Tel: 7676775624 | Mail: info@yellowandred.in

Language: EN KAN

    Follow us :


ಪತ್ರಕರ್ತ ಮತ್ತು ವೈದ್ಯ ಸಮಾಜದ ಎರಡು ಕಣ್ಣುಗಳು ಪ್ರೊ ಚಾಮರಾಜು

Posted date: 22 Jul, 2019

Powered by:     Yellow and Red

ಪತ್ರಕರ್ತ ಮತ್ತು ವೈದ್ಯ ಸಮಾಜದ ಎರಡು ಕಣ್ಣುಗಳು ಪ್ರೊ ಚಾಮರಾಜು

ಸೂರ್ಯ ಕಾಣದ್ದನ್ನು ಪತ್ರಕರ್ತ ಕಾಣುತ್ತಾನೆ, ದೇವರ ಬರಹವನ್ನು ಮೀರಿ ವೈದ್ಯ ರೋಗಿಯನ್ನು ಉಳಿಸುತ್ತಾನೆ, ವೈದ್ಯರ ಮತ್ತು ಪತ್ರಕರ್ತರ ದಿನಾಚರಣೆಯ ಸಂದರ್ಭದಲ್ಲಿ ಈರ್ವರನ್ನೂ ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ನಿವೃತ್ತ ಪ್ರೊಫೆಸರ್ ಚಾಮರಾಜ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿ ಮಾತೃಶ್ರೀ ಸೇವಾ ಟ್ರಸ್ಟ್ ನ ಶಿರಡಿ ಸಾಯಿಬಾಬಾ ವೃದ್ದಾಶ್ರಮ ದಲ್ಲಿ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವೈದ್ಯ ರೋಗಿಗಳನ್ನು ಸಂದರ್ಶಿಸಿ ರೋಗ ಗುಣಪಡಿಸಿ ಮರು ಜೀವ ನೀಡಿದರೆ ಪತ್ರಕರ್ತ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜದ ಉಳಿವಿಗೆ ಶ್ರಮಿಸುತ್ತಾನೆ, ಸಮಾಜದ ಎರಡು ಕಣ್ಣುಗಳಂತಿರುವ ಇವರಿಗೂ‌ ದಿನಾಚರಣೆಯ ಪ್ರಯುಕ್ತ ಸನ್ಮಾನ ಏರ್ಪಡಿಸುವ ಮೂಲಕ ಹರೀಶ್ ಹೆಗ್ಗಡೆ ಯವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ನುಡಿಗಳನ್ನಾಡಿದ ಹಿರಿಯ ಫಾರ್ಮಾಸಿಸ್ಟ್ ವೇದಮೂರ್ತಿ ಯವರು ನಮ್ಮ ಸಮಾಜದಲ್ಲಿ ಹಿರಿಯರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ, ಹೆತ್ತು ಹೊತ್ತು ಸಾಕಿದ ಮಕ್ಕಳು ವಯಸ್ಸಾದ ತಂದೆತಾಯಿಯಗಳನ್ನು ನೋಡಿಕೊಳ್ಳದೆ ವೃದ್ದಾಶ್ರಮಕ್ಕೆ ಬಿಡುವ ಮುನ್ನಾ ಯೋಚಿಸಬೇಕು, ನಾಳೆ ನಮಗೂ ವಯಸ್ಸಾಗುತ್ತದೆ, ನಮ್ಮ ಮಕ್ಕಳು ನಮ್ಮನ್ನು ಹೀಗೆ ದೂಡಿದರೇ ನಮ್ಮ ಮಾನಸಿಕ ಸ್ಥಿತಿ ಹೇಗಿರುತ್ತದೆ ಎಂದು ಚಿಂತಿಸಿದರೆ ಖಂಡಿತವಾಗಿಯೂ ಅವರು ಪೋಷಕರನ್ನು ವೃದ್ದಾಶ್ರಮ ಕ್ಕೆ ಕಳುಹಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.


ಹಿರಿಯ ಪತ್ರಕರ್ತ, ರೇಷ್ಮೆ ಸೀಮೆ ಪತ್ರಿಕೆಯ ಸಂಪಾದಕ ರಮೇಶ್ ಗೌಡ ಮಾತನಾಡಿ ವೈದ್ಯೋ ನಾರಾಯಣ ಹರಿ ಎಂಬ ನಾಣ್ಣುಡಿಯಂತೆ ಹಲವಾರು ವೈದ್ಯರು ಮಾನವೀಯತೆಯನ್ನು ಮೈಗೂಡಿಸಿಕೊಂಡು ವೃತ್ತಿ ಮಾಡುತ್ತಿರುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗಿದೆ, ಇಂತಹ ಅನೇಕ ವೈದ್ಯರು ನಮ್ಮೊಡನಿರುವುದು ಸಂತಸವಾಗಿದೆ, ಎಲ್ಲಾ ಒತ್ತಡಗಳ ನಡುವೆಯೂ ಹಲವರನ್ನು ಎದುರು ಹಾಕಿಕೊಂಡು ವಸ್ತುನಿಷ್ಠ ವರದಿ ಮಾಡುವ ಪತ್ರಕರ್ತ ರನ್ನು ಸಹ ಗುರುತಿಸಿ ಗೌರವಿಸುತ್ತಿರುವುದು ಸಹ ಹರೀಶ್ ಹೆಗ್ಗಡೆ ಯವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು.


ವೇದಿಕೆಯಲ್ಲಿ ರಾಮನಗರ ನಾರಾಯಣ ಆಸ್ಪತ್ರೆಯ ವೈದ್ಯ ಡಾ ಮಧುಸೂದನ್, ಸರ್ಕಾರಿ ಆಸ್ಪತ್ರೆಯ ಕಣ್ಣಿನ ತಜ್ಞ ಡಾ ಚೇತನ್, ಸರ್ಕಾರಿ ಆಸ್ಪತ್ರೆಯ ಹಿರಿಯ ಸಹಾಯಕ ನಿರ್ದೇಶಕ ಮಂಜೇಶ್, ಶಿಕ್ಷಕರಾದ ರಾಜಶೇಖರ, ಹರಿದಾಸ್, ಪತ್ರಕರ್ತರಾದ ಡಿ ಎಂ ಮಂಜುನಾಥ, ಅಕ್ಕೂರು ರಮೇಶ್ ಉಪಸ್ಥಿತರಿದ್ದರು.

ಇದೇ ವೇಳೆ ವೈದ್ಯರು ಮತ್ತು ಪತ್ರಕರ್ತರನ್ನು ವೇದಿಕೆಯ ಗಣ್ಯರು ಮತ್ತು ವೃದ್ದಾಶ್ರಮ ದ ಹರೀಶ್ ಹೆಗ್ಗಡೆ ಮತ್ತು ಸಂಗಡಿಗರು ಸನ್ಮಾನಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑