Tel: 7676775624 | Mail: info@yellowandred.in

Language: EN KAN

    Follow us :


ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು

Posted date: 25 Dec, 2018

Powered by:     Yellow and Red

ಕೂಡ್ಲೂರು ಕೆರೆ ಕೋಡಿಯಿಂದ ರೈತರ ಬೆಳೆ ನೀರು ಪಾಲು

ಹದಿನೈದು ವರ್ಷಗಳಿಂದ ತುಂಬದಿದ್ದ ಕೂಡ್ಲೂರು ಕೆರೆಯು ಏತ ನೀರಾವರಿ ಮೂಲಕ ತುಂಬಿ ತುಳುಕುತಿದ್ದು ಕೋಡಿ ಹರಿಯಲಾರಂಭಿಸಿದೆ, ಕೆರೆಯ ನೀರು ಮತ್ತು ಬೋರ್ ವೆಲ್ಲ ನೀರನ್ನು ನಂಬಿ ವ್ಯವಸಾಯ ಮಾಡುತ್ತಿದ್ದ ರೈತರಿಗೆ ಒಂದು ಕಡೆ ಸಂತಷವಾದರೆ ಅದೇ ನೀರು ಮತ್ತೊಂದು ಕಡೆ ಶಾಪವಾಗಿ ಪರಿಣಮಿಸಿದೆ.


ಕೂಡ್ಲೂರು ಗದ್ದೆ ಬಯಲು ಎಂದೇ ಹೆಸರಾದ ಸಹಸ್ರಾರು ಎಕರೆ ವಿಶಾಲವಾದ ಪ್ರದೇಶಕ್ಕೆ ನೀರುಣಿಸಿ ರೈತನ ಆದಾಯಕ್ಕೆ ಮುನ್ನುಡಿ ಬರೆಯುವುದು ಈ ಕೆರೆಯ ನೀರು, ಜೊತೆಗೆ ಬಹುತೇಕ ಎಲ್ಲಾ ಕೊಳವೆ ಬಾವಿಗಳು ಪುನಶ್ಚೇತನಗೊಂಡು ರೈತರ ಮೊಗದಲ್ಲಿ ಸಂತಸದ ಗೆರೆಗಳು ಮೂಡುತ್ತಿವೆ.


ಕೂಡ್ಲೂರು ಕೆರೆಯು ತುಂಬಿ ಕೋಡಿ ಹರಿದ ನೀರು ನೇರವಾಗಿ ಹೊಡಿಕೆಹೊಸಹಳ್ಳಿ ಕೆರೆಗೆ ಹೋಗುತ್ತದೆ, ಹಿಂದಿನಿಂದಲೂ ಇದ್ದ ಹಳ್ಳವನ್ನು ಕೆಲವು ರೈತರು ಒತ್ತುವರಿ ಮಾಡಿಕೊಂಡಿದ್ದರೆ ಕೆಲವು ಕಡೆ ಮುಚ್ಚಿಹೋಗಿರುವುದರಿಂದ ಕೋಡಿ ಹರಿದ ನೀರು ರೈತ ಬೆಳೆದ ಬೆಳೆಯ ಮೇಲೆ ಹರಿದು ಬೆಳೆಗಳೆಲ್ಲವೂ ಮಕಾಡೆ ಮಲಗಿಕೊಂಡಿವೆ.

ಗೋವಿಂದೇಗೌಡನದೊಡ್ಡಿ, ಚನ್ನಂಕೇಗೌಡನದೊಡ್ಡಿ ಮತ್ತು ಕೂಡ್ಲೂರು ಗ್ರಾಮದ ಅನೇಕ ರೈತರ ಜಮೀನಿನಲ್ಲಿ ಬೆಳೆದ ಬೆಳೆಗಳು ನೀರಿನಲ್ಲಿ ನೆನೆದು ಕೊಳೆಯಲಾರಂಬಿಸಿವೆ.


ಕೂಡ್ಲೂರು ಕೆರೆಗೆ ನೀರು ತುಂಬಿಸುವ ಮುನ್ನವೇ ಹೊಡಿಕೆಹೊಸಹಳ್ಳಿ ಕೆರೆಗೆ ನೀರು ಹರಿದು ಹೋಗುವ ಕಾಲುವೆಯನ್ನು ದುರಸ್ತಿ ಮಾಡಬೇಕಾಗಿದ್ದು ಅಧಿಕಾರಿಗಳ ಕರ್ತವ್ಯ, ಇದ್ಯಾವುದನ್ನು ಮುಂದಾಲೋಚನೆ ಮಾಡದ ಪರಿಣಾಮವಾಗಿ ಕೋಡಿ ಹರಿದ ನೀರು ರೈತರ ಭತ್ತದ ಗದ್ದೆಗಳು, ಜಾನುವಾರುಗಳ ಜೋಳದ ಮೇವು ಹಾಗೂ ಇನ್ನಿತರ ಬೆಳೆಗಳು ನಾಶವಾಗಲು ಕಾರಣಕರ್ತರಾಗಿದ್ದಾರೆ ಹಾಗಾಗಿ ನಾಶವಾದ ಫಸಲಿನ ಹಣವನ್ನು ಕಟ್ಟಿಕೊಡಲಿ ಎಂದು ರೈತರು ಆಗ್ರಹಿಸುತ್ತಿದ್ದಾರೆ.


ಈ ಬಗ್ಗೆ ಇಂಜಿನಿಯರ್ ವೆಂಕಟೇಗೌಡರನ್ನು ಸಂಪರ್ಕ ಮಾಡಿದಾಗ ಈ ಸಂಬಂಧ ನನಗೆ ಮಾಹಿತಿ ಬಂದಿದೆ, ಬಹುತೇಕ ರೈತರು ಕಾಲುವೆ ಹೊತ್ತುವರಿ ಮಾಡಿಕೊಂಡಿದ್ದು, ಮತ್ತೆ‌ ಕೆಲವು ಭಾಗದಲ್ಲಿ ಸಂಪೂರ್ಣ ಮುಚ್ಚಿ ಹೋಗಿರುವುದರಿಂದ ನೀರು ರೈತರ ಜಮೀನಿನ ಮೇಲೆ ಹರಿಯುತ್ತಿದೆ, ಆದ್ದರಿಂದ ತಾತ್ಕಾಲಿಕವಾಗಿ ಕೂಡ್ಲೂರು ಕೆರೆಗೆ ನೀರು ಹರಿಸುವುದನ್ನು ನಿಲ್ಲಿಸಿಲಾಗಿದೆ, ಸದ್ಯದಲ್ಲಿಯೇ ಹೊಡಿಕೆಹೊಸಹಳ್ಳಿ ಕೆರೆಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು1 comments

  • Giriraju wrote:
    25 Dec, 2018 05:29 pm

    Danayavadagalu Srinivas ravarage raithara paravage spandeseddake.......

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑