Tel: 7676775624 | Mail: info@yellowandred.in

Language: EN KAN

    Follow us :


ವಿದ್ಯಾರ್ಥಿಯನ್ನು ಗುರಿಯೆಡೆಗೆ ಕರೆದೊಯ್ಯಲು ಗುರುಗಳಿಂದ ಮಾತ್ರ ಸಾಧ್ಯ, ಚಿಕ್ಕವೀರಯ್ಯ

Posted Date: 09 May, 2019

ವಿದ್ಯಾರ್ಥಿಯನ್ನು ಗುರಿಯೆಡೆಗೆ ಕರೆದೊಯ್ಯಲು ಗುರುಗಳಿಂದ ಮಾತ್ರ ಸಾಧ್ಯ, ಚಿಕ್ಕವೀರಯ್ಯ

ನುಗ್ಗಿ ನಡೆ ಮುಂದೆ ನುಗ್ಗಿ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ* ಎಂಬ ಕುವೆಂಪು ರವರ ಗೀತೆಯ ಸಾಲುಗಳೇ ಗುರಿಯೆಡೆಗೆ ತಲುಪಿಸುವ ಮಾರ್ಗವನ್ನು ಉಲ್ಲೇಖಿಸಿವೆ,

ವಿದ್ಯೆ ಆಗಲಿ, ಸಂಸ್ಕಾರ ಆಗಲಿ, ಗುರುವಿನ ಮಾರ್ಗದರ್ಶನದಲ್ಲಿ ಶಿಕ್ಷಿತವಾಗಿ ಮುನ್ನಡೆದರೆ ಗುರಿ ಸಾಧ್ಯ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಿಕ್ಕವೀರಯ್ಯ ತಿಳಿಸಿದರು.


ಅವರು ಆದಿಚುಂಚನಗಿರಿ ಮಹಾಸಂಸ್ಥಾನ ದ ರಾಮನಗರ ಶಾಖಾ ಮಠದಲ್ಲಿ ಆಯೋಜಿಸಿದ್ದ ೨೨ ನೇ ರಾಜ್ಯ ಮಟ್ಟದ ಮಹಿಳಾ ಜನ ಜಾಗೃತಿ ತರಬೇತಿ ಶಿಬಿರಾರ್ಥಿಗಳಿಗೆ ನೈತಿಕ ಮೌಲ್ಯ ಹಾಗೂ ವಚನ ಸಾಹಿತ್ಯ ಪರಿಚಯ ಕುರಿತು ಉಪನ್ಯಾಸ ನೀಡಿದರು.ಮನುಷ್ಯ ಜಾತಿ ತಾನೊಂದೆ ವಲಂ, ಎಂಬ ಪಂಪ ನ ಕಾವ್ಯ ಉಲ್ಲೇಖಿಸಿದ ಅವರು ಆ ಶತಮಾನದಲ್ಲಿಯೇ ಜಾತಿಯ ಬಗ್ಗೆ ದಿಟ್ಟ ಕಾವ್ಯಗಳನ್ನು ರಚಿಸಿದ್ದರು, ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ ನವರು ಮತ್ತು ಅಕ್ಕಮಹಾದೇವಿ ಯವರು ತಮ್ಮ ವಚನಗಳ ಮೂಲಕ ಅರಿವು ಮೂಡಿಸುವ ಹಾಗೂ ಜಾತಿ ಪದ್ದತಿಯನ್ನು ಹೋಗಲಾಡಿಸಲು ಅನೇಕ ವಚನಗಳನ್ನು  ರಚಿಸಿ ಜಾಗೃತಿ ಮೂಡಿಸಿದ್ದರು.


ಪಾಶ್ಚಾತ್ಯ ದೇಶಗಳಲ್ಲಿ ಬಟ್ಟೆ ಹಾಕುವುದು ಗೊತ್ತಿಲ್ಲದ ಸಮಯದಲ್ಲಿ ನಮ್ಮ ದೇಶ ಆಚಾರ ಸಂಸ್ಕಾರವನ್ನು ಜಗತ್ತಿಗೆ ತಿಳಿಸುವಷ್ಟು ಬೆಳೆದಿತ್ತು, ರಾಮಕೃಷ್ಣ ಪರಮಹಂಸರು, ಸ್ವಾಮೀ ವಿವೇಕಾನಂದರು, ವಿಶ್ವೇಶ್ವರಯ್ಯ, ಸುಭಾಷ್ ಚಂದ್ರ ಬೋಸ್ ರಂತವರು ನಮ್ಮ ದೇಶದ ಶಿಸ್ತು ಸಂಯಮ, ಆಚಾರ ವಿಚಾರಗಳನ್ನು ಜಗತ್ತಿಗೆ ಸಾರಿದ ಮಹನೀಯರು ಎಂದು ಬಣ್ಣಿಸಿದರು. ವಿದ್ಯಾರ್ಥಿಗಳು ನಿಧಾನವೇ ಪ್ರಧಾನ ಎಂಬುದನ್ನು ಅರಿತು ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.


 ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ ಅಂಧ ಮತ್ತು ವಿಕಲಚೇತನ ಮಕ್ಕಳನ್ನು ಸಾಕಿ ಸಲುಹಿ ವಿದ್ಯಾವಂತರನ್ನಾಗಿ ಮಾಡಿ ಜೀವನಕ್ಕೆ ದಾರಿ ತೋರಿಸುತ್ತಿರುವ ಸ್ವಾಮಿಜಿಗಳ ಕಾರ್ಯ ಜಗತ್ತೇ ಮೆಚ್ಚುವಂತದ್ದು ಎಂದು ಬಣ್ಣಿಸಿದರು.


ಆರಂಭ ಪತ್ರಿಕೆಯ ಸಂಪಾದಕ ಅಬ್ಬೂರು ರಾಜಶೇಖರ ಮಾತನಾಡಿ ಪತ್ರಿಕೆ ಹಂಚುತ್ತಿದ್ದ ಹುಡುಗ ಇಂದು ಜಗತ್ತಿನ ಬಹುದೊಡ್ಡ ಶ್ರೀಮಂತ, ಆತ ಅಷ್ಟು ಶ್ರೀಮಂತನಾಗಿದ್ದರೂ ಬಾಲ್ಯದಲ್ಲಿ ನೆರವು ನೀಡಿದ್ದವರನ್ನು ಮರೆಯದೇ ಅವರನ್ನು ಹುಡುಕಿಕೊಂಡು ಸಹಾಯ ಮಾಡಲು ಹೋದಾಗ ಅವರು ನಿರಾಕರಿಸಿದರು, ಅಂದರೆ ಪ್ರಪಂಚದಲ್ಲಿ ದುಡ್ಡಿದ್ದವರು ಶ್ರೀಮಂತರಲ್ಲ, ಹೃದಯವಂತರು ಮಾತ್ರ ಶ್ರೀಮಂತರು ಎಂದು ಬಿಲ್ ಗೇಟ್ಸ್ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು


ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ ನರಸಿಂಹಯ್ಯ, ಪ್ರಜಾವಾಣಿ ಚಂದ್ರು, ಹೊಸದಿಗಂತ ಪತ್ರಿಕೆಯ ಶಿವರಾಜು, ರಾಜ್ ನ್ಯೂಸ್ ನ ಚೇತನ್, ಬಿ ಟಿ ವಿ ಯ ರವಿಕುಮಾರ್ ಆರಂಭ ಪತ್ರಿಕೆಯ ಮಂಜು, ರೂಪೇಶ್ ಕುಮಾರ್, ರಮೇಶ್ ಸಾಧು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:984856139.ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑