Tel: 7676775624 | Mail: info@yellowandred.in

Language: EN KAN

    Follow us :


ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

Posted date: 05 Dec, 2022

Powered by:     Yellow and Red

ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

ಚನ್ನಪಟ್ಟಣ: ನಗರ ಸೇರಿದಂತೆ ತಾಲೂಕಿನಾದ್ಯಂತ ಹಲವಾರು ಆಂಜನೇಯ ದೇವಾಲಯಗಳಲ್ಲಿ ಸೋಮವಾರ ವಿಜೃಂಭಣೆಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು. ಪಟ್ಟಣದ ಕೋದಂಡರಾಮ ಬಡಾವಣೆಯ ಆಂಜನೇಯಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯ, ಸಾತನೂರು ರಸ್ತೆಯ ಚನ್ನಪ್ಪಸ್ವಾಮಿ ಮಠ, ನೀಲಕಂಠನಹಳ್ಳಿ ಅಡ್ಡರಸ್ತೆಯ ಅಭಯ ಆಂಜನೇಯಸ್ವಾಮಿ ದೇವಾಲಯ, ಮಂಗಳವಾರಪೇಟೆ ದೇವಾಲಯ, ಕೋಡಂಬಳ್ಳಿ, ಹೊಂಗನೂರು, ಕೂಡ್ಲೂರು ಗ್ರಾಮಗಳಲ್ಲಿರುವ ಹಲವಾರು ಹನುಮನ ದೇವಾಲಯಗಳಲ್ಲಿ ಸೋಮವಾರ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದ ಆಂಜನೇಯ ಮೂರ್ತಿಗೆ ಅಭಿಷೇಕ, ಬೆಣ್ಣೆ ಅಲಂಕಾರ ಮಹಾಮಂಗಳಾರತಿ ನಡೆದವು.


ಜನಸಾಗರ: ನಗರದ ಕೋದಂಡರಾಮ ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸತತ 56 ವರ್ಷಗಳಿಂದಲೂ ಹನುಮ ಜಯಂತಿಯನ್ನು ಆಚರಣೆ ಮಾಡುತ್ತಾ ಬಂದಿರುವ ಭಕ್ತ ಮಂಡಳಿ ವರ್ಷ ವರ್ಷಕ್ಕೆ ಹಲವು ವಿಭಿನ್ನತೆಯೊಂದಿಗೆ ಹನುಮ ಜಯಂತಿಯನ್ನು ಆಚರಣೆ ಮಾಡುತ್ತಿದೆ. ಕಳೆದ ವರ್ಷ ಕೊರೋನಾ ಕಾರಣದಿಂದ ಸರಳವಾಗಿ ಆಚರಿಸಿದ್ದ ಹನುಮಜಯಂತಿಯನ್ನು ಈ ವರ್ಷ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.¨

ಬೆಳಿಗ್ಗೆ 12ಗಂಟೆಗೆ ಆರಂಭವಾದ ಅನ್ನಸಂತರ್ಪಣೆ ಕಾರ್ಯಕ್ರಮ ಸಂಜೆ 5 ಗಂಟೆವರೆಗೆ ನಡೆಯಿತು. ಈ ವೇಳೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಪ್ರಸಾಧ ಸ್ವೀಕರಿಸಿ ದೇವರ ದರ್ಶನ ಪಡೆದರು.

ರಾತ್ರಿ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಹನುಮ ದೇವರ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.


ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯ ವಿ.ರಾಮು, ದೇವಸ್ಥಾನದ ಪದಾಧಿಕಾರಿಗಳಾದ ಲಕ್ಷ್ಮೀನಾರಾಯಣ, ಗೋವಿಂದಪ್ಪ, ವಸಂತ, ಶ್ರೀನಿವಾಸ್, ಪಾರ್ಥ, ಆನೆರಾಮಣ್ಣ, ನಾರಾಯಣರಾವ್, ಲಕ್ಷ್ಮಣ, ಮಹದೇವ, ನಗರಸಭಾ ಮಾಜಿ ಸದಸ್ಯ ಎಂ.ರಾಜು, ಆಟೋಗುಂಡ, ಕೃಷ್ಣ, ಅನಂತರಾಮು, ಬಸ್‍ಗೋಪಿ, ಕಿಚುಡಿ ಕೃಷ್ಣ, ವಾಟರ್‌ ಸಿದ್ದ, ಡಿ.ಸಿ.ಕೃಷ್ಣ, ಮಂಜುನಾಥ್, ಆಟೋ ರಾಜೇಶ್, ರಘು, ಶ್ಯಾಂಕುಮಾರ್, ಬೆಣ್ಣೆಕೃಷ್ಣ, ಆನಂದ, ಕಪಾಲಿ, ಕಂಬಿ ರಾಜ, ಕುಮಾರ್, ಯೋಗೇಶ್, ಬೀರಪ್ಪ, ಶಿವಣ್ಣ, ಸುರೇಶ್, ಮೋಹನ, ಆಟೋ ಮಂಜ, ಮಂಜ, ಆಟೋ ವೆಂಕಟೇಶ್, ಬಲರಾಮ, ದೀಪು, ಕಿರಣ, ಬೆಂಗಳೂರು ಬಾರ್ ಸೂರಿ, ಲಾಂಡ್ರಿ ಲಕ್ಷ್ಮಣ  ಸೇರಿದಂತೆ ಬಡಾವಣೆಯ ಯುವಕರು ಹನುಮಜಯಂತಿಯಲ್ಲಿ ಭಾಗವಹಿಸಿ ಶ್ರಮಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑