Tel: 7676775624 | Mail: info@yellowandred.in

Language: EN KAN

    Follow us :


ಶಾಂತಿಯುತ ಮತದಾನ ನಡೆಸಲು ಅಧಿಕಾರಿಗಳು ಕ್ರಮವಹಿಸಿ : ಚುನಾವಣಾ ವೀಕ್ಷಕರು
ಶಾಂತಿಯುತ ಮತದಾನ ನಡೆಸಲು ಅಧಿಕಾರಿಗಳು ಕ್ರಮವಹಿಸಿ : ಚುನಾವಣಾ ವೀಕ್ಷಕರು

ರಾಮನಗರ, ಏ. 20: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಗೆ ನಿಯೋಜನೆಗೊಂಡಿರುವ ಚುನಾವಣಾ ವೆಚ್ಚ ಹಾಗೂ ಸಾಮಾನ್ಯ ವೀಕ್ಷಕರೊಂದಿಗೆ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿತ್ತು.ರಾಮನಗರ ಚುನಾವಣಾ ವೆಚ್ಚ ವೀಕ್ಷಕರಾಗಿ ಉಜ್ವಲ್ ಕುಮಾರ್ ಬಿ. ಚವನ್, ಕನಕಪುರ ಚುನಾವಣಾ ವೆಚ್ಚ ವೀಕ್ಷಕರಾದ ರವಿಕಾಂತ ಚೌಧರಿ, ಚನ

ತೀರ್ಥ ಕ್ಷೇತ್ರಗಳಲ್ಲಿ ಭಕ್ತಿ ಹೆಸರಿನಲ್ಲಿ ಗಲೀಜು ಮಾಡಬೇಡಿ, ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆ ಮನವಿ
ತೀರ್ಥ ಕ್ಷೇತ್ರಗಳಲ್ಲಿ ಭಕ್ತಿ ಹೆಸರಿನಲ್ಲಿ ಗಲೀಜು ಮಾಡಬೇಡಿ, ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆ ಮನವಿ

ಮಂಡ್ಯ: ಮದ್ದೂರು; ತಮ್ಮ ಕಷ್ಟಗಳನ್ನು ಪರಿಹರಿಸು ದೇವರೇ ಎಂದು ಭಕ್ತರು ಹಲವಾರು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ವಿಶೇಷವಾಗಿ ನದಿಗಳು, ಕಲ್ಯಾಣಿಗಳು ಇರುವೆಡೆ ತಮ್ಮ ಪಾಪಗಳನ್ನು ತೊಳೆದುಕೊಳ್ಳಲೆಂದೇ, ಸಾಮೂಹಿಕ ಸ್ನಾನ ಮಾಡಿ ದೇವಾಲಯಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದು ಪುನೀತರಾದೆವು ಎಂದು ಭಾವುಕರಾಗುತ್ತಾರೆ. ಆದರೆ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿದಾಗ ನಾನೆಷ್ಟು ಕೊಳಕನ

ಜನ್ಮದಾತೆಯನ್ನೇ ಹೊರದಬ್ಬಿದ ಪುತ್ರಿ. ನ್ಯಾಯ ಕೊಡಿಸಿದ ರಜನಿರಾಜ್
ಜನ್ಮದಾತೆಯನ್ನೇ ಹೊರದಬ್ಬಿದ ಪುತ್ರಿ. ನ್ಯಾಯ ಕೊಡಿಸಿದ ರಜನಿರಾಜ್

ಮಂಡ್ಯ: ಮದುವೆಯ ನಂತರ ಪತಿಯನ್ನೂ ಕಳೆದುಕೊಂಡು, ಮಗಳು, ಅಳಿಯನ ಜೊತೆ ತನ್ನ ಮನೆಯಲ್ಲಿಯೇ ವಾಸ ಮಾಡುತ್ತಿದ್ದ ವೃದ್ದೆಗೆ ತನ್ನ ಮಗಳು ಮತ್ತು ಅಳಿಯ ಊಟ ವಸತಿಯನ್ನೂ ನೀಡದೆ ವೃದ್ದೆಯನ್ನು ಮನೆಯಿಂದ ಹೊರಹಾಕಿದ ಘಟನೆ ಮದ್ದೂರು ತಾಲ್ಲೂಕಿನ ಅಪ್ಪಾಜಯ್ಯನದೊಡ್ಡಿ ಗ್ರಾಮದಲ್ಲಿ ಜರುಗಿದ್ದು, ಮಾಹಿತಿ ತಿಳಿದ ಮಹಿಳಾ ಸಂಸ್ಥೆಯ ಅಧ್ಯಕ್ಷೆ ರಜನಿರಾಜ್ ರವರು ಸ್ಥಳೀಯ ಪೋಲಿಸರೊಡಗೂಡಿ ವೃದ್ದೆಗೆ ನ್ಯಾಯ ಒದಗಿಸ

ಬೆಂಗಳೂರಿನ ಗಾಯನ ಸಮಾಜದಲ್ಲಿ ಕುಮಾರಿ ಸೌರಭ ರವರ ರಂಗ ಪ್ರವೇಶ
ಬೆಂಗಳೂರಿನ ಗಾಯನ ಸಮಾಜದಲ್ಲಿ ಕುಮಾರಿ ಸೌರಭ ರವರ ರಂಗ ಪ್ರವೇಶ

ಬೆಂಗಳೂರು: ಸತತ ಹದಿಮೂರು ವರ್ಷಗಳ ಕಾಲ ವಿದುಷಿ ನಿವೇದಿತಾ ಶರ್ಮಾ ನಾಡಿಗ್ ರವರ ಬಳಿ ಭರತನಾಟ್ಯ ಕಲಿತು ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದ ಕುಮಾರಿ ಸೌರಭ ರವರು ನಾಳೆ (೦೯/೦೪/೨೩ ರ ಭಾನುವಾರ) ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿನ ಗಾಯನ ಸಮಾಜ ದಲ್ಲಿ ಮುಂಜಾನೆ ೦೯:೩೦ ಕ್ಕೆ ರಂಗ ಪ್ರವೇಶ ಮಾಡುತ್ತಿದ್ದಾರೆ.ಸೌರಭ ರವರು ಶ್ರೀಮತಿ ಸರಸವಾಣಿ ಎಂ ಎಸ್ ಮತ್ತು ಲೇ ಪ್ರಕಾಶ್ ಎನ್ ವಿ ರವರ ಪುತ

ನಿಡಘಟ್ಟ ಗ್ರಾಮದ ಅಣ್ಣೇಗೌಡ ರ ಗೂಡಿನಲ್ಲಿ ಮಧ್ಯತಿರುಮಲ ದೇವಾಲಯಕ್ಕೆ ಸಪ್ತ ದಿನಗಳ ಪೂಜೆ
ನಿಡಘಟ್ಟ ಗ್ರಾಮದ ಅಣ್ಣೇಗೌಡ ರ ಗೂಡಿನಲ್ಲಿ ಮಧ್ಯತಿರುಮಲ ದೇವಾಲಯಕ್ಕೆ ಸಪ್ತ ದಿನಗಳ ಪೂಜೆ

ಮದ್ದೂರು: ನಿಡಘಟ್ಟ; ತಿರುಮಲ ದೇವಾಲಯ ಎಂದರೆ ಅದು ದೂರದ ತಿರುಪತಿ, ಶ್ರೀ ಶ್ರೀನಿವಾಸ ದೇವರು ನೆಲೆಸಿರುವ ತಿರುಪತಿ ಎಂದಷ್ಟೇ ಭಕ್ತರು ತಿಳಿದುಕೊಂಡಿದ್ದಂತೂ ಸತ್ಯ. ತಿರುಪತಿ ದೂರ ಎನ್ನುವ ಕಾರಣಕ್ಕೋ ಏನೋ ರಾಜ್ಯದ ಕೆಲವು ಕಡೆ ಚಿಕ್ಕ ತಿರುಪತಿ ಹೆಸರಲ್ಲಿ ಅನೇಕಾನೇಕ ಶ್ರೀ ವೆಂಕಟೇಶ್ವರ ದೇವಾಲಯಗಳು, ಶ್ರೀದೇವಿ, ಭೂದೇವಿ ಸಮೇತ ವೆಂಕಟೇಶ್ವರ, ಲಕ್ಷ್ಮಿ, ಪದ್ಮಾವತಿ ಸಮೇತ ಶ್ರೀನಿವಾಸ ಸೇರಿದಂತೆ ವಿವಿಧ ಹೆಸರ

ಬುಕ್ಕಸಾಗರ ಗ್ರಾಮದ ಬಳಿ ದರೋಡೆ ಮಾಡಿದ ಕಳ್ಳರನ್ನು ಬಂಧಿಸಿದ ಅಕ್ಕೂರು ಪೋಲಿಸರು

ಚನ್ನಪಟ್ಟಣ, ಮಾ.20:  ಕೆಲ ದಿನಗಳ ಹಿಂದೆ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ಬುಕ್ಕಸಾಗರದ ಬಳಿ ನಡೆದ ದರೋಡೆ ಪ್ರಕರಣವನ್ನು ಬೇಧಿಸಿದ ಗ್ರಾಮಾಂತರ ವೃತ್ತ ನಿರೀಕ್ಷಕರ ತಂಡ ಐದು ಮಂದಿ ಹೈನಾತಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರ ಬಂಧನಕ್ಕೆ ಒಳಗಾಗಿರುವ ಹೈನಾತಿ ದರೋಡೆಕೋರರನ್ನು ಅಕ್ಕೂರಿನ ಆಟೋಚಾಲಕ ಆನಂದ್ 

ಇಪ್ಪತ್ತೈದು ವರ್ಷಗಳಲ್ಲಿ ಆಗದ ಕೆಲಸಗಳು ಮೂರು ವರ್ಷಗಳಲ್ಲಿ ಆಗಿವೆ. ಹೆಚ್ಡಿಕೆ
ಇಪ್ಪತ್ತೈದು ವರ್ಷಗಳಲ್ಲಿ ಆಗದ ಕೆಲಸಗಳು ಮೂರು ವರ್ಷಗಳಲ್ಲಿ ಆಗಿವೆ. ಹೆಚ್ಡಿಕೆ

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿ 25 ವರ್ಷದಲ್ಲಿ ಆಗದ ಕೆಲಸಗಳು ಮೂರು ವರ್ಷದಲ್ಲಿ ನಾನು ಶಾಸಕನಾದ ನಂತರ ಆಗಿವೆ, ಆದರೆ ಈಗ ಕೆಲವರು ನಮ್ಮದೇ ಕೆಲಸ ಎಂದು ಸೌಂಡ್ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಂಎಂ ಎಚ್.ಡಿ. ಕುಮಾರಸ್ವಾಮಿ ಪರೋಕ್ಷವಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ಟಾಂಗ್ ನೀಡಿದರು.ಚನ್ನಪಟ್ಟಣದ ಎಪಿಎಂಸಿ ಯಾರ್ಡ್ ನಲ್ಲಿ ಕಾವಲುಗೋಪುರವನ್ನು ಉದ್ಘಾಟಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಮಾಕಳಿ

ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ: ಬಸವರಾಜ ಬೊಮ್ಮಾಯಿ
ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ: ಬಸವರಾಜ ಬೊಮ್ಮಾಯಿ

ರಾಮನಗರ, ಜನವರಿ 3: ಸಮಯ ಮತ್ತು ಹಣದ ಸದುಪಯೋಗ ಸರ್ಕಾರದ ನೀತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಅವರು ಇಂದು ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ನಿಗದಿತ ಸಮಯದಲ್ಲಿ ಯೋಜನೆಗಳನ್ನು ಮುಗಿಸದೇ ಇದ್ದಲ್ಲಿ ಯೋಜನೆಯ ಮೊತ್ತ  ಹೆಚ್ಚಾಗುತ್ತದೆ. ಕಾಲಮಿತಿಯೊಳಗೆ ಪೂರ

ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ
ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.ಇದು ರಾಜ್ಯದಾದ್ಯಂತ ಎಂಟು ಸಾವಿರಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತ ಸದಸ್ಯರನ್ನು ಹೊಂದಿರುವ ಪತ್ರಕರ್ತರ ಕ್ರಿಯಾಶೀಲ ಸಂಘಟನೆಯಾಗಿದೆ.ಸಂಘದ 36 ನೇ ರಾಜ್ಯ ಸಮ್ಮೇಳನವು ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೀಡು ಕಲಬುರಗಿಯಲ್ಲಿ 2022 ಜನವರಿ 3 ಮತ್ತು 4 ರಂದು ನಡೆಯಲಿದೆ. ಜನವರಿ 4 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ

ರಸ್ತೆ ಬದಿಯಲ್ಲಿ ನಡೆದು ಹೋಗುತ್ತುದ್ದ ಕಾಲೇಜು ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಕಾರು
ರಸ್ತೆ ಬದಿಯಲ್ಲಿ ನಡೆದು ಹೋಗುತ್ತುದ್ದ ಕಾಲೇಜು ವಿದ್ಯಾರ್ಥಿಗಳಿಗೆ ಢಿಕ್ಕಿ ಹೊಡೆದ ಕಾರು

ಮಳವಳ್ಳಿ: ಪಟ್ಟಣದ ಮೈಸೂರು ರಸ್ತೆಯಲ್ಲಿ ಗುರುವಾರ ನಡೆದು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತಿ ಸುಝುಕಿ ಬಲೆನೋ KA-01 MR 9616 ಸಂಖ್ಯೆಯ ಕಾರು ಢಿಕ್ಕಿ ಹೊಡೆದಿದೆ.ಪಟ್ಟಣದ ಶಾಂತಿ ಕಾಲೇಜಿನ ಬಿಕಾಂ ಮೊದಲ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಶರತ್, ಶಶಾಂಕ್, ಸುದರ್ಶನ್ ಎಂಬ ಮೂವರು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಹಿಂದಿನಿಂದ ವೇಗವಾಗಿ

Top Stories »  Top ↑