Tel: 7676775624 | Mail: info@yellowandred.in

Language: EN KAN

    Follow us :


ಕೂಡ್ಲೂರು ಸೋಪಾನ ಕಾಮಗಾರಿಯಲ್ಲಿ ಎರಡೂವರೆ ಲಕ್ಷ ಗುಳುಂ ಮಾಡಿದ ಶಂಕರ್

Posted date: 08 Jul, 2019

Powered by:     Yellow and Red

ಕೂಡ್ಲೂರು ಸೋಪಾನ ಕಾಮಗಾರಿಯಲ್ಲಿ ಎರಡೂವರೆ ಲಕ್ಷ ಗುಳುಂ ಮಾಡಿದ ಶಂಕರ್

ಚನ್ನಪಟ್ಟಣ: ಶಂಕರ್ ಎಂದರೆ ಚನ್ನಪಟ್ಟಣ ತಾಲ್ಲೂಕಿನಾದ್ಯಂತ ತುಂಡು ಗುತ್ತಿಗೆ ಕಾಮಗಾರಿಗಳೆಲ್ಲ ಕಿಸಕ್ ಎಂದು‌ ನಗುತ್ತವೆ,* ಅವರಿಂದ ಬಿಲ್ ಬಿಡುಗಡೆ ಮಾಡಿಸಿಕೊಳ್ಳುವ *ಗುತ್ತಿಗೆದಾರರಿಗೆ ಹಬ್ಬದ ರಸದೌತಣವೇ ಸರಿ,* ಅಂದಿನ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ *ಕುಮಾರಸ್ವಾಮಿ* ಮತ್ತು ಸದ್ಯ ಅಮಾನತ್ತಿನಲ್ಲಿರುವ ಪರೀಕ್ಷಾರ್ಥ ಕಿರಿಯ ಇಂಜಿನಿಯರ್ *ಶಂಕರ್* ನ ತುಂಡು ಗುತ್ತಿಗೆ ಕಾಮಗಾರಿಗಳ ಕರ್ಮಕಾಂಡ ಬಗೆದಂತೆಲ್ಲಾ ಗಬ್ಬೆದ್ದು ನಾರುವಂತಾಗಿವೆ.


ಅಂತಹದ್ದೇ ಒಂದು ತುಂಡು ಗುತ್ತಿಗೆ ಕಾಮಗಾರಿ ಮಳೂರು ಜಿಲ್ಲಾ ಪಂಚಾಯತಿಯ ಕೂಡ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ನಡೆದಿದ್ದು ೨,೫೦,೦೦೦ ರೂಪಾಯಿಗಳು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ದಾಖಲೆ ಸಮೇತ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.


ಕೂಡ್ಲೂರು ಗ್ರಾಮದ ಸರ್ಕಾರಿ ಕಾಲುವೆಯ ಬಳಿ *ಸೋಪಾನ ನಿರ್ಮಾಣ ಹಾಗೂ ಕಾಲುವೆಗೆ ದಿಂಡುಕಲ್ಲು* ಕಾಮಗಾರಿ ಗೆಂದು *೨,೪೮,೩೧೬* ರೂಪಾಯಿಗಳ ಬಿಲ್ ನ್ನು *ಗುತ್ತಿಗೆದಾರ ಪುಟ್ಟಸ್ವಾಮಿ* ಹೆಸರಿನಲ್ಲಿ ಪಡೆದಿದ್ದಾರೆ.


ಕೂಡ್ಲೂರು ಗ್ರಾಮದಲ್ಲಿ ಬಹುಶಃ ಮೂರು ವರ್ಷಗಳ ಹಿಂದೆಯೇ ಅಂದರೆ ೨೦೧೫/೧೬ ರಲ್ಲೇ ಬೇರೆ ಅನುದಾನದಲ್ಲಿ ನಡೆದ ಕಲ್ಲು ಕಟ್ಟಡ ಸೋಪಾನ ಕಾಮಗಾರಿಯನ್ನು ಶ್ರೀ ಬಸವೇಶ್ವರ ದೇವಾಲಯ ನಿರ್ಮಾಣ ಮಾಡಿದಾಗಲೇ ದಿವಂಗತ *ಬುಲೆಟ್ ಕೃಷ್ಣಪ್ಪ* ನವರು ನಿರ್ಮಿಸಿರುವುದಾಗಿ ಸ್ಥಳೀಯರು ತಿಳಿಸುತ್ತಾರೆ.


ನಂ ೭-೮ ರಲ್ಲಿ WBM & PCC ರಸ್ತೆ ೩೯ ಮೀಟರ್ ಉದ್ದವಿದ್ದು, ೦೩.೭೫ ಮೀಟರ್ ಅಗಲ, ೦.೧೫ ದಪ್ಪ ಕಾಂಕ್ರೀಟ್ ರಸ್ತೆ ಕಾಮಗಾರಿಯೆಂದು ತೋರಿಸಿದ್ದಾರೆ, ಆದರೆ ಈ ಕಾಮಗಾರಿ ೨೦೧೭/೧೮ ನೇ ಸಾಲಿನಲ್ಲಿ ನಡೆದಿದೆ ಎನ್ನುವುದರ ಬಗ್ಗೆ ಯಾವುದೇ ಕುರುಹು ಇಲ್ಲ.


ತಾಲ್ಲೂಕಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಜಿಲ್ಲಾ ಪಂಚಾಯತಿ ಗಳಲ್ಲೂ ಈ ಮೇಲಿನ ಅಧಿಕಾರಿಗಳು ಅಕ್ರಮ ಎಸಗಿದ್ದು ಪರೀಕ್ಷಾರ್ಥ ಇಂಜಿನಿಯರ್ ಶಂಕರ್ ಮಾತ್ರ ಅಮಾನತುಗೊಂಡಿದ್ದಾರೆ, ಅಂದಿನ ಪ್ರಭಾರ ಸಹಾಯಕ ಅಭಿಯಂತರ ಕುಮಾರಸ್ವಾಮಿ ಮತ್ತು ಗುತ್ತಿಗೆದಾರರನ್ನು ಸಹ ತನಿಖೆಗೊಳಪಡಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.


ಈ ಮೇಲ್ಕಂಡ ಕಾಮಗಾರಿ ಗೆ ಸಂಬಂಧಿಸಿದಂತೆ ಇಲಾಖೆ ವತಿಯಿಂದ ಸೀಮಿತ ಅವಧಿಯಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಸಾರ್ವಜನಿಕರ ತೆರಿಗೆ ಹಣವನ್ನು ವಸೂಲಿ ಮಾಡುವ ಮೂಲಕ ನ್ಯಾಯ ಒದಗಿಸಿಕೊಡಲೆಂದು ನಮ್ಮ ಪತ್ರಿಕೆ ಹಾಗೂ ಸಾರ್ವಜನಿಕರು ಈ ಮೂಲಕ ಒತ್ತಾಯಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑