Tel: 7676775624 | Mail: info@yellowandred.in

Language: EN KAN

    Follow us :


ಪಟ್ಲು ಕೆರೆಗೆ ಜಲಾಮೃತ ಯೋಜನೆಯ ಕಾಯಕಲ್ಪ;

Posted date: 11 Jun, 2019

Powered by:     Yellow and Red

ಚನ್ನಪಟ್ಟಣ.ಜೂ.೧೧: ಇಂದು ಚನ್ನಪಟ್ಟಣ ತಾಲ್ಲೂಕು ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯ್ತಿ ಪ್ಯಾಪ್ತಿಯ ಪಟ್ಲು ಕೆರೆಯನ್ನು ಜಲಾಮೃತ ಯೋಜನೆಯಡಿ ಅಭಿವೃದ್ಧ್ಧಿ ಪಡಿಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. 

ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಇ.ಒ ರಾಮಕೃಷ್ಣ ಮಾತನಾಡಿ ಜಲ + ಅಮೃತ ಎಂದರೆ ನೀರು ಅಮೃತ ಎಂದರ್ಥ, ನಾವು ನೀರನ್ನು ಜಲಾಮೃತ ಎಂದು ಭಾವಿಸಿಕೊಂಡಿದ್ದೇವೆ, ಈ ಯೋಜನೆಯ ಅಡಿ ಇಂದು ಪಟ್ಲು ಗ್ರಾಮದ ಕೆರೆಗೆ ಕಾಮಗಾರಿ ಶುರು ಮಾಡಲು ವಿದ್ಯುಕ್ತವಾಗಿ ಚಾಲನೆ ನೀಡಿದ್ದೇವೆ ಮುಂದೆ ಈ ತಾಲ್ಲೂಕಿನ ಮಾರ್ಚನಹಳ್ಳಿ ಕೆರೆಗೆ ಕಾಯಕಲ್ಪ ಮಾಡಬೇಕಾಗಿದೆ.


ಈ ಎರಡೂ ಕೆರೆಗಳನ್ನು ಜೆಸಿಬಿ ಮೂಲಕ ಕಾಮಗಾರಿಯನ್ನು ಮಾಡಿಸಲಾಗುತ್ತಿದೆ. ಈ ತಿಂಗಳು ೧೭ ಮತ್ತು ೧೮ ರಂದು ಮುಖ್ಯಮಂತ್ರಿಗಳು ಸ್ವಕ್ಷೇತ್ರಕ್ಕೆ ಆಗಮಿಸುತ್ತಿರುವುದರಿಂದ ಆ ಕೆರೆಗಳಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳನ್ನು ಗಮನಿಸಲಿದ್ದಾರೆ ಎಂದರು.


ಮನುಷ್ಯ ಬದುಕಿರುವಾಗಲೇ ಭೂಮಿ ಯನ್ನು ಉಳಿಸುವ ಕಾರ್ಯ ಮಾಡಬೇಕು. ಚನ್ನಪಟ್ಟಣ ತಾಲ್ಲೂಕಿನಲ್ಲಿ ಅನೇಕ ಚೆಕ್ ಡ್ಯಾಂ ಗಳನ್ನು ಕಟ್ಟಬಹುದಾಗಿದೆ ಆದರೆ ಅದಕ್ಕೆ ಒತ್ತುವರಿದಾರರ ಸಮಸ್ಯೆ ಇದೆ. ಅದನ್ನು ನಿವಾರಿಸಿದರೆ ಈ ತಾಲ್ಲೂಕಿನಲ್ಲಿ ಅನೇಕ ಸಂಖ್ಯೆಯಲ್ಲಿ ಚೆಕ್ ಡ್ಯಾಂಗಳನ್ನು ಮಾಡಿ, ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸವನ್ನು ಮಾಡಬಹುದು.

ಈ ಎರಡೂ ಕೆರೆಗಳಲ್ಲಿ ಫಲವತ್ತಾದ ಗೋಡು ಮಣ್ಣು ತುಂಬಿರುವುದರಿಂದ  ಅದನ್ನು ಭೂಮಿಗೆ ಬಳಸಿಕೊಂಡರೆ, ರೈತನ ಭೂಮಿ ಫಲವತ್ತಾಗುತ್ತದೆ. ಈಗ ತೆಗೆಯುವ ಮಣ್ಣನ್ನು ರೈತರಿಗೆ ಕೊಟ್ಟು ಉಳಿದ ಮಣ್ಣನ್ನು ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು ಎಂದರು.


ಹೊಂಗನೂರು ಜಿಲ್ಲಾ ಪಂಚಾಯ್ತಿ ಸದಸ್ಯೆಯಾದ ಶ್ರೀಮತಿ ವೀಣಾ ಕುಮಾರಿ ಮಾತನಾಡಿ ಪಟ್ಲು ಮತ್ತು ಮಾರ್ಚನಹಳ್ಳಿ ಕೆರೆಗಳಷ್ಟೇ ಅಲ್ಲದೇ ತಾಲ್ಲೂಕಿನ ಎಲ್ಲಾ ಕೆರೆಗಳ ಹೂಳು ಎತ್ತಿಸಿ ಎಲ್ಲಾ ಕೆರೆಗಳಲ್ಲೂ ತುಂಬಿಸಲಿ ಎಂದರು.


ಬೇವೂರು ಜಿಲ್ಲಾ ಪಂಚಾಯ್ತಿ ಸದಸ್ಯೆಯಾದ ಶ್ರೀಮತಿ ಸುಗುಣ ತಿಮ್ಮಪ್ಪ ಮಾತನಾಡಿ ಇಂತಹ ಅಪೂರ್ವವಾದ ಕಾರ್ಯಕ್ರಮವನ್ನು ಗ್ರಾಮದ ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.


ಇದೇ ಗ್ರಾಮದ ಮಾಗಡಿಯಲ್ಲಿ ಅಧಿಕಾರಿಯಾಗಿರುವ ಚಂದ್ರಕೀರ್ತಿ ಎಂಬುವವರು ಮಾತನಾಡಿ, ಸರ್ಕಾರದ ಹಾಗೂ ಇಲಾಖೆಯವರ ಈ ಕಾರ್ಯ ಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.


ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಹರೂರು ರಾಜಣ್ಣ ಮಾತನಾಡಿ, ಸ್ವಚ್ಛ ಮೇವ ಜಯತೇ ಆಂದೋಲನ ಹಾಗೂ ಜಲಾಮೃತ ಯೋಜನೆ ಇವು ಪರಿಸರ ದಿನಾಚರಣೆಯ ನೆನೆಪಿಗಾಗಿ ನಡೆಯುವ ಒಂದು ದಿವಸದ ಕಾರ್ಯಕ್ರಮವಾಗದೆ, ನಿರಂತವಾಗಿ ನಡೆಯುವ ಕಾರ್ಯಕ್ರಮವಾ ಗಬೇಕು . ಪರಿಸರ ಹಾಳಾಗಲು ನಾವೇ ಕಾರಣವಾಗಿದ್ದೇವೆ, ಹಿಂದೆ ನಮ್ಮ ಹಳ್ಳಿಗಳಲ್ಲಿ ಅವರವರ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು, ಈಗ ಆ ಪದ್ದತಿ ಮತ್ತೆ ಬರಬೇಕು ಎಂದರು.


ಸಂದರ್ಭದಲ್ಲಿ ತಿಟ್ಟಮಾರನಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷ ಪುಟ್ಟಸ್ವಾಮಿ, ಸಾಮಾಜಿಕ ಅರಣ್ಯಾಧಿಕಾರಿ ಚೈತ್ರ, ಪಂಚಾಯ್ತಿ ಪಿಡಿಒ ಕಾವ್ಯ, ಗ್ರಾಮ ಪಂಚಾಯ್ತಿ ಸದಸ್ಯರುಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑