Tel: 7676775624 | Mail: info@yellowandred.in

Language: EN KAN

    Follow us :


ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ, ಡಾ ಮಲವೇಗೌಡ.\"

Posted date: 18 Jun, 2018

Powered by:     Yellow and Red

ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ, ಡಾ ಮಲವೇಗೌಡ.\

ರಕ್ತದಾನ ಮಾಡಿದರೆ ಅಗತ್ಯ ಇರುವವರಿಗೆ ಅನುಕೂಲ ಆಗುವುದರ ಜೊತೆಗೆ ರಕ್ತದಾನ ಮಾಡಿದವರಿಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಖ್ಯಾತ ಮೂಳೆ ತಜ್ಞ ಡಾ ಮಲವೇಗೌಡರು ತಿಳಿಸಿದರು.

ಅವರು ತಮ್ಮ ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಹದಿನೆಂಟು ವರ್ಷದಿಂದ ಅರವತ್ತು ವರ್ಷಗಳ ತನಕವೂ ವರ್ಷಕ್ಕೆರಡು ಬಾರಿ ರಕ್ತದಾನ ಮಾಡಬಹುದು, ಅಂದರೆ ಅವರ ಜೀವಿತಾವಧಿಯಲ್ಲಿ ಎಂಭತ್ನಾಲ್ಕು ಮಂದಿಗೆ ಜೀವದಾನ ಮಾಡಿದಂತಾಗುತ್ತದೆ, ಇದರಿಂದ ಆ ವ್ಯಕ್ತಿಗೆ ಆತ್ಮ ತೃಪ್ತಿ ಸಿಗುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ಏಳ್ಗೆಗೆ ಕಾರಣವಾಗುತ್ತಾರೆ.


ಒಬ್ಬ ವ್ಯಕ್ತಿಯು ಒಂದು ಬಾರಿ ರಕ್ತದಾನ ಮಾಡಿದರೆ ಕನಿಷ್ಠ ನಾಲ್ಕು ಗಂಟೆಗಳ ಕಾಲದಲ್ಲಿ ಅದು ಮರು ಉತ್ಪಾದನೆ ಆಗುತ್ತದೆ, ಹಾಗೂ ಅವರ ದೇಹದಲ್ಲಿನ ಕೊಬ್ಬಿನ ಅಂಶದ ಜೊತೆಗೆ ಅನೇಕ ರೋಗ ರುಜಿನಗಳು ಕಡಿಮೆಯಾಗುತ್ತವೆ, ಹಾಗಾಗಿ ಆರೋಗ್ಯವಂತ ಯುವಕರು ರಕ್ತದಾನ ಮಾಡುವುದನ್ನು ರೂಢಿಸಿಕೊಳ್ಳಬೇಕೆಂದು ಯುವಕರಿಗೆ ಕರೆ ನೀಡಿದರು.


ರಕ್ತದಾನ ಶಿಬಿರದಲ್ಲಿ ಗೋ ರಾ ಶ್ರೀನಿವಾಸ, ವಿಜಯಕುಮಾರ, ಪ್ರಸನ್ನ, ಚನ್ನೇಗೌಡ,

ರೆಡ್ ಕ್ರಾಸ್‌ ಸಂಸ್ಥೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ, ಮಾತೃಶ್ರೀ ಆರ್ಥೋಪೆಡಿಕ್ ಆಸ್ಪತ್ರೆಯ ಸಿಬ್ಬಂದಿ ಗಳು ಭಾಗವಹಿಸಿದ್ದರು.


ಐವತ್ತಕ್ಕೂ ಹೆಚ್ಚು ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.

 

ಗೋ ರಾ ಶ್ರೀನಿವಾಸ...

ಮೊ; 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑