Tel: 7676775624 | Mail: info@yellowandred.in

Language: EN KAN

    Follow us :


ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ

Posted date: 05 Sep, 2018

Powered by:     Yellow and Red

ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಮಹಾಮಂಡಳ ಮತ್ತು ಸ್ಥಳೀಯ ಸಂಘಗಳಿಂದ ಸಹಾಯ ಹಸ್ತ ಹನುಮಂತೇಗೌಡ

ಕುರಿ ಸಾಕಾಣಿಕೆದಾರರಿಗೆ ಸಹಕಾರ ಇಲಾಖೆಯಿಂದ ಏನೇನು ಸವಲತ್ತುಗಳನ್ನು ದೊರಕಿಸಿಕೊಡಲು ಸಾಧ್ಯವೋ ಎಲ್ಲಾ ಸೌಕರ್ಯಗಳನ್ನು ದೊರಕಿಸಿಕೊಡಲಾಗುವುದು ಎಂದು ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಅಧ್ಯಕ್ಷರಾದ ಹನುಮಂತೇಗೌಡ ಹೇಳಿದರು.

ತಾಲ್ಲೂಕಿನ ದೇವರಹಳ್ಳಿ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ ಚನ್ನಪಟ್ಟಣ ಮತ್ತು ಕನಕಪುರ ಕುರಿ ಉಣ್ಣೆ ಉತ್ಪಾದಕರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುರಿ ಮತ್ತು ಮೇಕೆ ಸಾಕಾಣಿಕೆ ರೈತರಿಗೆ ಸುಲಭವಾದ ಕೆಲಸದ ಜೊತೆಗೆ ಹೆಚ್ಚು ಲಾಭ ತರುವ ಉದ್ಯಮವಾಗಿದೆ, ವೈದ್ಯರ ಸಲಹೆಯ ಮೇರೆಗೆ ವೈಜ್ಞಾನಿಕ ಅಂಶಗಳನ್ನು ಅಳವಡಿಸಿಕೊಂಡು ತಮ್ಮ ಜಮೀನು ಮತ್ತು ಮನೆಯ ಆಸುಪಾಸಿನಲ್ಲೇ ಸಾಕಾಣಿಕೆ ಮಾಡಬಹುದು.
ನಮ್ಮ ಸಹಕಾರ ಮಂಡಳ ಮತ್ತು ಸಂಘ ಸಂಸ್ಥೆಗಳು ಸಹ ರೈತರಿಗೆ ಸಹಕಾರ ನೀಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚನ್ನಪಟ್ಟಣದ ಮಂಜುನಾಥ ಕುರಿ ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಸೋಗಾಲ ಸೋಮಶಂಕರ್ ಮಾತನಾಡಿ ಹಲವು ಕುರಿ ಸಾಕಾಣಿಕೆದಾರರಿಗೆ ಸಂಘದ ವತಿಯಿಂದ ಸೌಲಭ್ಯಗಳನ್ನು ಒದಗಿಸಲಾಗಿದೆ, ಇನ್ನು ಮುಂದೆಯೂ ಸಹಕಾರ ಮಹಾಮಂಡಳದ ಸಹಕಾರದೊಂದಿಗೆ ಕುರಿ ಮತ್ತು ಮೇಕೆ ಸಾಕಾಣಿಕಾದಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಪಶುಸಂಗೋಪನೆ ಇಲಾಖೆಯ ನಿವೃತ್ತ ವೈದ್ಯ ಡಾ ಸೀತರಾಮು ರವರು ಸಭೆಯಲ್ಲಿ ಭಾಗವಹಿಸಿದ್ದ ಸಾಕಾಣಿಕೆದಾರರಿಗೆ ಹಮ್ಮಿಕೊಂಡಿದ್ದ ಕಾರ್ಯಗಾರದ ಬಗ್ಗೆ ಮಾಹಿತಿ ನೀಡಿ ಔಷಧೋಪಚಾರವನ್ನು ಹೇಗೆ ಬಳಸಬೇಕೆಂದು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ನಿವೃತ್ತ ಲೆಕ್ಕ ಪರಿಶೋಧಕ ಮಲ್ಲಿಕಾರ್ಜುನ ಮನಗೂಳಿ, ಮಂಜುನಾಥ ಕುರಿ ಉಣ್ಣೆ ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವಲಿಂಗಯ್ಯ, ಮಹದೇಶ್ವರ ಕುರಿ ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ರಮೇಶ್,  ಕನಕಪುರ ಕುರಿ ಉಣ್ಣೆ ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವರಾಮು, ವಕೀಲ ಶಿವರಾಜೇಗೌಡ, ಬಸವರಾಜು, ನುಣ್ಣೂರು ಉಮೇಶ್, ಅರಳಾಪುರ ಸುರೇಶ್ ಮತ್ತು ಕುರಿ ಸಾಕಾಣಿಕಾ ರೈತರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...
ಮೊ; 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑