Tel: 7676775624 | Mail: info@yellowandred.in

Language: EN KAN

    Follow us :


ನಗರದಲ್ಲಿ ನಾಲ್ಕು ಕಿಲೋ ಗಾಂಜಾ, ಒಂದು ಕಾರು, ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ಅಬಕಾರಿ ಪೋಲಿಸರು

Posted date: 18 Jan, 2023

Powered by:     Yellow and Red

ನಗರದಲ್ಲಿ ನಾಲ್ಕು ಕಿಲೋ ಗಾಂಜಾ, ಒಂದು ಕಾರು, ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ಅಬಕಾರಿ ಪೋಲಿಸರು

ರಾಮನಗರ:ಚನ್ನಪಟ್ಟಣ:16/01/23: ನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಎಪಿಎಂಸಿ ಮಾರುಕಟ್ಟೆ ಬಳಿ ಖಚಿತ ಮಾಹಿತಿ ಮೇರೆಗೆ  ಅಬಕಾರಿ ಪೋಲಿಸರು ಒಂದು ಸ್ವಿಫ್ಟ್ ಕಾರು, ನಾಲ್ಕು ಮಂದಿ ಆರೋಪಿಗಳು ಹಾಗೂ ಅವರ ಬಳಿ ಇದ್ದ 4 ಕಿಲೋ 350ಗ್ರಾಂ ಮುದ್ದೆಯಂತಿರುವ ಗಾಂಜಾವನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಮಂಗಳವಾರ ತಡರಾತ್ರಿ ಜರುಗಿದೆ.


ಜಂಟಿ ಆಯುಕ್ತರು, ಬೆಂಗಳೂರು (ದಕ್ಷಿಣ) ಹಾಗೂ ಅಬಕಾರಿ ಉಪ ಆಯುಕ್ತರು ರಾಮನಗರ ಜಿಲ್ಲೆ, ರಾಮನಗರ ಇವರ ನಿರ್ದೇಶನದಂತೆ, ಅಬಕಾರಿ ಉಪ ಅಧೀಕ್ಷಕರು, ರಾಮನಗರ ಉಪ ವಿಭಾಗ, ರಾಮನಗರ ಹಾಗೂ ಠಾಣಾ ಸಿಬ್ಬಂದಿಗಳೊದಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಚನ್ನಪಟ್ಟಣದಿಂದ ರಾಮನಗರ ಕಡೆಗೆ ಹೋಗುವ ರಸ್ತೆಯಲ್ಲಿರುವ ಆಲ್ ಮದೀನ ಫ್ಯಾಮಿಲಿ ಹೋಟೆಲ್ ಮುಂಭಾಗ, ಎಪಿಎಂಸಿ ಮಾರುಕಟ್ಟೆ ಹತ್ತಿರ ನಿಂತಿದ್ದ ಬಿಳಿ ಬಣ್ಣದ ಮಾರುತಿ ಸ್ವಿಫ್ ಕಾರ್ ಹಳದಿ ಬಣ್ಣದ ನೋಂದಣಿ ಸಂಖ್ಯೆ ಕೆಎ-42-ಬಿ-4113 ವಾಹನದಲ್ಲಿ ಅಯುಬ್ ಎಂಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಹೊಂದಿ ಮಾರಾಟ ಮಾಡುವ ಉದ್ದೇಶದಿಂದ ಕಾರಿನಲ್ಲಿರುವುದು ಕಂಡು ಬಂದಿದ್ದು ಸದರಿ ವಾಹನವನ್ನು ತಪಾಸಣೆ ಮಾಡಿದಾಗ ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಒಟ್ಟು 4.350 ಕೆ.ಜಿ ಘಾಟು ವಾಸನೆಯುಳ್ಳ ಹೂ, ಬೀಜ ತೆನೆಗಳಿಂದ ಕೂಡಿದ ಒಣ ಗಾಂಜಾ ಇರುವುದು ಕಂಡು ಬಂದಿದೆ. ಖಚಿತ ಮಾಹಿತಿ ಮೇರೆಗೆ ಕಳೆದ ಮೂರು ದಿನಗಳಿಂದ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದ ಅಬಕಾರಿ ಪೋಲಿಸರು ಇದೇ ವಾಹನವನ್ನು ಮೈಸೂರಿನಿಂದ ಬೆನ್ನಟ್ಟಿದ್ದು ಚನ್ನಪಟ್ಟಣ ನಗರದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.


ಇದು ಎನ್.ಡಿ.ಪಿ.ಎಸ್. ಕಾಯ್ದೆ 1985 ರ ಕಲಂ 8(c), 20(b), 20(b)(ii)(B), 25 ಹಾಗೂ 60 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು, ಕಾರಿನಲ್ಲಿದ್ದ ಅಯೂಬ್ ಪಾಷಾ ಕೋಂ  ಅಬ್ದುಲ್ ಘನಿಸಾಬ್, ಮೆಹಬೂಬ್ ನಗರ ಮೊಹಲ್ಲಾ ರಾಮನಗರ, ಶಬ್ಬೀರ್ ಪಾಷಾ ಕೋಂ ಅಬ್ದುಲ್ ಘನಿಸಾಬ್ ಮೆಹಬೂಬ್ ನಗರ ಮೊಹಲ್ಲಾ ರಾಮನಗರ, ಶಿವರಾಜು ಕೋಂ ಲೇ ಮಲ್ಲೇಶ, ಕಾವೇರಿದೊಡ್ಡಿ ರಾಮನಗರ ತಾಲ್ಲೂಕು ಮತ್ತು ಕಾರಿನ ಮಾಲೀಕ ಸಚಿನ್ ಎಂ ಲೇ ಮಹದೇವಯ್ಯ ವಿಭೂತಿಕೆರೆ ರಾಮನಗರ ತಾಲ್ಲೂಕು. ಎಂಬ ನಾಲ್ಕು ಮಂದಿ ಆರೋಪಿಗಳನ್ನು ದಸ್ತಗಿರಿಗೊಳಿಸಿ, ಕಾರು ಹಾಗೂ ಮುದ್ದೆಮಾಲನ್ನು ಇಲಾಖಾ ವಶಕ್ಕೆ ಪಡೆದು ಸದರಿ ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆಯನ್ವಯ ಮೊಕದ್ದೆಮಯನ್ನು ದಾಖಲಿಸಿ ಮಾನ್ಯ ಘನ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.


ಮೊಕದ್ದಮೆಯನ್ನು ಅಬಕಾರಿ ಉಪ ಅಧೀಕ್ಷಕರು, ರಾಮನಗರ ಉಪ ವಿಭಾಗ, ರಾಮನಗರ ರವರು ದಾಖಲಿಸಿರುತ್ತಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑