Tel: 7676775624 | Mail: info@yellowandred.in

Language: EN KAN

    Follow us :


ಟ್ಯುಬೆರ್ ಕ್ಯುಲೋಸಿಸ್ ಇದ್ದರೆ ಅಣಬೆ ತಿಂದು ಗುಣ ಪಡಿಸಿಕೊಳ್ಳಿ

Posted date: 28 Jun, 2019

Powered by:     Yellow and Red

ಟ್ಯುಬೆರ್ ಕ್ಯುಲೋಸಿಸ್ ಇದ್ದರೆ ಅಣಬೆ ತಿಂದು ಗುಣ ಪಡಿಸಿಕೊಳ್ಳಿ

ಮಳೆಗಾಲ ಶುರುವಾಯಿತೆಂದರೆ ಹಣಬೆಗಳದ್ದೇ ಕಾರುಬಾರು . ರಸ್ತೆಯ ಇಕ್ಕೆಲಗಳಲ್ಲಿ ಎತ್ತ ನೋಡಿದರೂ ಅತ್ತ ಮಣ್ಣಿನ ಮೇಲೆ ಸಣ್ಣ ಸಣ್ಣ ಕೊಡೆಯಾಕಾರದಲ್ಲಿ ನೋಡಲು ಸುಂದರವಾಗಿ ಕಾಣುವ ಅಣಬೆ ವಿವಿಧ ಗಾತ್ರದಲ್ಲಿ ಬೆಳೆದಿರುತ್ತವೆ . ಇವು ತಿನ್ನಲು ಸಹ ಬಲು ರುಚಿ . ಬಗೆ ಬಗೆಯ ಖಾದ್ಯಗಳಿಗೆ ಅಣಬೆ ಸಾಕ್ಷಿಯಾಗುತ್ತದೆ . ಕರಿದ ಮಶ್ರೂಮ್ ಮಂಚೂರಿ ಕೂಡ ಇದಕ್ಕೆ ಒಳ್ಳೆಯ ಉದಾಹರಣೆ .


ಅಣಬೆ ಮತ್ತು ಟಿ . ಬಿ

ಅಣಬೆ ಕೇವಲ ತಿನ್ನಲು ರುಚಿ ಎಂದು ತಿನ್ನುವುದರ ಜೊತೆಗೆ ಅದರಲ್ಲಿರುವ ಆರೋಗ್ಯಕ್ಕೆ ಉಪಯುಕ್ತವಾದ ಮಾಹಿತಿಯನ್ನು ಕಲೆ ಹಾಕೋಣ . ಹಣಬೆಯಲ್ಲಿರುವ ಕೆಲವು ಅಂಶಗಳು ಆರೋಗ್ಯಕ್ಕೆ ಬಹಳ ಸಹಕಾರಿ . ಅದರಲ್ಲೂ ಬಿಸಿಲಲ್ಲಿ ಒಣಗಿಸಿದ ಒಯ್ಸ್ಟರ್ ಮಶ್ರೂಮ್ ಟ್ಯೂಬರ್ಕ್ಯುಲೋಸಿಸ್ ಗೆ ರಾಮ ಬಾಣ ಎಂದು ನಂಬಲಾಗಿದೆ . ಇದೆಲ್ಲಾ ಹೇಗೆ ಏನು ಎಂದು ತಿಳಿಯುವ ಮೊದಲು ಟ್ಯೂಬರ್ಕ್ಯುಲೋಸಿಸ್ ( ಟಿ . ಬಿ . ) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ .ಟ್ಯುಬೆರ್ ಕ್ಯುಲೋಸಿಸ್ ಅಂದರೆ ಟಿ . ಬಿ . ಯ ಬಗ್ಗೆ ಒಂದು ಕಿರು ನೋಟ

ಟ್ಯೂಬರ್ಕ್ಯುಲೋಸಿಸ್ ಒಂದು ದೀರ್ಘಕಾಲಿಕ ಕಾಯಿಲೆ ಯಾಗಿದ್ದು , ಶ್ವಾಸಕೋಶಗಳಿಗೆ ಮೊದಲು ತೊಂದರೆ ಉಂಟು ಮಾಡುತ್ತದೆ . " ಮೈಕೋ ಬ್ಯಾಕ್ಟೇರಿಯಂ ಟ್ಯುಬೆರ್ ಕ್ಯುಲೋಸಿಸ್ ಬ್ಯಾಕ್ಟೇರಿಯಂ " ಎಂಬ ಬ್ಯಾಕ್ಟೇರಿಯಾ ಟ್ಯುಬೆರ್ ಕ್ಯುಲೋಸಿಸ್ ಗೆ ಕಾರಣವಾಗುತ್ತದೆ . ಟಿ . ಬಿ . ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದಾಗ ಗಾಳಿಯ ಮುಖಾಂತರ ತನ್ನ ಸುತ್ತಮುತ್ತ ಇರುವ ಇತರರಿಗೂ ಹರಡುತ್ತದೆ . ವಿಪರೀತ ಕೆಮ್ಮು ಬಹಳ ಕಾಲದಿಂದ ಆ ವ್ಯಕ್ತಿಯನ್ನು ಬಳಲಿಸುತ್ತಿದ್ದರೆ ಜೊತೆಗೆ ಕಫ ಹೆಚ್ಚಾಗಿದ್ದರೆ ಅದು ಟಿ . ಬಿ . ಇದ್ದರೂ ಇರಬಹುದು ಎಂದು ವೈದ್ಯರು ಕಫ ಪರೀಕ್ಷೆಗೆ ಬರೆದು ಕೊಡುತ್ತಾರೆ . ಈಗ ಅನೇಕ ಸರ್ಕಾರೀ ಆಸ್ಪತ್ರೆಗಳಲ್ಲಿ ಉಚಿತವಾಗಿ ಟಿ . ಬಿ . ಕಾಯಿಲೆ ಗೆಂದು ಉಚಿತವಾಗಿ ಕಫ ಪರೀಕ್ಷೆ ಮಾಡುತ್ತಾರೆ . ಹಾಗೆ ಇದಕ್ಕೆ ಉಚಿತವಾಗಿ ಚಿಕಿತ್ಸೆ ಕೂಡ ಕೊಡುತ್ತಾರೆ . ಆದರೆ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಕೊಡದೇ ಹೋದರೆ ಆ ವ್ಯಕ್ತಿ ಬಹಳ ಕಠಿಣವಾದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ . ಟಿ . ಬಿ . ಕಾಯಿಲೆ ಗೆ ಗುಣ ಕಾಣಲು ಆಂಟಿ ಬೈಯೋಟಿಕ್ಸ್ ನ ಅವಶ್ಯಕತೆ ಬಹಳ ಮುಖ್ಯವಾಗಿದ್ದು , ತಪ್ಪದೆ ಮತ್ತು ಯಾವುದೇ ನಿರ್ಲಕ್ಷ್ಯವಿಲ್ಲದೆ ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳ ಬೇಕಾಗುತ್ತದೆ . ಇದರ ಜೊತೆಗೆ ಕೆಲವು ನೈಸರ್ಗಿಕ ಪರಿಹಾರಗಳು ಮತ್ತು ಕೆಲವು ಆಹಾರ ಪದ್ದತಿಗಳು ಟಿ . ಬಿ . ರೋಗಿಯನ್ನು ಆದಷ್ಟು ಬೇಗನೆ ಗುಣ ಕಾಣುವಂತೆ ಮಾಡುತ್ತವೆ .

ವಿಟಮಿನ್ ' ಡಿ ' v/s ಟ್ಯುಬೆರ್ ಕ್ಯುಲೋಸಿಸ್

ಟಿ . ಬಿ . ಕಾಯಿಲೆ ಗೆ ಹಲವಾರು ನೈಸರ್ಗಿಕ ಮನೆ ಮದ್ದುಗಳು ತಯಾರಿದ್ದು ಅದರಲ್ಲಿ ಅಣಬೆ ಬಹಳ ಪ್ರಮುಖ ಆಹಾರ ಎಂದು ನಂಬಲಾಗಿದೆ . ಇದು ಧೀರ್ಘ ಕಾಲದ ಟಿ. ಬಿ. ಕಾಯಿಲೆ ಯಿಂದ ಬಳಲುತ್ತಿರುವ ಮನುಷ್ಯನನ್ನು ಬಹಳ ಬೇಗನೆ ಮ್ಯಾಜಿಕ್ ನ ರೀತಿಯಲ್ಲಿ ಹುಷಾರಾಗುವಂತೆ ಮಾಡುತ್ತದೆ . ಅದರಲ್ಲೂ ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಒಯ್ಸ್ಟರ್ ಮಶ್ರೂಮ್ ಟಿ . ಬಿ . ಗೆ ಬಹಳ ಉಪಯುಕ್ತ . ಏಕೆಂದರೆ ಭೂಮಿಯ ಮೇಲಿನ ಅಣಬೆ ಯಾವ ವಿಟಮಿನ್ ' ಡಿ ' ಅಂಶವನ್ನೂ ಹೊಂದಿರುವುದಿಲ್ಲ . ಅದೇ ಹಣಬೆಯನ್ನು ಬಿಸಿಲಿನಲ್ಲಿ ಒಣಗಿಸಿದರೆ ಸೂರ್ಯನ ಕಿರಣಗಳು ತಾಗಿ ವಿಟಮಿನ್ ' ಡಿ ' ತಾನಾಗಿಯೇ ಹಣಬೆಯೊಳಗೆ ಸೇರುತ್ತದೆ . ಸಾಮಾನ್ಯವಾಗಿ ವಿಟಮಿನ್ ' ಡಿ ' ಟಿ . ಬಿ . ರೋಗಿಗಳಿಗೆ ಅತ್ಯಂತ ಪ್ರಬಲವಾದ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ . ಇದು ಆಂಟಿ ಟಿ .ಬಿ . ಡ್ರಗ್ ನ ವಿರುದ್ಧ ಬಹಳ ಚೆನ್ನಾಗಿ ಹೋರಾಡುತ್ತದೆ .

ಹಣಬೆಗೂ ಜರ್ಮನಿ ಗೂ ಇರುವ ನಂಟು

ಈ ರೀತಿಯ ಸೂರ್ಯನ ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಅಣಬೆ ಗಳು ಟಿ . ಬಿ . ಕಾಯಿಲೆ ಹೊಂದಿರುವ ರೋಗಿಗೆ ಒಳ್ಳೆಯ ಮದ್ದು ಎಂಬುದನ್ನು ಮೊದಲು ಜರ್ಮನ್ ವಿಜ್ಞಾನಿಗಳು ಪ್ರಯೋಗ ನಡೆಸಿದರು . ಏಕೆಂದರೆ ಆಗಿನ ಕಾಲದಲ್ಲಿ ಟಿ . ಬಿ . ಕಾಯಿಲೆ ಬಂದು ವರ್ಷಕ್ಕೆ ಸುಮಾರು 1.6 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದರು . ಇದಕ್ಕೆ ಕಾರಣ ಆ ದೇಶದ ಆದಾಯ . ಆದಾಯ ಕಡಿಮೆ ಇರುವ ರಾಷ್ಟ್ರಗಳಲ್ಲಿ ಸಹಜವಾಗಿಯೇ ವಿಟಮಿನ್ ಸಪ್ಲಿಮೆಂಟ್ ಗಳ ಕೊರತೆ ಎದ್ದು ಕಾಣುತ್ತದೆ . ಪ್ರತಿ ಕುಟುಂಬದ ಆದಾಯ ಕೂಡ ಕಡಿಮೆ ಇರುವುದರಿಂದ ದುಬಾರಿ ಔಷಧಿಗಳನ್ನು ಕೊಳ್ಳುವುದಿರಲೀ ಅದರ ಕುರಿತು ಯೋಚನೆ ಕೂಡ ಮಾಡುವ ಹಾಗಿಲ್ಲ . ಇಂತಹ ಸಮಯದಲ್ಲಿ ವಿಜ್ಞಾನಿಗಳ ಗಮನ ಸೆಳೆದಿದ್ದು ರಸ್ತೆ ಬದಿಯಲ್ಲಿ ಸುಂದರವಾಗಿ ಬೆಳೆದಿದ್ದಂತಹ ಪುಟ್ಟ ಪುಟ್ಟ ಹಣಬೆಗಳು . ಅಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ವಿಜ್ಞಾನಿಗಳು ಧೈರ್ಯ ಮಾಡಿ ಅಲ್ಲಿನ ಸರ್ಕಾರದ ಜೊತೆ ಮಾತನಾಡಿ ಇಂತಹದೊಂದು ಸಾಹಸಕ್ಕೆ ಕೈ ಹಾಕಿಯೇ ಬಿಟ್ಟರು . ರಸ್ತೆ ಬದಿಯಲ್ಲಿದ್ದ ಹಣಬೆಗಳನ್ನು ಸಂಗ್ರಹಿಸಿದರು . ನಂತರ ಅವುಗಳನ್ನು ಚೆನ್ನಾಗಿ ಒಣಗಿಸಿ ಟಿ . ಬಿ . ರೋಗಿಗಳಿಗೆ ಕೊಡಲು ಪ್ರಾರಂಭ ಮಾಡಿದರು . ಅವರ ನಿರೀಕ್ಷೆಗೂ ಮೀರಿ ಟಿ . ಬಿ . ರೋಗಿಗಳು ಬಹಳ ಬೇಗನೆ ಚೇತರಿಕೆ ಕಂಡು ಕೊಂಡರು . ಇದರಿಂದ ವಿಜ್ಞಾನಿಗಳು ಸಂತೋಷದಿಂದ ಮತ್ತು ದೃಢ ನಿರ್ಧಾರ ಮಾಡಿ ಟಿ . ಬಿ . ಕಾಯಿಲೆ ಗೆ ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಅಣಬೆ ನಿಜಕ್ಕೂ ಒಳ್ಳೆಯ ಔಷಧಿ ಎಂದು ತಮ್ಮ ವರದಿ ಸಿದ್ದ ಪಡಿಸಿದರು .ಒಯ್ಸ್ಟರ್ ಹಣಬೆಯಿಂದ ನಾಪತ್ತೆಯಾಯಿತು ಟ್ಯುಬೆರ್ ಕ್ಯುಲೋಸಿಸ್

ಬಿಸಿಲಿನಲ್ಲಿ ಒಣಗಿಸಿದ ಒಯ್ಸ್ಟರ್ ಹಣಬೆಯನ್ನು ಟಿ . ಬಿ . ರೋಗಿಗಳು ಟಿ . ಬಿ . ಕಾಯಿಲೆ ಗೆ ಔಷಧಿ ತೆಗೆದುಕೊಳ್ಳುತ್ತಿರುವ ಸಂಧರ್ಭದಲ್ಲಿ ಕೇವಲ ಹಾಗೆ ತಿನ್ನುವ ಬದಲು ಸ್ಯಾಂಡ್ವಿಚ್ ಬ್ರೆಡ್ ನ ಜೊತೆಗೆ ಸ್ಟಫ್ ಮಾಡಿ ಬೆಳಗಿನ ತಿಂಡಿಯಲ್ಲಿ ಇದನ್ನು ಸೇರಿಸಿ ತಿಂದರೆ ಬಹಳ ಒಳ್ಳೆಯದು . ಕೇವಲ ಮೊದಲ 4 ತಿಂಗಳಲ್ಲೇ ಟಿ . ಬಿ . ರೋಗಿಯ ರೋಗ ನಿರೋಧಕ ಶಕ್ತಿಯಲ್ಲಿ ಚೇತರಿಕೆ ಕಂಡು ಬರುವುದನ್ನು ಗಮನಿಸಬಹುದು . ಇದಕ್ಕೆ ಕಾರಣ ಬಿಸಿಲಿನಲ್ಲಿ ಒಣಗಿಸಿದ ಅಣಬೆ ಆದ್ದರಿಂದ ಅದರಲ್ಲಿರುವ ವಿಟಮಿನ್ ' ಡಿ ' ಮನುಷ್ಯನ ದೇಹವನ್ನು ಆಂಟಿ ಮೈಕ್ರೋ ಬಿಯಲ್ ಕಾಂಪೌಂಡ್ ಅನ್ನು ತಯಾರಿಸಲು ಸಿದ್ದಗೊಳಿಸಿ , ಟಿ . ಬಿ . ಕಾಯಿಲೆ ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವಂತೆ ಮಾಡುತ್ತದೆ .


ಮಾಹಿತಿ ಜಾಲತಾಣ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑