ದರು. 

 

"ಶಿವರಾಮ ಕಾಡನಕುಪ್ಪೆ ಅವರ

ಸಾಹಿತ್ಯ" ಕುರಿತ ಅಧ್ಯಯನ ಮಂಡನೆಗೆ 2013 ರಲ್ಲಿ‌ ಹಂಪಿ‌ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿ ಪಡೆದುಕೊಂಡಿದ್ದಾರೆ.


ಇವರು ಇದೀಗ ಮಹಿಳಾ ರಂಗಭೂಮಿಯ ಬಗ್ಗೆ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗಾ ಸೇರಿದಂತೆ ಹಳೆ ಮೈಸೂರು ಪ್ರದೇಶದ ಜಿಲ್ಲೆಗಳಲ್ಲಿನ ಮಹಿಳಾ ವೃತ್ತಿ ರಂಗಭೂಮಿ‌ ಬಗ್ಗೆ ಕಳೆದ ಆರು ವರ್ಷಗಳಿಂದ ಮೈಸೂರಿನ ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಎಚ್.ಪಿ.ಗೀತಾ ಅವರ ಮಾರ್ಗದರ್ಶನದಲ್ಲಿ "ಮೈಸೂರು ಕರ್ನಾಟಕ ವೃತ್ತಿ ರಂಗಭೂಮಿಯಲ್ಲಿ ಮಹಿಳಾ ಅಸ್ಮಿತೆಯ ಹುಡುಕಾಟ" ಎಂಬ ವಿಷಯದ ಮೇಲೆ ಸಮಗ್ರ ಅಧ್ಯಯನ‌ ಮತ್ತು ಕ್ಷೇತ್ರ ಕಾರ್ಯ ನಡೆಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑