Tel: 7676775624 | Mail: info@yellowandred.in

Language: EN KAN

    Follow us :


ಹುತಾತ್ಮ

Posted date: 04 Mar, 2019

Powered by:     Yellow and Red

ಹುತಾತ್ಮ

ಹುತಾತ್ಮ

ನಾನು ಒಂದು ತಿಂಗಳ

ರಜೆ ಪಡೆದು ಬಂದಿದ್ದೆ

ಹೊಸಚೈತ್ರದ ಆಗಮನಕ್ಕಾಗಿ॥


ಇರಲಿಲ್ಲ ನನಗೆಂದೂ

ಹಸೆಮಣೆ ಏರುವಾ ಧಾವಂತ

ಭರವಸೆ ಇರದ ಬದುಕ ಆತಂಕ॥


ಹೆತ್ತವರ ವಂಶಬೆಳೆಸುವ 

ಹೊಣೆ ನನ್ನ ಮೇಲಿತ್ತು

ಹಾಗೇಯೇ ಹರಯದ

ಹುರುಳ ಅರಿವ  ಕೌತುಕ॥


ಕನಸಂತೆ ಮುಗಿದಿತ್ತು

ನನ್ನ ಮದುವೆಯ  ಶಾಸ್ತ್ರ 

ಮೊದಲರಾತ್ರಿಯ ಸವಿಜೇನು

ನನ್ನೊಳಗೂ  ಸ್ಪುರಿಸಿತ್ತು॥


ನನ್ನ ಕನಸರಾತ್ರಿಗಳು

ಮಣ್ಣುಗೂಡಿದ್ದವು

ಯುದ್ದವಾರ್ತೆ ತಂದ

ಆ ಘೋರ ಸುದ್ದಿಯಿಂದ॥


ನನ್ನೆದೆಗೆ ಒರಗಿದ್ದ ನನ್ನವಳ

ಬೆದರುಗಂಗಳಲ್ಲಿ ಆತಂಕ

ಅಭದ್ರತೆಯ ಛಾಯೆ

ಭರವಸೆಯಿರದ ನಾಳೆ॥


ಆರತಿಯ ಸೇಸೆಯಿಕ್ಕಿ

ಬಿಗಿದಪ್ಪಿ ಮತ್ತೆ  ಕಂಬನಿಯುಕ್ಕಿ

ಶುಭಹಾರೈಕೆಯೊಂದಿಗೆ

ಬೀಳ್ಕೊಂಡರು ನನ್ನವರಂದು॥


ಎಂದು ಬರುವಿರೆಂದು ದೃಷ್ಟಿಸಿದ 

ಅಚಲನೇತ್ರಗಳ ದೃಷ್ಟಿಸಲಾರದೆ

ಹೊರಟಿದ್ದೆ ನಾನು

ಹೋಗಿಬರುತ್ತೇನೆಂದು॥


ನಾನಾರೋ ಅವನಾರೋ

ನಮ್ಮ ಕೈಮೈಗಳ ಮೇಲೆಲ್ಲಾ

ಮದ್ದುಗುಂಡುಗಳ ಸರಮಾಲೆ॥


ನಾವಿಬ್ಬರೂ ಕಾದಾಡಲು

ನಮ್ಮಿಬ್ಬರಲ್ಲಿ ವೈಯಕ್ತಿಕ 

ಕಾರಣಗಳಿರಲಿಲ್ಲ  ....

ದೇಶಪ್ರೇಮದ ಹೊರತು

ಆದರೂ ಕಾದಿಕೆಳಗುರುಳಿದ್ದೆವು ॥


ಕ್ಷಣಾರ್ಧದಲ್ಲಿ ನಾವಿಬ್ಬರೂ ಹುತಾತ್ಮರು

ನಮ್ಮಾತ್ಮಗಳು ಮೇಲೇರುತ್ತಿದ್ದವು

ಹಾರ ತುರಾಯಿಗಳ ಹೊತ್ತ ಜನ

ಧಾವಿಸಿತ್ತಲಿದ್ದರು ನಮ್ಮತ್ತ....॥


ರಾಜಕಾರಣಿಗಳು ಮಠಾಧೀಶ್ವರರೂ

ಅವರ ಅನುಕರಿಸಿ ಹಿಂಬಾಲಕರು

ತೋರಿಕೆಯ ದುಃಖ ದುಮ್ಮಾನ

ಸಂತಾಪಗಳು  ಮುಗಿಲೆತ್ತೆರ....॥


ಪಥಸಂಚಲನ ಮದ್ದುಗುಂಡುಗಳ

ಗನ್ ಸೆಲ್ಯೂಟ್ ಶ್ರದ್ಧಾಂಜಲಿ 

ಮೌನ ಮೆರವಣಿಗೆಗಳ ಮಹಾಪೂರ॥


ನಾನೇನೋ ಹೆಣವಾದೆ

ದೇಶದ ದೃಷ್ಟಿಯಲಿ  ನಾನೊಬ್ಬ 

ಯೋಧ ಮಾತ್ರ 

ನಾಳೆ ನನ್ನಜಾಗಕ್ಕೆ ಮತ್ತೊಬ್ಬ॥


ಸೂತ್ರವನ್ನು ಕಳೆದುಕೊಂಡ

ಗಾಳಿಪಟದಂತೆ ತಲ್ಲಣಿಸುತ್ತಿದ್ದ

ನನ್ನವರ ದುಃಖ ನಿರಾಸೆ ಹೇಳ ತೀರ॥


ಸರ್ವಸ್ವವನ್ನೂ ಕಳೆದುಕೊಂಡು

ಜೀವಂತ ಶವಾಗಿ ಬದುಕಬೇಕಾದ

ನನ್ನವಳ ಬದುಕು  ಶೂನ್ಯ..ಶೂನ್ಯ.ಶೂನ್ಯ॥


                   ಶೈಲಾಶ್ರೀನಿವಾಸ್ ರಾಮನಗರ

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑