Tel: 7676775624 | Mail: info@yellowandred.in

Language: EN KAN

    Follow us :


ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ

Posted date: 18 Jul, 2018

Powered by:     Yellow and Red

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ

ಲೀಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ ಗಳಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ಬೌಲರ್ ಗಳ ನಿಖರ ಬೌಲಿಂಗ್ ದಾಳಿಯಿಂದ 256 ರನ್ ಅಲ್ಪ ಮೊತ್ತ ಪೇರಿಸಿತ್ತು. ಭಾರತ ನೀಡಿದ 257 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವನ್ನು ಇಯಾನ್ ಮೋರ್ಗನ್ ಮತ್ತು ಜೋ ರೂಟ್ ಭರ್ಜರಿ ಬ್ಯಾಟಿಂಗ್ ಗೆಲುವಿನ ದಡ ಸೇರಿಸಿತು. 

ಇಂಗ್ಲೆಂಡ್ ಪರ ವಿನ್ಸ್ 27, ಬೈರ್ಸ್ಟೋವ್ 30, ಜೋ ರೂಟ್ ಅಜೇಯ 100 ಹಾಗೂ ಇಯಾನ್ ಮೋರ್ಗನ್ ಅಜೇಯ 88 ರನ್ ಗಳಿಸಿದ್ದಾರೆ. 

ಭಾರತ ಪರ ರೋಹಿತ್ ಶರ್ಮಾ 2, ಶಿಖರ್ ಧವನ್ 44, ವಿರಾಟ್ ಕೊಹ್ಲಿ 71, ದಿನೇನ್ ಕಾರ್ತಿಕ್ 21, ಎಂಎಸ್ ಧೋನಿ 42, ಭುವನೇಶ್ವರ್ ಕುಮಾರ್ 21 ಹಾಗೂ ಶಾರ್ದೂಲ್ ಠಾಕೂರ್ ಅಜೇಯ 22 ರನ್ ಬಾರಿಸಿದ್ದಾರೆ. 

ಇಂಗ್ಲೆಂಡ್ ಪರ ರಶೀದ್ ಅದಿಲ್ ರಶೀದ್ ಮತ್ತು ವಿಲ್ಲಿ ತಲಾ 3 ವಿಕೆಟ್ ಹಾಗೂ ವೂಡ್ 1 ವಿಕೆಟ್ ಪಡೆದಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಸರಣಿ ಕೈವಶ ಮಾಡಿದೆ.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑