Tel: 7676775624 | Mail: info@yellowandred.in

Language: EN KAN

    Follow us :


ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು

Posted date: 18 Jul, 2018

Powered by:     Yellow and Red

ಆರ್ ಸಿ, ಲೈಸೆನ್ಸ್, ಇನ್ಶೂರೆನ್ಸ್‌ ಇನ್ನು ಮೊಬೈಲ್‍‍ನಲ್ಲಿ ಇದ್ದರೆ ಸಾಕು

ದೆಹಲಿ: ಇನ್ನು ಮುಂದೆ ವಾಹನ ಸವಾರರು ಆರ್‌.ಸಿ., ಡ್ರೈವಿಂಗ್‌ ಲೈಸೆನ್ಸ್‌, ಇನ್ಶೂರೆನ್ಸ್‌ ದಾಖಲೆಗಳನ್ನು ಹೋದಲ್ಲೆಲ್ಲಾ ಹೊತ್ತೂಯ್ಯುವ ಅಗತ್ಯವಿಲ್ಲ. ಮೊಬೈಲ್‌ನಲ್ಲೇ ಡಿಜಿ ಲಾಕರ್‌ನಲ್ಲಿ ದಾಖಲೆಗಳನ್ನು ಇಟ್ಟುಕೊಂಡು, ಅಧಿಕಾರಿಗಳು ಕೇಳಿದಾಗ ಅದನ್ನೇ ತೋರಿಸಿದರೆ ಸಾಕು!

ಹೌದು, ಕೇಂದ್ರ ಮೋಟಾರು ವಾಹನ ನಿಯಮಾವಳಿಗಳಿಗೆ ತರಲಾದ ತಿದ್ದುಪಡಿಯಲ್ಲಿ ಈ ಅಂಶಗಳನ್ನು ಸೇರಿಸಲಾಗಿದೆ. ಈ ಹೊಸ ನಿಯಮಗಳು ವಾಹನಗಳ ಮಾಲಿಕರಿಗೆ ನೆಮ್ಮದಿ ತರಲಿವೆ. ಜತೆಗೆ ರಾಷ್ಟ್ರೀಯ ಪರವಾನಿಗೆ ಹೊಂದಿರುವ ವಾಣಿಜ್ಯ ವಾಹನಗಳಿಗೆ ಫಾಸ್ಟ್ಯಾಗ್‌ ಕಡ್ಡಾಯ, 8 ವರ್ಷ ಮೀರಿದ ವಾಹನಗಳ ಪರವಾನಿಗೆ ನವೀಕರಣ, ಸರಕು ಸಾಗಣೆ ಮತ್ತಿತರ ವಿಚಾರಗಳಿಗೂ ಸಂಬಂಧಿಸಿದ ಅನೇಕ ಪ್ರಸ್ತಾವಗಳನ್ನು ರಸ್ತೆ ಸಾರಿಗೆ ಸಚಿವಾಲಯ ಇದರಲ್ಲಿ ಸೇರಿಸಿದೆ.

ಆ.11ರೊಳಗೆ ಪ್ರತಿಕ್ರಿಯಿಸಿ: ಸಾರ್ವಜನಿಕರು ಈ ತಿದ್ದುಪಡಿ ಪ್ರಸ್ತಾವಕ್ಕೆ ಪ್ರತಿಕ್ರಿಯೆ, ಸಲಹೆ ಹಾಗೂ ಆಕ್ಷೇಪಗಳಿದ್ದರೆ ಆ.11ರೊಳಗೆ ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ. ತಮ್ಮ ಪ್ರತಿಕ್ರಿಯೆಗಳನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿಗೆ(ಸಾರಿಗೆ) ಕಳುಹಿಸುವಂತೆ ಹೇಳಿದೆ.

ತಿದ್ದುಪಡಿಯಲ್ಲೇನಿದೆ?
– ವಾಹನ ಚಾಲಕರು ಚಾಲನಾ ಪರವಾನಿಗೆ, ಆರ್‌ಸಿ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರವನ್ನು ಡಿಜಿಟಲ್‌ ರೂಪದಲ್ಲೂ ಕೊಂಡೊಯ್ಯಬಹುದು.

– ರಾಷ್ಟ್ರೀಯ ಪರವಾನಗಿ ಹೊಂದಿರುವ ಎಲ್ಲ ವಾಣಿಜ್ಯ ವಾಹನಗಳಿಗೂ ಫಾಸ್ಟ್ಯಾಗ್‌ಗಳು, ವಾಹನ ಟ್ರ್ಯಾಕಿಂಗ್‌ ವ್ಯವಸ್ಥೆ ಕಡ್ಡಾಯ.

– ರಾಷ್ಟ್ರೀಯ ಪರ್ಮಿಟ್‌ ಪಡೆಯಬೇಕೆಂದರೆ, ವಾಹನದ ಮುಂಭಾಗ, ಹಿಂಭಾಗದಲ್ಲಿ ದಪ್ಪ ಅಕ್ಷರಗಳಲ್ಲಿ ನ್ಯಾಶನಲ್‌ ಪರ್ಮಿಟ್‌ ಅಥವಾ ಎನ್‌/ಪಿ ಎಂದು ಬರೆಯುವುದು ಕಡ್ಡಾಯ.

– ಅಪಾಯಕಾರಿ ಅಥವಾ ಹಾನಿಕಾರಕ ಸರಕುಗಳನ್ನು ಒಯ್ಯುವ ಟ್ಯಾಂಕರ್‌ ಗಳಿಗೆ ಬಿಳಿ ಬಣ್ಣವನ್ನೇ ಬಳಿಯಬೇಕು. ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರತಿಫ‌ಲಿತ ಟೇಪ್‌ ಅಂಟಿಸಬೇಕು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑