
ಪೌಳಿದೊಡ್ಡಿ ಗ್ರಾಮದ ಮುಖಂಡ ಜಯರಾಮಯ್ಯ ನಿಧನ
ಚನ್ನಪಟ್ಟಣ: ನ/೧೯/೨೨. ತಾಲ್ಲೂಕಿನ ವಂದಾರಗುಪ್ಪೆ ಗ್ರಾಪಂ ವ್ಯಾಪ್ತಿಯ ಪೌಳಿದೊಡ್ಡಿ ಗ್ರಾಮದ ಹಿರಿಯ ಮುಖಂಡ ಜಯರಾಮಯ್ಯ (78) ಇಂದು ಮುಂಜಾನೆ ನಿಧನ ಹೊಂದಿದರು. ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.ವಂದಾರಗುಪ್ಪೆ ಗ್ರಾಮದ ವಿಎಸ್ಎಸ್ಎನ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿಯೂ ಸಹ ಉತ್ತಮ ಸೇವೆ ಸಲ್ಲಿಸಿದ್ದು, ರೈತರ ಹಿತಕ್ಕಾಗಿ ದುಡಿದಿದ್ದ

ಕೆರೆಗೆ ಬಿದ್ದು ವಿದ್ಯಾರ್ಥಿ ಮೃತ್ಯು
ಮಂಡ್ಯ, ಅ.24: ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಕೆರೆಯಲ್ಲಿ ಕೈಕಾಲು ತೊಳೆಯುತ್ತಿದ್ದಾಗ ಅಯತಪ್ಪಿ ಬಿದ್ದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು ಅವರ ಪುತ್ರ ಕೆ.ಎಂ.ಹರ್ಷ(19) ಮೃತ ಪಟ್ಟಿರುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

16 ಕೆರೆಗಳ ನಿರ್ಮಾತೃ, ದೇಶದ ಗಮನ ಸೆಳೆದಿದ್ದ ದಾಸನದೊಡ್ಡಿಯ ಕಲ್ಮನೆ ಕಾಮೇಗೌಡ ಇನ್ನಿಲ್ಲ
ಮಂಡ್ಯ: 16 ಕೆರೆಗಳನ್ನು ನಿರ್ಮಿಸುವ ಮೂಲಕ ದೇಶದ ಗಮನ ಸೆಳೆದಿದ್ದ ಜಿಲ್ಲೆಯ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ (86) ಸೋಮವಾರ (ಅ 17) ಮುಂಜಾನೆ ಅನಾರೋಗ್ಯದಿಂದ ನಿಧನರಾದರು.ಕಳೆದ ರಾತ್ರಿ ಕಾಮೇಗೌಡ ಅವರಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಇದಾದ ನಂತರ ವಾಂತಿಯನ್ನು ಮಾಡಿಕೊಂಡಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ

ಎಪ್ಪತ್ತು ವರ್ಷ ಬ್ರಿಟನ್ ಆಳಿದ ರಾಣಿ ಎಲಿಜಬೆತ್ II ನಿಧನ
ಲಂಡನ್: ವಯೋಸಹಜ ಖಾಯಿಲೆಯಿಂದ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II ತಮ್ಮ 96 ನೇ ವಯಸ್ಸಿನಲ್ಲಿ ಗುರುವಾರ ರಾತ್ರಿ ಸ್ಕಾಟ್ಲೆಂಡ್ನ ಅರಮನೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಬಲ್ಮೋರಾಲ್ನಲ್ಲಿ ಅವರು ತೀವ್ರ ವೈದ್ಯಕೀಯ ನಿಗಾದಲ್ಲಿದ್ದರು. ರಾಣಿಯ ಪಾರ್ಥಿವ ಶರೀರವನ್ನು ಇದೀಗ ಬಾಲ್ಮೊರಲ್ ಎಸ್ಟೇಟ್ನಲ್ಲಿ ಇಡಲಾಗಿದೆ. ಇಂದು ಲಂಡನ

ಪಾಂಡವಪುರಮಾಜಿ ಶಾಸಕರಾದ ಕೆ.ಕೆಂಪೇಗೌಡಇನ್ನಿಲ್ಲ
ಮಂಡ್ಯ: ಪಾಂಡವಪುರ;ಮಾಜಿ ಶಾಸಕ ಕೆ.ಕೆಂಪೇಗೌಡ(96) ವಯೋಸಹಜವಾಗಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.ಇಂದು ಮಧ್ಯಾಹ್ನ 3 ರಿಂದ 4ಗಂಟೆಯೊಳಗೆ ಸ್ವಗ್ರಾಮ ಪಾಂಡವಪುರ ತಾಲೂಕು ಚಿನಕುರಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ನಾಲ್ಕು ಗಂಡುಮಕ್ಕಳು, ಐದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕೆಂಪೇಗೌಡ ಅವರು ಮೂರು ಬಾರಿ ಶಾಸಕರಾಗಿ ಜನಮನ್ನಣೆ ಗಳಿಸಿದ್ದರು. ತಾಲೂಕು ಬೋರ್ಡ್ ಅಧ್ಯಕ್ಷ

ಸ್ತಬ್ಧವಾಯ್ತು \'ಉತ್ತರ\'ದ ಧ್ವನಿ: ಸಚಿವ ಉಮೇಶ್ ಕತ್ತಿ ಸವೆಸಿದ ಹಾದಿ
ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಜನತಾ ಪರಿವಾರ ಮೂಲದ ಹಿರಿಯ ಮುತ್ಸದ್ಧಿ ಉಮೇಶ್ ಕತ್ತಿ (61) ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕದ ಜನಪರ ಧ್ವನಿಯೂ ನಿಂತುಹೋಗಿದೆ.1961ರ ಮಾರ್ಚ್ 14 ರಂದು ಬೆಳಗಾವಿ ಜಿಲ್ಲೆ ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಉಮೇಶ್ ಕತ್ತಿ ಜನಿಸಿದರು. ತಂದೆ ವಿಶ್ವನಾಥ್ ಕತ್ತಿ ಅವರ ಅಕಾಲಿಕ ನಿಧನದಿಂದ ಹ

ಮಕ್ಕಳಿಗೆ ವಿಷ ಕುಡಿಸಿ ಸಾವಿಗೆ ಶರಣಾದ ರೈತ ಸಂಘದ ಅಧ್ಯಕ್ಷನ ಪತ್ನಿ
ಮಾಗಡಿ: ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.ತಾಲೂಕು ರೈತ ಸಂಘದ ಅಧ್ಯಕ್ಷ, ರೈತ ಸಂಘದ ಮುಂಚೂಣಿಯ ಯುವನಾಯಕ, ಹೊಸಪಾಳ್ಯ ಗ್ರಾಮದ ಲೋಕೇಶ್ ಅವರ ಪತ್ನಿ ರೂಪಾ (38) ಇವರ ಮಕ್ಕಳಾದ 6 ವರ್ಷದ ಹರ್ಷಿತಾ ಮತ್ತು 4 ವರ್ಷದ ಸ್ಪೂರ್ತಿ ಆತ್ಮಹತ್ಯೆ ಶರಣಾದವರು.ಜಮ

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನ
ಬೆಂಗಳೂರು: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ( 83 ) ಗುರುವಾರ ರಾತ್ರಿ ನಗರದ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.\'ಕಾಡುಕುದುರೆ\' ಚಿತ್ರದ \'ಕಾಡು ಕುದುರೆ ಓಡಿ ಬಂದಿತ್ತಾ\' ಹಾಡಿನ ಹಿನ್ನೆಲೆ ಗಾಯನಕ್ಕೆ ಶಿವಮೊಗ್ಗ ಸುಬ್ಬಣ್ಣ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು. ಈ ಮೂಲಕ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ

ಚನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಕಾಡಾನೆಗೆ ಬಲಿಯಾದ ರೈತ ಮಹಿಳೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ
ಚನ್ನಪಟ್ಟಣ.ಆ.೦೯: ಮಹಿಳೆಯ ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಸಾಯಿಸಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಚೆನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಮೃತ ಮಹಿಳೆಯನ್ನು ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದ ಅರ್ಚಕರಾದ ಚನ್ನಪ್ಪ ಎಂಬವರ ಪತ್ನಿ ಚನ್ನಮ್ಮ (೫೬) ಎಂದು ಗುರುತಿಸ ಲಾಗಿದೆ. ಮುಂಜಾನೆ ಹಾಲು ಕರೆಯುವ ಸಲುವಾಗಿ ಮನೆಯ ಹಿಂಬದಿ ಇರುವ ತೋಟಕ್ಕೆ ಹೋದಾಗ ಏಕಾಏಕಿ ಕಾ

ಬಸ್ ಮತ್ತು ಬೈಕ್ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸಾವು
ರಾಮನಗರ: ತಾಲೂಕಿನ ಕೈ ಲಾಂಚ ಹೋಬಳಿಯ ಗೌಡಯ್ಯನದೊ ಡ್ಡಿ ಗ್ರಾಮದ ಸಮೀಪದ ಕೆರೆ ಏರಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬಸ್ ಮತ್ತು ಬೈಕ್ ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸಾವನ್ನಪ್ಪಿ, ತಂದೆ ತಾಯಿ ಮತ್ತು ಮತ್ತೊಂದು ಮಗು ಗಾಯಗೊಂಡ ಘಟನೆ ನಡೆದಿದೆ. ಮಾಗಡಿ ತಾಲೂಕಿನ ತೊರೆಪಾಳ್ಳ ಗ್ರಾಮದ ರೇಣುಕಯ್ಯ , ಶಿಲ್ಪ ದಂಪತಿ ತಮ್ಮ ಮಕ್ಕಳಾದ 4 ವರ್ಷದ ಚಂದನ, ಒಂದು ವರ್ಷ ದ ಕೃತಿಕಾ ರೊಂದಿಗೆ ಬೈಕ್