
ಪ್ರಗತಿಪರ ರೈತರನ್ನು ಸನ್ಮಾನಿಸಿದ ತಾಲ್ಲೂಕು ಆಡಳಿತ
ಚನ್ನಪಟ್ಟಣ ಜ..೧೬: ತಾಲೂಕು ಕಚೇರಿಯಲ್ಲಿ ಸೋಮವಾರ ವಿಶೇಷವಾಗಿ ತಾಲ್ಲೂಕು ಆಡಳಿತ ಹಾಗೂ ಕಂದಾಯ ಇಲಾಖೆ ನೌಕರರ ಸಂಘವು ಸಂಕ್ರಾಂತಿ ಹಬ್ಬ ಆಚರಣೆ ಮೂಲಕ ರೈತರನ್ನು ಸನ್ಮಾನಿಸಿ ಹು(ಸು)ಗ್ಗಿ ಹಬ್ಬಕ್ಕೆ ಮತ್ತಷ್ಟು ಮರೆಗು ನೀಡಿದರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗ ಇದೇ ಪ್ರಥಮವಾಗಿ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ ಅಧಿಕ

ಇ-ಕೆವೈಸಿ ಮಾಡಿಸದ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಇಲ್ಲ
ರಾಮನಗರ, ಡಿ. 08: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂಕಿಸಾನ್) ಯೋಜನೆಯನ್ನು 2018ರ ಡಿಸೆಂಬರ್ ನಲ್ಲಿ ಚಾಲನೆ ನೀಡಲಾಗಿದ್ದು ಅರ್ಹ ರೈತರಿಗೆ ಮೂರು ಸಮಾನ ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿ ನೆರವು ನೀಡಲಾಗುತ್ತಿದ್ದು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ. ಅಕ್ಟೋಬರ್, 17 ರಂ

ಕಾಡುಹಂದಿ ಕೊಲ್ಲಲು ಅವಕಾಶವಿದ್ದರೂ ಅರಣ್ಯ ಇಲಾಖೆ ಪ್ರಚಾರ ನೀಡಿಲ್ಲ ರೈತರ ಆರೋಪ
ಮದ್ದೂರು: ಮಾನವರ ಪ್ರಾಣಹಾನಿ, ರೈತ ಬೆಳೆದ ಬೆಳೆ ನಾಶಮಾಡುವ ಕಾಡುಹಂದಿಗಳನ್ನು ಕೊಲ್ಲಲು ಸರ್ಕಾರ ಅನುಮತಿ ನೀಡಿದೆ. ಆದರೆ ರೈತರಿಗೆ ಅರಣ್ಯಾಧಿಕಾರಿಗಳು ಈ ಕುರಿತು ಮಾರ್ಗದರ್ಶನ ಮಾಡದಿರುವುದರಿಂದ ಕಾಡುಹಂದಿ ಹಾಗೂ ಮುಳ್ಳುಹಂದಿಗಳ ಹಾವಳಿಯಿಂದ ಮಾನವನ ಪ್ರಾಣಕ್ಕೆ ಹಾಗೂ ಸ್ವತ್ತಿಗೆ ಹಾನಿಯಾಗುತ್ತಿರುವ ಮತ್ತು ಬೆಳೆ ನಷ್ಠ ಆಗುತ್ತಿರುವ ಅಂಶ ಪರಿಗಣಿಸಿ ಕರ್ನಾಟಕ ಸರ್ಕಾರ ನಡ

ಅನ್ನದಾತ ಇಂದು ತಲ್ಲಣಗೊಂಡಿದ್ದಾನೆ. ಎಸ್ಎ ಕಂಪನಿ ಆತನನ್ನು ಉನ್ನತಕ್ಕೇರಿಸಲಿ ವಿಲ್ಟ್ರೆಡ್ ಡಿಸೋಜಾ
ಮಂಡ್ಯ: ನ: ೧೫/೨೦೨೨. ಅನ್ನದಾತೋ ಸುಖೀನೋಭವ ಎಂಬ ಮಾತನ್ನು ಉಳಿಸಿಕೊಂಡಿರುವ ರೈತ ಇಂದು ತಲ್ಲಣಗೊಂಡಿದ್ದಾನೆ. ರೈತನ ಸೋಗಿನಲ್ಲಿ ಮಾರಾಟ ಮಾಡುತ್ತಿರುವ ಕಾರ್ಪೋರೆಟ್ ಕಂಪನಿಗಳು ಇಂತಹ ರೈತ ಮತ್ತು ಗ್ರಾಹಕರ ಆರೋಗ್ಯ ಮತ್ತು ಆಯಸ್ಸನ್ನು ಕಸಿದುಕೊಳ್ಳುತ್ತಿವೆ ಎಂದು ಸಾವಯವ ಕೃಷಿಕ, ಕಂಪನಿಯ ನಿರ್ದೇಶಕ ವಿಲ್ಟ್ರೆಡ್ ಡಿಸೋಜಾ ತಿಳಿಸಿದರು. ಅವರು ಮಂಗಳವಾರ ನಗರದ ಕರ್ನಾಟಕ ಸಂಘ ದ ಕೆ ವಿ ಶಂಕರೇಗೌಡ ಸಭಾಂಗಣ

ಕಳಂಕಿತ ಕೋಡಿಹಳ್ಳಿ ಇರುವ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಿಲ್ಲ: ವಿಧಾನಸೌಧಲ್ಲಿ ನಡೆದ ಸಚಿವರ ನೇತೃತ್ವದ ಸಭೆಯಲ್ಲಿ ರೈತರ ಪಟ್ಟು
ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್ ಆಗಮಿಸಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರೈತ ಹೋರಾಟಗಾರರು ವಾಗ್ವಾದ ನಡೆಸಿದ ಪ್ರಸಂಗ ಶನಿವಾರ ಜರುಗಿತು.ಕಬ್ಬು ಬೆಲೆ, ಬಾಕಿ ಪಾವತಿ, ಬೆಳೆಗಾರರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರ

ರಾಮನಗರ ಗಡಿ ಗ್ರಾಮಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡ ರೋಗ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣದಲ್ಲಿ ರೋಗ ಪತ್ತೆ
ರಾಮನಗರ: ರಾಮನಗರ ಜಿಲ್ಲೆಯಲ್ಲಿಯೂ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆಯ ಸಲುವಾಗಿ ಜಿಲ್ಲಾಡಳಿತ ಒಂದು ತಿಂಗಳ ಕಾಲ ಜಾತ್ರೆ, ದನಗಳ ಸಂತೆ ಮತ್ತು ಜಾನುವಾರುಗಳ ಸಾಗಾಣಿಕೆಯನ್ನು ನಿಷೇಧ ಮಾಡಿದೆ.

ಜಿಲ್ಲೆಯಲ್ಲಿ ಜಾನುವಾರು ಜಾತ್ರೆ ಮತ್ತು ಸಾಗಾಣಿಕೆ ನಿಷೇಧ
ರಾಮನಗರ-ಅ.11: ರಾಜ್ಯದಾದ್ಯಂತ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೋಗವು ಹರಡದಂತೆ ಮುನ್ನೆಚರಿಕೆ ಕ್ರಮವಾಗಿ ಅಕ್ಟೋಬರ್ 11 ರಿಂದ ನವೆಂಬರ್ 10 ರವರೆಗೆ ರಾಮನಗರ ಜಿಲ್ಲೆಯಾದ್ಯಂತ ಜಾನುವಾರುಗಳ ಜಾತ್ರೆ, ದನಗಳ ಸಂತೆ ಮತ್ತು ಜಾನುವಾರುಗಳ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗೋ ರಾ ಶ್ರೀನಿವಾಸ...ಮ

ರೈತರಿಗೆ ಸಕಾಲದಲ್ಲಿ ದೊರೆಯದ ಯೂರಿಯಾ, ಕಾಳಸಂತೆಯಲ್ಲಿ ಮಾರಾಟ
ಚನ್ನಪಟ್ಟಣ: ಈಬಾರಿ ಏಪ್ರಿಲ್ ನಿಂದಲೇ ಮಳೆ ಆರಂಭವಾಗಿದ್ದು ಈಗಲೂ ಮುಂದುವರೆದಿದೆ. ಕೆಲವರು ಮಧ್ಯಮಧ್ಯ ಅಂದರೆ ಮಳೆ ಬಿಡುವು ಕೊಟ್ಟಾಗ ಬಿತ್ತನೆ ಮಾಡಿದ್ದಾರೆ. ಬಿತ್ತನೆ ಮಾಡಿದ ನಂತರ ಬಂದ ಪೈರುಗಳು ಮಳೆ ಹೆಚ್ಚಾಗಿರುವುದರಿಂದ ಸಂಪೂರ್ಣವಾಗಿ ಬಿಳಿಚಿಕೊಂಡಿವೆ. ಈಗ ಯೂರಿಯಾ ರಸಗೊಬ್ಬರ ಹಾಕಲಿಲ್ಲ ಎಂದರೆ ಅಲ್ಪಸ್ವಲ್ಪ ಉಳಿದಿರುವ ಬೆಳೆಯೂ ಕೈಸೇರುವುದಿಲ್ಲಾ ಎಂಬುದು ರೈತರ ಅಳಲಾಗಿದೆ. ಬಹುತೇಕ ಸೊಸೈಟಿ ಸೇ

ಬೆಳೆ ಸಮೀಕ್ಷೆ ಮತ್ತು ವಿಮೆ ಆಂದೋಲನಕ್ಕೆ ಚಾಲನೆ
ಚನ್ನಪಟ್ಟಣ.ಆ.೧೦: ೨೦೨೨-೨೩ ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆ ಕಾರ್ಯಕ್ರಮಗಳ ಬಗ್ಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಜನರಿಗೆ ಅರಿವು ಮೂಡಿಸಲು ಆಟೋ ಪ್ರಚಾರ ಆಂದೋಲನಕ್ಕೆ ತಾಲ್ಲೂಕಿನ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಸುದರ್ಶನ್ ಅವರು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಆವರಣದಲ್ಲಿ ಚಾಲನೆ ನೀಡಿದರು.ಪ್ರಸಕ್ತ ಸಾಲಿನ ಮುಂಗಾ

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ
ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಕಳೆದ 20 ವರ್ಷಗಳಲ್ಲಿ ಕಂಡರಿಯದ ಹಾನಿ ಈಬಾರಿ ಜಿಲ್ಲೆಯಲ್ಲಿ ಸಂಭವಿಸಿದ್ದು, ಯಾವುದೇ ಮಲೆನಾಡು ಪ್ರದೇಶಗಳಿಗೆ ಕಡಿಮೆ ಇಲ್ಲದಂತೆ ಸುರಿದ ಮಳೆ ಬಯಲು ಸೀಮೆ ಜಿಲ್ಲೆಯಲ್ಲೂ ಸಂಭವಿಸಿದೆ. ಜಿಲ್ಲೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಆಸ್