ಪ್ರಗತಿಪರ ರೈತರನ್ನು ಸನ್ಮಾನಿಸಿದ ತಾಲ್ಲೂಕು ಆಡಳಿತ

ಚನ್ನಪಟ್ಟಣ ಜ..೧೬: ತಾಲೂಕು ಕಚೇರಿಯಲ್ಲಿ ಸೋಮವಾರ ವಿಶೇಷವಾಗಿ ತಾಲ್ಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ನೌಕರರ ಸಂಘವು ಸಂಕ್ರಾಂತಿ ಹಬ್ಬ ಆಚರಣೆ ಮೂಲಕ ರೈತರನ್ನು ಸನ್ಮಾನಿಸಿ ಹು(ಸು)ಗ್ಗಿ ಹಬ್ಬಕ್ಕೆ ಮತ್ತಷ್ಟು ಮರೆಗು ನೀಡಿದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗ ಇದೇ ಪ್ರಥಮವಾಗಿ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ ಅಧಿಕಾರಿಗಳು, ಸಿಬ್ಬಂದಿಗಳು ಕಚೇರಿಯ ಆವರಣದಲ್ಲಿ ಬಣ್ಣ ಬಣ್ಣಗಳಿಂದ ರಂಗೋಲೆಯನ್ನು ಬಿಡಿಸಿ, ಕಬ್ಬು, ಎಳ್ಳು, ಬೆಲ್ಲ, ಬಣ್ಣದ ಮಡಿಕೆಗಳನ್ನು ಜೋಡಿಸಿ ವಿಶೇಷವಾಗಿ ಸಿಂಗಾರ ಮಾಡಿ ತಾಲೂಕು ಕಚೇರಿಯಲ್ಲಿ ಹಳ್ಳಿಯ ಸೊಗಡನ್ನು ರಚಿಸಿದ್ದರು.
ಸಂದರ್ಭದಲ್ಲಿ ಕಂದಾಯ ಇಲಾಖೆ ನೌಕರರ ಸಂಘದವರು ಸಾಂಪ್ರದಾಯಿಕ ಉಡುಗೆ ಉಟ್ಟು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಭಾರ ತಹಶೀಲ್ದಾರ್ ಶ್ರೀಮತಿ ಲಕ್ಷೀದೇವಿ ರವರು ತಾಲೂಕಿನ ಪ್ರಗತಿ ಪರ ರೈತರುಗಳನ್ನು ಆಹ್ವಾನಿಸಿ ಎಳ್ಳು, ಬೆಲ್ಲ ಹಂಚಿ, ಅವರಿಗೆ ಹಸಿರು ಶಾಲು, ತೆಂಗಿನ ಸಸಿ ನೀಡಿ ಗೌರವಿಸಿದರು. ಹಾಗೂ ರೈತ ಭಾಂದವರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಮತ್ತು ಗೋ ಪೂಜೆ ಮಾಡಿ ಸಿಹಿ ತಿನ್ನಿಸಿ ತಾಲ್ಲೂಕಿನ ಜನತೆಗೆ ಶುಭಕೋರಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಉಪ ತಹಶೀಲ್ದಾರ್ ಹರೀಶ್ ಕುಮಾರ್, ಶಿರೆಸ್ಥೇದಾರ್ ಸೋಮೇಶ್, ಲೋಕೇಶ್, ದೀಪಕ್, ಕಂದಾಯ ಇಲಾಖೆ ನೌಕರ ಸಂಘದ ಅಧ್ಯಕ್ಷರಾದ ಭರತ್, ನಿರ್ದೇಶಕರಾದ ಶಿವು, ಗಿರೀಶ್, ರೆವಿನ್ಯೂ ಇನ್ಸ್ಪೆಕ್ಟರ್ಗಳಾದ ಶ್ರೀಧರ್, ವೀರೇಶ್, ಸೋಮಶೇಖರ್ ಹಾಗೂ ಸಂಘದ ಪದಾಧಿಕಾರಿಗಳಾದ ನಿಖತ್, ಬಿಂದುಶ್ರೀ, ಕವಿತಾ, ಸೌಮ್ಯ, ಉಮೇಶ್, ಜಯರಾಂ ಇತರೇ ಪದಾಧಿಕಾರಿಗಳು ಹಾಗೂ ತಹಶೀಲ್ದಾರ್ ಕಛೇರಿಯ ಎಲ್ಲಾ ನೌಕರರು ಭಾಗವಹಿಸಿದ್ದರು.
ರೈತರುಗಳಾದ ಸೀಬನಹಳ್ಳಿ ಗ್ರಾಮದ ಶಶಿಕುಮಾರ್, ಮೆಣಸಿಗನಹಳ್ಳಿ ಗ್ರಾಮದ ಬಸವೇಶ್ವರ, ದ್ಯಾವಪಟ್ಟಣ ಗ್ರಾಮದ ಜಯರಾಮು, ದೇವರಹೊಸಹಳ್ಳಿ ಲಕ್ಷ್ಮೀನರಸಿಂಹೇಗೌಡ, ಕೋಟಮಾರನಹಳ್ಳಿ ವೆಂಕಟೇಶ್ ಅವರುಗಳನ್ನು ಸನ್ಮಾನಿಸಲಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು