Tel: 7676775624 | Mail: info@yellowandred.in

Language: EN KAN

    Follow us :


ಆದ್ಯವೀರ್ ಕಲಾಶಾಲೆಗಳು ಪ್ರತಿ ತಾಲ್ಲೂಕಿನಲ್ಲಿಯೂ ಇರಬೇಕು ಪೋಲಿಸ್ ಅಧಿಕಾರಿ ಅಶೋಕ್ ಕುಮಾರ್

Posted date: 15 Jun, 2019

Powered by:     Yellow and Red

ಆದ್ಯವೀರ್ ಕಲಾಶಾಲೆಗಳು ಪ್ರತಿ ತಾಲ್ಲೂಕಿನಲ್ಲಿಯೂ ಇರಬೇಕು ಪೋಲಿಸ್ ಅಧಿಕಾರಿ ಅಶೋಕ್ ಕುಮಾರ್

ಚನ್ನಪಟ್ಟಣ: ಆದ್ಯವೀರ್ ಕಲಾ ದೇಗುಲ ದಂತಹ ಕಲಾ ಶಾಲೆಗಳು ಪ್ರತಿ ತಾಲ್ಲೂಕಿನಲ್ಲಿಯೂ ಇರಬೇಕು, ಆಗ ಮಾತ್ರ ಸ್ಥಳೀಯ ಮಕ್ಕಳಿಗೆ ಉನ್ನತ ಮಟ್ಟದ ವೇದಿಕೆಯನ್ನು ಒದಗಿಸಿಕೊಡಲು ಸಾಧ್ಯವಾಗುತ್ತದೆ ಎಂದು ಪೋಲಿಸ್ ಅಧಿಕಾರಿ ಅಶೋಕ್ ಕುಮಾರ್ ಅಭಿಪ್ರಾಯ ಪಟ್ಟರು.

ಅವರು ನಗರದ ಶತಮಾನೋತ್ಸವ ಭವನದಲ್ಲಿ ಅನಂತಕೃಷ್ಣ ರಾಜೇ ಅರಸು ರವರ ಆದ್ಯವೀರ್ ಕಲಾ ದೇಗುಲ ದ ಪ್ರಥಮ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಪ್ರತಿ ಕುಟುಂಬದಲ್ಲಿಯೂ ಒಂದೊಂದು ರೀತಿಯ ಪ್ರತಿಭೆಗಳುಳ್ಳ ಮಕ್ಕಳಿರುತ್ತಾರೆ, ಆ ಮಕ್ಕಳೆಲ್ಲರೂ ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ಕಲಿಯಲು ಸಾಧ್ಯವಿಲ್ಲ, ಸ್ಥಳೀಯವಾಗಿ ಎಲ್ಲಾ ಕಲೆಗಳುಳ್ಳ ಶಾಲೆ ಇದ್ದರೆ ಮಕ್ಕಳ ಕಲಾ ಬೆಳವಣಿಗೆಗೆ ಸಹಕಾರಿಯಾಗುತ್ತದೆ, ಅನಂತಕೃಷ್ಣ ರವರು ಈ ಸಾಧನೆ ಮಾಡಿದ್ದು ಹಂತಹಂತವಾಗಿ ಬೇರೆಡೆಯೂ ಶಾಲೆಗಳನ್ನು ತೆರೆಯುವಂತಾಗಲಿ ಎಂದರು.


ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿಂ ಲಿಂ ನಾಗರಾಜ್ ಮಾತನಾಡಿ ಎಲ್ಲಾ ಕಲೆಗಳನ್ನೊಳಗೊಂಡ ಕಲಾದೇಗುಲ ಮುಂದೊಂದು ದಿನ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರುಗಳಿಸುವಂತಹ ಸಂಸ್ಥೆಯಾಗಿದ್ದು ಸರ್ಕಾರ ಸಹಾಯ ನೀಡಿದರೇ ಇದು ಸಾಧ್ಯವಾಗುತ್ತದೆ, ಸರ್ಕಾರದಿಂದ ಸಹಾಯ ಪಡೆಯಲು ಅನುಕೂಲ ಕಲ್ಪಿಸುತ್ತೇನೆ ಎಂದು ಅಭಯ ನೀಡಿದರು.


ನಗರ ಜೆಡಿಎಸ್ ಅಧ್ಯಕ್ಷರಾದ ರಾಂಪುರ ರಾಜಣ್ಣ ಮಾತನಾಡಿ ಅನಂತ ಕೃಷ್ಣ ರವರ ಈ ಸಾಧನೆ ಅಸಾಧ್ಯವಾದುದು, ಕಲೆಯ ಬೆಲೆ ಗೊತ್ತಿರುವವರು ಮಾತ್ರ ಈ ಸಾಧನೆ ಮಾಡಲು ಸಾಧ್ಯ, ಈ ಕಲಾ ಶಾಲೆಯು ಉತ್ತುಂಗಕ್ಕೇರಲಿ ಎಂದು ಆಶಿಸಿದರು.


ಆದ್ಯವೀರ್ ಕಲಾ ದೇಗುಲ ದ ಸಂಸ್ಥಾಪಕ ಅಧ್ಯಕ್ಷ ಅನಂತಕೃಷ್ಣ ರಾಜೇ ಅರಸು ಮಾತನಾಡಿ ಕಲೆ ಸಾಧಕನ ಸ್ವತ್ತೇ ವಿನಹ ಸೋಮಾರಿಯ ಸ್ವತ್ತಲ್ಲ ಎನ್ನುವಂತೇ ನಾನು ಕಲಿಯಲಿಕ್ಕೆ ಅವಕಾಶ ಇರದ ಕಲೆಗಳನ್ನು ಇಂದಿನ ಮಕ್ಕಳಿಗೆ ಕಲಿಸಿಕೊಡಬೇಕು, ಅದರಲ್ಲೂ ಬಹುತೇಕ ಎಲ್ಲಾ ಕಲೆಗಳು ಒಂದೇ ಸೂರಿನಡಿ ಮಕ್ಕಳಿಗೆ ಸಿಗಬೇಕು ಎಂಬ ದೃಷ್ಟಿಯಿಂದ ಈ ಕಲಾ ದೇಗುಲವನ್ನು ಆರಂಭಿಸಿದ್ದೇನೆ, ಈಗಾಗಲೇ ನಮ್ಮ ಮಕ್ಕಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಂದಿದ್ದಾರೆ, ಇನ್ನೂ ಹೆಚ್ಚಿನ ತರಬೇತಿ ನೀಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ನನ್ನ ತಾಲ್ಲೂಕಿನ ಮಕ್ಕಳು ವಿಜೃಂಭಿಸಬೇಕೆಂಬ ಆಸೆ ಇದೆ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.


ರಾಜ್ಯದಾದ್ಯಂತ ಐವತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಪಡೆದುಕೊಂಡರು, ಸಣ್ಣ ಮಕ್ಕಳ ತಂಡಕ್ಕೆ ನಗದು ಬಹುಮಾನವನ್ನು ವಿತರಿಸಲಾಯಿತು, ಪ್ರತಿ ತಂಡಕ್ಕೂ ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.


ಕಾರ್ಯಕ್ರಮವನ್ನು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಉದ್ಘಾಟಿಸಿದರು, ಇದೇ ವೇಳೆ ಆದ್ಯವೀರ್ ಕಲಾ ದೇಗುಲದ ಲೋಗೋ ಬಿಡುಗಡೆ ಮತ್ತು ಟ್ರಸ್ಟ್ ನ್ನು ಗಣ್ಯರಿಂದ ಉದ್ಘಾಟಿಸಿಲಾಯಿತು.

ಅಂತರರಾಷ್ಟ್ರೀಯ ತರಬೇತುದಾರ ಲೀಡರ್ ಬಾಲಕೃಷ್ಣ ಉಪನ್ಯಾಸ ನೀಡಿದರು.


ಭಾಗವಹಿಸಿದ ತಂಡಗಳು ಚಿತ್ರಕಲೆ, ವೆಷ್ಟನ್ ಡ್ಯಾನ್ಸ್, ಭರತನಾಟ್ಯ, ಹಾಡುಗಾರಿಕೆ, ಗಿಟಾರ್‌ ವಾದನ, ಮ್ಯೂಸಿಕ್ ಕೀ ಬೋಡ್೯, ತಬಲವಾದನ, ವೇಷಭೂಷಣ ಸ್ಪರ್ಧೆ ಮತ್ತು ಆದರ್ಶ ದಂಪತಿಗಳಂತಹ ಕಾರ್ಯಕ್ರಮಗಳು ನೆರೆದಿದ್ದವರ ಮತ್ತು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದವು.


ವಿವಿಧ ಕ್ಷೇತ್ರದ ಗಣ್ಯರಾದ ಜಗದೀಶ್ ಮಾಸ್ಟರ್, ರಘುನಂದನ್, ಮಣಿಕಂಠನ್, ಜ್ಯೋತಿ ಹೆಗ್ಗಡೆ, ಜೀವನ್, ಜಿ ಎಂ ಜಂಗಿ, ಕುಮಾರ್ ಅರಸು, ಡಾ ನಟರಾಜ್, ಜಗದೀಶ್, ಸಿ ಪಿ ವಿದ್ಯಾಶಂಕರ್, ಸಿದ್ದರಾಜಯ್ಯ, ಅಭಿಲಾಷ್, ಯೋಗೇಶ್ ಚಕ್ಕೆರೆ ಮತ್ತು ಲಕ್ಷ್ಮಿ ಗೋ ರಾ ಶ್ರೀನಿವಾಸ ರವರು ಸೇರಿದಂತೆ ವೇದಿಕೆಯ ಗಣ್ಯರಿಗೆ ಸನ್ಮಾನಿಸಲಾಯಿತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑