Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ನಗರಸಭೆಗೆ ಎಸಿಬಿ ದಾಳಿ ಪೌರಾಯುಕ್ತ ಸೇರಿದಂತೆ ಮೂವರ ಬಂಧನ

Posted date: 03 Jul, 2019

Powered by:     Yellow and Red

ಚನ್ನಪಟ್ಟಣ ನಗರಸಭೆಗೆ ಎಸಿಬಿ ದಾಳಿ ಪೌರಾಯುಕ್ತ ಸೇರಿದಂತೆ ಮೂವರ ಬಂಧನ

ಚನ್ನಪಟ್ಟಣ: ನಗರದ ನಿವಾಸಿಯೊಬ್ಬರ ವಾಸದ ಮನೆಯ ಇ-ಖಾತಾ ಮತ್ತು ಮ್ಯುಟೇಷನ್ ಮಾಡಿಕೊಡಲು ನಗರಸಭೆಗೆ ಅರ್ಜಿ ಸಲ್ಲಿಸಿದ್ದರೂ ಸಹ ಇ-ಖಾತಾ ಮಾಡಿಕೊಡದೇ ಸತಾಯಿಸುತ್ತಿರುವುದರ ಜೊತೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರುದಾರರ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್ಪಿ ತಂಡವು ಇಂದು ಪೌರಾಯುಕ್ತ ಸಿ ಪುಟ್ಟಸ್ವಾಮಿ ಸೇರಿದಂತೆ ಮೂವರನ್ನು ದೀರ್ಘ ಸಮಯದವರಗೆ ತಪಾಸಣೆಗೊಳಪಡಿಸಿ ಬಂಧಿಸಿದರು.


ನಗರದ ಸಿದ್ದಿಕಿ ಮತ್ತಿತರರು ಎಸಿಬಿ ಗೆ ದೂರು ದಾಖಲಿಸಿದ್ದು ಪೂರ್ವಭಾವಿಯಾಗಿ ಮಾತನಾಡಿದಂತೆ ಖಾತೆ ಮಾಡಿಸಲು ಲಂಚದ ಹಣವನ್ನು ಪೌರಾಯುಕ್ತರಿಗೆ ನೀಡಲು ಕರೆ ಮಾಡಿದಾಗ ನಾನು ಮೀಟಿಂಗ್ ನಲ್ಲಿದ್ದೇನೆ, ನೀವು ನಮ್ಮ ಕಾರಿನ ಚಾಲಕನ ಬಳಿ ನೀಡಿ‌ ಎಂದಿದ್ದಾರೆ, ಆ ಹಣವನ್ನು ಚಾಲಕ ಪಡೆಯುತ್ತಿರುವಾಗ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.


ಬೆಳಿಗ್ಗೆ ಹನ್ನೊಂದುವರೆ ಗಂಟೆಗೆ ಅಖಾಡಕ್ಕೆ ಇಳಿದಿದ್ದ ಎಸಿಬಿ ತಂಡವು ರಾತ್ರಿ ಹತ್ತು ಗಂಟೆಯವರೆಗೆ ನಗರಸಭೆಯ ಪೌರಾಯುಕ್ತ ರ ಕಛೇರಿಯಲ್ಲೇ ಆಂತರಿಕ ತನಿಖೆ ನಡೆಸಿದ್ದು, ದಾಳಿ ಸಮಯದಲ್ಲಿ ಬಹುತೇಕ ಎಲ್ಲಾ ನೌಕರರು ದಿಕ್ಕಾಪಾಲಾಗಿದ್ದರು ಎಂದು ತಿಳಿದು ಬಂದಿದೆ, ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ ಸಂಬಂಧಿಸಿದ ಯಾವ ಕಛೇರಿಯಲ್ಲಿಯೂ ಸಹ ಸಿಬ್ಬಂದಿಗಳು ಇರಲಿಲ್ಲ, ಹಾಗೂ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು *ಚೆಕ್ ಬುಕ್* ಆದಿಯಾಗಿ ಬಹುತೇಕ ದಾಖಲೆಗಳು ಟೇಬಲ್ ಮೇಲೆಯೇ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿತ್ತು.


ನಗರಸಭೆ ಆವರಣದಲ್ಲಿ ಹಲವಾರು ನಗರಸಭಾ ಸದಸ್ಯರು ಸೇರಿದಂತೆ ಸಾರ್ವಜನಿಕರು ಈ ವೇಳೆ ಜಮಾಯಿಸಿದ್ದು ಪರ ವಿರೋಧ ಚರ್ಚೆಯಲ್ಲಿ ತೊಡಗಿದ್ದರು, ಕೆಲ ಸಾರ್ವಜನಿಕರು ಇದೇ ಸುಸಮಯ ಎಂದು ದಾಖಲೆ ಸಮೇತ ದೂರು ನೀಡಲು ಬಂದಿದ್ದರಾದರೂ ಅವಕಾಶ ಸಿಗದೆ ನಿರಶಾದರು.

ಸಾರ್ವಜನಿಕರು ಹೆಚ್ಚಾಗುತ್ತಿದ್ದಂತೆ ನಗರದ ಪೋಲಿಸರು ಬಂದು ಸಾರ್ವಜನಿಕರನ್ನು ಹೊರ ಕಳುಹಿಸಿ ಗೇಟ್ ಬಾಗಿಲು ಮುಚ್ಚಿಸಿದರು.


ಎಸಿಬಿ ಡಿವೈಎಸ್ಪಿ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಈ ವೇಳೆ ಹಾಜರಿದ್ದು ಕೆಲವು ನಗರಸಭೆಯ ಸಿಬ್ಬಂದಿ ಹಾಗೂ ಪಿಡಬ್ಲ್ಯೂಡಿ ಇಂಜಿನಿಯರ್ ಗಳನ್ನು ಸಹ ಕರೆಸಿಕೊಳ್ಳುವ ಮೂಲಕ ತನಿಖೆ ಕೈಗೊಂಡರು.


ನಗರಸಭೆಯ ಪೌರಾಯುಕ್ತ ರ ಕಛೇರಿಯಲ್ಲಿ ಆಂತರಿಕ ತನಿಖೆ ಮುಗಿಸಿದ ನಂತರ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕರೆದೊಯ್ಯಲಾಯಿತು ಎಂದು ಬಲ್ಲ ಮೂಲಗಳು ತಿಳಿಸಿವೆ.


ಚನ್ನಪಟ್ಟಣದ ಮಟ್ಟಿಗೆ ಸರ್ಕಾರಿ ಕಾರ್ಯಾಲಯಗಳಲ್ಲೊಂದಾದ ನಗರಸಭೆಗೆ ಪ್ರಪ್ರಥಮವಾಗಿ ಎಸಿಬಿ ದಾಳಿ ಸಡೆಸಿದ್ದು ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿರುವ ಅನೇಕ ಕಛೇರಿಗಳ ಮೇಲೆಯೂ ದಾಳಿ ನಡೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑