Tel: 7676775624 | Mail: info@yellowandred.in

Language: EN KAN

    Follow us :


ರೈತನ ಗೋಳು ಕೇಳೋರ್ ಯಾರು ?

Posted date: 26 Jul, 2019

Powered by:     Yellow and Red

ರೈತನ ಗೋಳು ಕೇಳೋರ್ ಯಾರು ?

ಒಂದು ಕಂತೆ ಕೊತ್ತಂಬರಿ ಮತ್ತು ಸಪ್ಪಸೀಗೆ ಸೊಪ್ಪಿಗೆ ಕೇವಲ ಐದು ರೂಪಾಯಿಗಳು, ಆಟೋದಲ್ಲಿ ಮಾರುತ್ತಿರುವ ವ್ಯಕ್ತಿ ವ್ತಾಪಾರಸ್ಥ, ಸೊಪ್ಪು ತಂದಿರುವುದು ಮಂಡ್ಯ ಮಾರ್ಕೆಟ್ ನಿಂದ, ಮಂಡ್ಯದಿಂದ ಆಟೋದಲ್ಲಿ ತಂದು ಚನ್ನಪಟ್ಟಣದಲ್ಲಿ ಮಾರಾಟ ಮಾಡ್ತಾನೆ ಅಂದ್ರೆ ಎಷ್ಟು ಖರ್ಚು ಬೀಳುತ್ತೆ ? ಮಾರ್ಕೆಟ್‌ ನಲ್ಲಿ ಎಷ್ಟು ಕೊಟ್ಟಿರುತ್ತಾನೆ ? ರೈತ ಭೂಮಿ ಹದಗೊಳಿಸಿ, ಉತ್ತು ಬಿತ್ತು ನೀರು ಹಾಯಿಸಿ, ಕಳೆ ತೆಗೆದು, ಔಷಧ ಸಿಂಪಡಿಸಿ, ಕಿತ್ತು, ಕಟ್ಟಿ ಬೆಳಗಿನ ಚಳಿಯಲ್ಲಿ ಮಾರುಕಟ್ಟೆಗೆ ತಂದು ಬಿಳಿ ಚೀಟಿ ದಂಧೆಗೊಳಪಟ್ಟು ಕಮೀಷನ್ ಕೊಟ್ಟು, ಆಟೋ ಬಾಡಿಗೆ ಕಾರ್ಮಿಕರ ಕೂಲಿ ಸೇರಿ ಎಷ್ಟೊಂದು ಖರ್ಚು ಬಿದ್ದಿರುತ್ತದೆ ಎಂದು ಕೊಂಡುಕೊಳ್ಳುವ ಗ್ರಾಹಕ ಒಮ್ಮೆಯಾದರೂ ಯೋಚಿಸುತ್ತಾನೆಯೇ ? ಊಹೂಂ !

ಅದರಲ್ಲೂ ಏ ಹತ್ರೂಪಾಯ್ಗೆ ಮೂರ್ ಮಾಡ್ಕೋ ಕೊಡಪ್ಪಾ ಅಂತ ಚೌಕಾಸಿ ಮಾಡೋರೋ ಹೆಚ್ಚು ಮಂದಿ ! ಹಾಂ ಚೌಕಾಸಿ ಮಾಡೋವರಲ್ಲಿ ಅನೇಕ ಮಂದಿ ಯುಜಿಸಿ ಸ್ಕೇಲ್ ಮತ್ತು ಜೀವನ ಭದ್ರತೆಯುಳ್ಳ  ಹೆಚ್ಚು ಸಂಬಳ ತೆಗೆದುಕೊಳ್ಳುವ ಮಂದಿಯೇ ಹೆಚ್ಚು.


ಸರ್ಕಾರ ಹಿಂಗೆ ಆದ್ರೇ ಸರ್ಕಾರಿ ನೌಕರರ ಈ ತಿಂಗಳ ಸಂಬ್ಳ ತಡ ಆಗುತ್ತೇ ಅಂತ ಬಾಯ್ ಬಾಯ್ ಬಡ್ಕೊಳೋ ಮಂದಿ ಕ್ಷಣ ಕ್ಷಣವೂ, ತುತ್ತು ತುತ್ತಿಗೂ ರೈತನ ಋಣದಲ್ಲಿರುವವರೂ ಕ್ಷಣವಾದರೂ ಚಿಂತಿಸಿ ರೈತನ ಬೆನ್ನಿಗೆ ನಿಲ್ಲಲಿ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑