Tel: 7676775624 | Mail: info@yellowandred.in

Language: EN KAN

    Follow us :


ಯುವಕವಿ 'ಲಕ್ಷ್ಮಿ ಕಿಶೋರ್ ಅರಸ್' ಗೆ

Posted date: 17 Jan, 2023

Powered by:     Yellow and Red

ಯುವಕವಿ 'ಲಕ್ಷ್ಮಿ ಕಿಶೋರ್ ಅರಸ್' ಗೆ

ತಾಲೂಕಿನ ಕೂಡ್ಲೂರು ಗ್ರಾಮದ ಯುವಕವಿ,ಲೇಖಕ ' ಲಕ್ಷ್ಮಿ ಕಿಶೋರ್ ಅರಸ್' ರವರಿಗೆ ಕರ್ನಾಟಕ ರಾಜ್ಯ ಯುವಸಂಘಗಳ ಒಕ್ಕೂಟ ಕೂಡ ಮಾಡುವ ಪ್ರತಿಷ್ಠಿತ" ರಾಜ್ಯ ಯುವ ಪ್ರಶಸ್ತಿ" ಲಭಿಸಿದೆ.


ರಾಮನಗರ ಜಿಲ್ಲೆಯಿಂದ ಯುವ ಲೇಖಕ, ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು ರಾಜ್ಯ ಯುವ ಸಂಘಗಳ ಒಕ್ಕೂಟ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಭಾಗಿತ್ವದಲ್ಲಿ ಪ್ರತಿ ವರ್ಷ ಕೊಡ ಮಾಡಲ್ಪಡುವ "ರಾಜ್ಯ ಯುವ ಪ್ರಶಸ್ತಿಗೆ"  ಭಾಜನರಾಗಿದ್ದಾರೆ .ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಯುವ ಸಾಧಕರನ್ನು ಗುರುತಿಸಿ ಅವರಿಗೆ ಅತಿ ಹೆಚ್ಚು ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಯುವಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಎಂದು ರಾಜ್ಯಾಧ್ಯಕ್ಷರಾದ ಡಾ. ಎಸ್. ಬಾಲಾಜಿಯವರು ರವರು ತಿಳಿಸಿದ್ದಾರೆ.


ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉತ್ಸಾಹಿ ಯುವ ಲೇಖಕ, ಅಂಕಣಕಾರ 'ಲಕ್ಷ್ಮಿ ಕಿಶೋರ್ ಅರಸ್ 'ರವರನ್ನು ರಾಮನಗರ ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.


ಇದೇ ಜ.18 ರಂದು ಕುಕ್ಕೆ ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದಲ್ಲಿ ಜರುಗಲಿರುವ ಯುವ ಸಮ್ಮೇಳನ ಹಾಗೂ ತರಬೇತಿ ಕಾರ್ಯಗಾರ ಮತ್ತು "ರಾಜ್ಯ ಯುವ ಪ್ರಶಸ್ತಿ ಪ್ರಧಾನ" ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ" ಶ್ರೀ ಬಿ. ಸಿ ನಾಗೇಶ್" ರವರು  ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑