Tel: 7676775624 | Mail: info@yellowandred.in

Language: EN KAN

    Follow us :


ಗುರಿ ಇಲ್ಲದ ವಿದ್ಯೆ ಗುಲಾಮ ಗಿರಿಗೆ ಸಮ, ನವೀನ ಧನವಂತ್

Posted date: 28 Jul, 2019

Powered by:     Yellow and Red

ಗುರಿ ಇಲ್ಲದ ವಿದ್ಯೆ ಗುಲಾಮ ಗಿರಿಗೆ ಸಮ, ನವೀನ ಧನವಂತ್

ಚನ್ನಪಟ್ಟಣ: ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿಯುವ ಸಮಯದಲ್ಲೇ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಕಲಿಯಬೇಕು, ಕನಸು ಮತ್ತು ಗುರಿ ಇಲ್ಲದೇ ಕೇವಲ ಓದಬೇಕು ಎಂದು ಓದಿದರೆ ಅದರಲ್ಲಿ ಅಂಕಗಳನ್ನು ಗಳಿಸುವುದನ್ನು ಬಿಟ್ಟು ಬೇರೇನೂ ಸಾಧಿಸಲಾಗುವುದಿಲ್ಲ ಎಂದು ಮಾತಿನ ಕೌಶಲ ತರಬೇತುದಾರ ನವೀನ ಧನವಂತ ಹೇಳಿದರು.

ಅವರು ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಚನ್ನಪಟ್ಟಣ ಓಬಿಸಿ ಹಾಸ್ಟೆಲ್ ವಿದ್ಯಾರ್ಥಿಗಳ ಸಂಘ ಹಮ್ಮಿಕೊಂಡಿದ್ದ ಆರನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದರು.


ವಿದ್ಯಾರ್ಥಿಗಳಿಗೆ ಅಂಕಗಳ ಜೊತೆಗೆ ಅರ್ಹತೆಯು ಮುಖ್ಯವಾಗುತ್ತದೆ, ಇದರಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ, ಕಳೆದು ಹೋದ ಸಮಯ ಮತ್ತೆ ಸಿಗದ ಕಾರಣ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಚಾಕಚಕ್ಯತೆಯನ್ನು ಗಳಿಸಿಕೊಳ್ಳಬೇಕು, ನಾನು ಗೆಲ್ಲುತ್ತೇನೆ, ಗುರಿ ಮುಟ್ಟುತ್ತೇನೆ ಎಂಬ ಸಾಧಿಸುವ ಛಲವಂತರಾಗಬೇಕು ಎಂದರು.


ಸಾಧನೆಗೆ ನಿಮ್ಮ ಬಣ್ಣ, ದೇಹ ದಾರ್ಡ್ಯತೆ ಒಟ್ಟಾರೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ, ಆಗಲೂ ಬಾರದು, ನಮ್ಮನ್ನು ಯಾರು ನಂಬದಿದ್ದರೂ ಪರವಾಗಿಲ್ಲ, ನಮಗೆ ನಮ್ಮ ಮೇಲೆಯೇ ನಂಬಿಕೆ ಇರಬೇಕು ಆಗಲೇ ಜೀವನದಲ್ಲಿ ಉತ್ತಮವಾದುದನ್ನು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷಣ ಮಾಡಿದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಂ ರಾಮಕೃಷ್ಣ ರವರು ನಾವು ಓದುವ ಸಮಯದಲ್ಲಿ ಇಷ್ಟೊಂದು ಸೌಲಭ್ಯಗಳಿರಲಿಲ್ಲ, ಆ ಸಮಯದಲ್ಲೇ ನಾವುಗಳು ಪೈಪೋಟಿ ನಡೆಸುವ ಮೂಲಕ ಪ್ರಥಮ ಸ್ಥಾನ ಗಳಿಸುವಲ್ಲಿ ಸಫಲರಾಗಿದ್ದೆವು, ಇಂದು ಕಾಲೇಜು ಮತ್ತು ಹಾಸ್ಟೆಲ್ ಗಳಲ್ಲಿ ಸಂಪೂರ್ಣ ಸೌಲಭ್ಯ ಗಳಿರುವುದರಿಂದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಪೋಷಕರು ಮತ್ತು ನಾಡಿಗೆ ಕೀರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.


*ಹಾಸ್ಟೆಲ್ ನ ಹಳೆಯ ವಿದ್ಯಾರ್ಥಿ ಹಾಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಗೋವಿಂದಯ್ಯನವರು ಇದೇ ಹಾಸ್ಟೆಲ್ ನ ವಿದ್ಯಾರ್ಥಿಯೋರ್ವನಿಗೆ ತಮ್ಮದೇ ಹಣದಲ್ಲಿ ಈಗಾಗಲೇ ಇಂಜಿನಿಯರ್ ಪದವಿ ಓದಿಸಿದ್ದು,  ಈ ಸಾಲಿನಲ್ಲಿ ಸಹ ಮುಸ್ಲಿಂ ವಿದ್ಯಾರ್ಥಿಯೋರ್ವನನ್ನು ಇಂಜಿನಿಯರ್ ಪದವಿ ಓದಿಸಲು ಮುಂದಾಗಿರುವುದರಿಂದ ಸಂಘದ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಂದ ಪ್ರಶಂಸೆಗೆ ಒಳಗಾದರು.*


ಇದೇ ವೇಳೆ ಹಾಸ್ಟೆಲ್ ನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರಥಮ ದರ್ಜೆ ಗುತ್ತಿಗೆದಾರ ಎಲ್ ವಿ ಲೋಕೇಶ್ ಕುಮಾರ್ ಮತ್ತು ನಿಲಯದ ವಿದ್ಯಾರ್ಥಿಗಳಿಂದ ಪುರಸ್ಕಾರ ನೀಡಲಾಯಿತು ಮತ್ತು ನಿಲಯದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ಗಣ್ಯರಿಂದ ವಿತರಿಸಲಾಯಿತು. ನಿವೃತ್ತ ಅಧಿಕಾರಿಗಳು ಮತ್ತು ವಿದ್ಯಾರ್ಥಿ ನಿಲಯ ದ ಹಳೆಯ ವಿದ್ಯಾರ್ಥಿಗಳು ಆದ ಕೃಷಿ ಇಲಾಖೆಯ ಮಹೇಶ್, ಪೋಲಿಸ್ ಇಲಾಖೆಯ ವಿವೇಕ್ ಮತ್ತು ಶಿಕ್ಷಣ ಇಲಾಖೆಯ ರಾಮಲಿಂಗಯ್ಯ ನವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಸಹಕಾರ ಇಲಾಖೆಯ ಉಪಪ್ರಬಂಧಕರಾದ ಎನ್ ವೆಂಕಟೇಶ್ ರವರು ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ನಿಲಯ ಪಾಲಕ ಎನ್ ಮೋಹನ್, ಚನ್ನಪಟ್ಟಣ ಓಬಿಸಿ ಹಾಸ್ಟೆಲ್ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑