Tel: 7676775624 | Mail: info@yellowandred.in

Language: EN KAN

    Follow us :


ಮಹಾಭಾರತದ ಶ್ರೀ ಕೃಷ್ಣ ನಿಂದ ಪ್ರಾರಂಭವಾದ ಯೋಗ ಇಂದು ಕಲಿಯುಗದಲ್ಲಿ ವಿಶ್ವವಿಖ್ಯಾತವಾಗಿದೆ ಮೋಹನ್

Posted date: 21 Jun, 2019

Powered by:     Yellow and Red

ಮಹಾಭಾರತದ ಶ್ರೀ ಕೃಷ್ಣ ನಿಂದ ಪ್ರಾರಂಭವಾದ ಯೋಗ ಇಂದು ಕಲಿಯುಗದಲ್ಲಿ ವಿಶ್ವವಿಖ್ಯಾತವಾಗಿದೆ ಮೋಹನ್

ಚನ್ನಪಟ್ಟಣ: ಮಹಾಭಾರತದ ಶ್ರೀಕೃಷ್ಣ ನಿಂದ ಮೊದಲ್ಗೊಂಡು ಪತಂಜಲಿ ಗುರುಗಳು, ಇತಿಹಾಸದ ಪುಟಗಳಲ್ಲಿ ದಾಖಲಾಗಿರುವ ಯೋಗ ಸೇರಿದಂತೆ ಇಂದಿನ ಆಧುನಿಕತೆಯ ಗುರುಗಳ ವರೆಗೆ ಯೋಗ ಜನಜನಿತವಾಗಿ ಉಳಿದುಕೊಂಡಿರುವುದಲ್ಲದೆ ಸಂಸ್ಕೃತಿ ಏನೆಂದು ಗೊತ್ತಿಲ್ಲದ, ಯೋಗ ಎಂದರೇನೆಂದು ತಿಳಿಯದ ವಿಶ್ವದ ಎಲ್ಲಾ ಧರ್ಮದ ನಾಗರೀಕರಿಗೆ ಯೋಗ ಗುರು ಭಾರತ ಎಂದೇ ಬಿಂಬಿತವಾದ ಯೋಗ, ನಮ್ಮೆಲ್ಲರ ಹೆಮ್ಮೆಯ ಸಂಕೇತ ಎಂದು ನಗರದ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯದ ನಿಲಯ ಪಾಲಕರಾದ ಮೋಹನ್ ತಿಳಿಸಿದರು.

ಅವರು ವಿದ್ಯಾರ್ಥಿ ನಿಲಯದಲ್ಲಿ ಇಂದು ಆಯೋಜಿಸಿದ್ದ ಐದನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕುರಿತು ಯೋಗ ಪಟುಗಳಿಗೆ ಯೋಗ ಕುರಿತು ಮಾಹಿತಿ ನೀಡಿದರು.


ಯೋಗದಲ್ಲಿ ಅಷ್ಟಾಂಗ ಯೋಗ ಎಂಬ ಎಂಟು ಆಸನ ಗಳಿದ್ದು ಅದರಲ್ಲಿ ಅನೇಕ ಉಪ ಆಸನಗಳಿವೆ, ಉದಾಹರಣೆಗೆ ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಯಮ ನಿಯಮ ಇತ್ಯಾದಿ ಯೋಗಗಳಿದ್ದು ಒಂದೊಂದು ಆಸನವೂ ಬಹಳ ವಿಭಿನ್ನವಾಗಿದ್ದು ಒಂದೊಂದು ಆಸನವೂ ದೇಹ ಮತ್ತು ಮನಸ್ಸನ್ನು ಸಂತೃಪ್ತಗೊಳಿಸಿ ಉತ್ತಮ ಆರೋಗ್ಯ ನೀಡುತ್ತದೆ ಎಂದರು.


ಯೋಗ ಕೇವಲ ಆರೋಗ್ಯ ಕ್ಕೆ ಒಳ್ಳೆಯದು ಎಂಬುದಷ್ಟೇ ನಂಬಿಕೆಯಾಗಿದ್ದು ಅದರಾಚೆಗೂ ಅನೇಕ ಉಪಯೋಗಗಳಿವೆ, ಯೋಗ ದೇಹಾರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ, ಒಂದೊಂದು ಆಸನವೂ ದೇಹದ ಒಂದೊಂದು ಖಾಯಿಲೆಗಳನ್ನು ದೂರ ಮಾಡುತ್ತದೆ, ಹಾಗಾಗಿ ಯೋಗಾಭ್ಯಾಸ ವನ್ನು ಕಾಟಚಾರಕ್ಕೆ ಮಾಡದೇ ದಿನನಿತ್ಯದ ಒಂದು ಭಾಗವಾಗಿ‌ ಮಾಡಿಕೊಂಡಾಗ ಮಾತ್ರ ತಮ್ಮ ಮನಸ್ಸು ಮತ್ತು ಆರೋಗ್ಯ ಹತೋಟಿಗೆ ಬಂದು ಜೀವ ಮತ್ತು ಜೀವನ ಸುಭಿಕ್ಷವಾಗಲಿದೆ ಎಂದು ಶಿಬಿರಾರ್ಥಿಗಳಿಗೆ ತಿಳಿ ಹೇಳಿದರು.


ಯೋಗಭ್ಯಾಸವನ್ನು ಪುನರ್ವಸು ಕೇಂದ್ರದ ಯೋಗ ಗುರು ಭರತ್ ನಡೆಸಿಕೊಟ್ಟರು, ವಿದ್ಯಾರ್ಥಿ ನಿಲಯದ ‌ಮಕ್ಕಳು ಯೋಗದಲ್ಲಿ ಪಾಲ್ಗೊಂಡು ಹರ್ಷಿತರಾದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑