Tel: 7676775624 | Mail: info@yellowandred.in

Language: EN KAN

    Follow us :


ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಸಾವು ವೈದ್ಯರೇ ಕಾರಣ ಪೋಲಿಸರಿಗೆ ದೂರು

Posted date: 03 Nov, 2018

Powered by:     Yellow and Red

ಸಂತಾನಹರಣ ಶಸ್ತ್ರ ಚಿಕಿತ್ಸೆ ವೇಳೆ ಸಾವು ವೈದ್ಯರೇ ಕಾರಣ ಪೋಲಿಸರಿಗೆ ದೂರು

ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ಗೃಹಿಣಿಯೋರ್ವರಿಗೆ ರಾಮನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವೇಳೆ ಮೃತ ಪಟ್ಟಿದ್ದು ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಪೋಷಕರು ರಾಮನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ದಿನಾಂಕ ೦೨/೧೧/೧೮ ರಂದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತಾಲ್ಲೂಕಿನ ಹಾರೋಕೊಪ್ಪ ಗ್ರಾಮದ ರಂಜಿತಾ ಎಂಬ ಗೃಹಿಣಿಯು ರಾಮನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಅದೇ ದಿನ ವೈದ್ಯ ಮೋಹನ್ ಎನ್ನುವವರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆಯ ವೇಳೆ ಆಕೆಗೆ ಪ್ರಜ್ಞಾಹೀನಳಾದುದನ್ನು ಗಮನಿಸಿದ ವೈದ್ಯರು ತಮ್ಮ ಆಸ್ಪತ್ರೆಯ ತುರ್ತುವಾಹನದಲ್ಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದರು, ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಅಲ್ಲಿನ ವೈದ್ಯರು ಆಕೆ ಅಸುನೀಗಿರುವುದಾಗಿ ದೃಢಪಡಿಸಿದರು.

 

ಮೃತರ ಪತಿ ಕಾಂತರಾಜು ಮತ್ತು ಸಂಬಂಧಿಗಳು ಇದು ವೈದ್ಯರ ನಿರ್ಲಕ್ಷ್ಯವೆಂದು  ಡಾ ಮೋಹನ್ ರವರ ವಿರುದ್ಧ ರಾಮನಗರ ಪೋಲಿಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ.

 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ರಾಮನಗರದ ಸರ್ಕಾರಿ ಆಸ್ಪತ್ರೆಯ ಮುಂದೆ ಶವವನ್ನು ಇರಿಸಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿದುಬಂದಿದೆ.

 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑