ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ

ಚನ್ನಪಟ್ಟಣ:16/01/2023:ರಂತಾಲ್ಲೂಕಿನ ಎಲೆತೋಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಕನಹಳ್ಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಪ್ರಗತಿಯಲ್ಲಿದ್ದ ಮುದ್ದೆಗೌಡನಕಟ್ಟೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನದಡಿ ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಂತರ ಕಾರ್ಯಕ್ರಮ ಕುರಿತು ಎಲೆತೋಟದಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ಚಂದ್ರಶೇಖರ್ ರವರು ಮಾತನಾಡಿ, ಟಿ ಬಿ ರೋಗ ಒಂದು ಸಾಂಕ್ರಾಮಿಕ ರೋಗವಾಗಿದ್ದು ಎರಡು ವಾರಕ್ಕೂ ಹೆಚ್ಚು ದಿನಗಳ ಕಾಲ ಕೆಮ್ಮು, ಜ್ವರ ಕಾಣಿಸಿಕೊಳ್ಳುವುದು ರಾತ್ರಿವೇಳೆ ಬೆವರುವುದು, ತೂಕ ಕಡಿಮೆಯಾಗುವುದು, ಎದೆ ನೋವು ಇವೆಲ್ಲವೂ ಟಿ ಬಿ ರೋಗದ ಲಕ್ಷಣಗಳಾಗಿದ್ದು ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು. ಜೊತೆಗೆ ರಕ್ತದೊತ್ತಡ, ಮಧುಮೇಹ ರೋಗಗಳು ಬರಲು ಮುಖ್ಯ ಕಾರಣ ಆಹಾರ ಮತ್ತು ಜೀವನ ಶೈಲಿ ಯಾಗಿರುತ್ತದೆ 40 ವರ್ಷ ಮೀರಿದವರು ತಿಂಗಳಿಗೊಮ್ಮೆಯಾದರು ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರಿಗೆ ಸ್ಥಳದಲ್ಲೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದು ಪ್ರತಿ ಒಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರದ ಅನುಕೂಲಗಳು ಬಡ ವರ್ಗಗಳನ್ನು ತಲುಪಿಸುವ ಗುರಿಯನ್ನೆ ಹೊಂದಿದ್ದು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾದ ಕೆಲಸಗಳಾಗಿವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ರವರು ಕಾರ್ಯಕ್ರಮ ಕುರಿತು ಮಾತನಾಡಿದರು.
ನಂತರ ತಾಲ್ಲೂಕು ಐ ಇ ಸಿ ಸಂಯೋಜಕರಾದ ಭವ್ಯರವರು ಮಾತನಾಡಿ ನರೇಗಾ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಪ್ರದೇಶಗಳ ಬಡ ಜನರ ಅಭಿವೃದ್ಧಿ ಪಡಿಸುವುದೇ ಆಗಿದ್ದು ಆರ್ಥಿಕವಾಗಿ ಸಬಲರಾಗಿಸುವ ಜೊತೆಗೆ ಅವರ ಆರೋಗ್ಯದ ಮೇಲು ಕಾಳಜಿ ವಹಿಸುವ ದೃಷ್ಠಿಯಲ್ಲಿ ಕೆಲಸದ ಸ್ಥಳದಲ್ಲೆ ಆರೋಗ್ಯ ತಪಾಸಣೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ನಂತರ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಚನ್ನಪಟ್ಟಣ ತಾಲ್ಲೂಕು ಸಂಯೋಜಕರಾದ ನವೀನ್ ರವರು ಮಾತನಾಡಿ ಇತ್ತೀಚೆಗೆ ಹೆಚ್ಚಾಗಿ ಭಾದಿಸುತ್ತಿರುವ ಅಪೌಷ್ಠಿಕತೆ ಹಾಗೂ ರಕ್ತ ಹೀನತೆ ಕುರಿತು ಮಾತನಾಡಿದರು ನಮ್ಮ ದಿನ ನಿತ್ಯದ ಆಹಾರ ಜೀವನದ ಶೈಲಿಯಿಂದ ಕಂಡುಬರುವ ರೋಗವಾಗಿದ್ದು ರಸ್ತೆ ಬದಿ ತಿಂಡಿ ತಿನಿಸುಗಳ ಸೇವನೆಯಿಂದ ಉಂಟಾಗುವ ರೋಗವಾಗಿದ್ದು ಸೊಪ್ಪು, ತರಕಾರಿ, ದ್ವಿದಳ ಧಾನ್ಯಗಳನ್ನು ಹಣ್ಣು ಮುಂತಾದ ಪೌಷ್ಟಿಕ ಆಹಾರಗಳ ಸೇವನೆ ಮಾಡಬೇಕು ಎಂದು ತಿಳಿಸಿದರು.
ಸುಮಾರು 50 ಜನ ನರೇಗಾ ಕೂಲಿ ಕಾರ್ಮಿಕರಿಗೆ ರಕ್ತದೊತ್ತಡ, ಮಧುಮೇಹ ಪ್ರಮಾಣದ ಪರೀಕ್ಷೆ ಮಾಡಲಾಯಿತು. ಬೇರೆ ಆರೋಗ್ಯ ಸಮಸ್ಯೆ ಕಂಡುಬಂದಂತಹ ಕೂಲಿಕಾರರಿಗೆ ವೈದ್ಯರು PHC ಕೇಂದ್ರಕ್ಕೆ ಶಿಫಾರಸ್ಸು ಮಾಡಿದರು.
ಈ ವೇಳೆ ಪಂಚಾಯತಿ ಸಿಬ್ಬಂದಿಗಳು, ತಾಂತ್ರಿಕ ಸಂಯೋಜಕರಾದ ಸಚಿನ್ , ತಾಂತ್ರಿಕ ಅಭಿಯಂತರಾದ ಅಶ್ರಫ್, ಆರೋಗ್ಯ ಅಮೃತ ಅಭಿಯಾನ ಸಂಯೋಜಕರಾದ ನವೀನ್, ಶುಶ್ರೂಷಕಿಯರಾದ ಮುದ್ದಮ್ಮ, ಆಶಾ, ಕಾಯಕ ಮಿತ್ರ, ಬಿ ಬಿ ಎಫ್ ಟಿ, ಕಾಯಕ ಬಂದುಗಳು, ಗ್ರಾಪಂ ಸದಸ್ಯರು, ನರೇಗಾ ಕೂಲಿ ಕಾರ್ಮಿಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು