Tel: 7676775624 | Mail: info@yellowandred.in

Language: EN KAN

    Follow us :


ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

Posted date: 15 Jan, 2024

Powered by:     Yellow and Red

ರೈತನ ಸಂಭ್ರಮದ ಹಬ್ಬದಂದೇ ಆನೆ ದಾಳಿ ಬೆಳೆ ನಾಶ

ರಾಮನಗರ/ಚನ್ನಪಟ್ಟಣ: ವರ್ಷದ ಕೊನೆಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ, ರಾಶಿಗೆ ಪೂಜೆ ಸಲ್ಲಿಸಿ ಸಂಭ್ರಮ ಪಡುವ ದಿನದಂದೇ ಕಾಡಾನೆಗಳು ನುಗ್ಗಿ ಬೆಳೆ ನಾಶ ಪಡಿಸಿ ರೈತರಿಗೆ ಸಂಕಷ್ಟ ತಂದೊಡ್ಡಿರುವ ಘಟನೆ ತಾಲ್ಲೂಕಿನ ತಗಚಗೆರೆ ಮತ್ತು ಸಂತೆಮೊಗಳ್ಳಿ ಗ್ರಾಮಗಳ ತೋಟಗಳಲ್ಲಿ ನಡೆದಿದೆ.


ತಗಚಗೆರೆ ಗ್ರಾಮದ ಪ್ರಸನ್ನ ಎಂಬ ರೈತರ ತೋಟಕ್ಕೆ ತಡರಾತ್ರಿ ನುಗ್ಗಿರುವ ಕಾಡಾನೆಗಳು ಐದಾರು ತೆಂಗಿನ ಮರಗಳು ಹಾಗೂ ಒಂದೂವರೆ ಎಕರೆ ಯಲ್ಲಿ ಬೆಳೆದ ಟೊಮ್ಯಾಟೋ ಬೆಳೆಯನ್ನು ತಿಂದು, ತುಳಿದು ನಾಶಪಡಿಸಿವೆ. ಇಡೀ ತೋಟದಲ್ಲಿ ಓಡಾಡಿರುವ ಕಾಡಾನೆಗಳು ತೆಂಗಿನ ಮರಗಳನ್ನು ಮುರಿದು ಸುಳಿಯ ಗರಿಗಳನ್ನು ತಿಂದು ಹಾಕಿದ್ದು, ಟೊಮ್ಯಾಟೊ ಬೆಳೆಯನ್ನು ನಾಶಪಡಿಸಿವೆ.


ಸಂತೆಮೊಗಳ್ಳಿ ಗ್ರಾಮದ ರೈತ ರಾಘವೇಂದ್ರ ಎಂಬುವವರ ತೋಟಕ್ಕೆ ನುಗ್ಗಿದ ಕಾಡಾನೆಗಳು ಒಂದೂವರೆ ಎಕರೆ ಯಲ್ಲಿ ಬೆಳೆದ ಟೊಮ್ಯಾಟೋ ಬೆಳೆಯನ್ನು ತಿಂದು, ತುಳಿದು ನಾಶ ಪಡಿಸಿವೆ. ಉತ್ತಮ ಬೆಲೆ ಇರುವ ಸಮಯದಲ್ಲೇ ಕಾಡಾನೆಗಳು ನುಗ್ಗಿ ಬೆಳೆಗಳನ್ನು ನಾಶ ಪಡಿಸಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಶಾಶ್ವತವಾಗಿ ಕಾಡಾನೆಗಳನ್ನು ದಟ್ಟಾರಣ್ಯಕ್ಕೆ ಓಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑