ಹಸು ಮೈ ತೊಳೆಯಲು ಹೋಗಿ ವ್ಯಕ್ತಿ ಸಾವು
ಚನ್ನಪಟ್ಟಣ: ಸುಗ್ಗಿ ಹಬ್ಬಕ್ಕೆ ಹಸು ಮೈ ತೊಳೆಯಲು ಹೋಗಿ ಕಾಲುಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಮಸಂಜೀವಯ್ಯ ಎಂಬುವವರ ಮಗ ಹರೀಶ್ (೪೦) ಮೃತ ವ್ಯಕ್ತಿ ಎನ್ನಲಾಗಿದೆ. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರಾಸುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಹಸುವಿನ ಮೈ ತೊಳೆಯಲು ಕೆರೆಗೆ ಹೋಗಿದ್ದರು. ಈ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಮೃತ ದೇಹಕ್ಕಾಗಿ ಪೊಲೀಸರು ಕೆರೆಯಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದು, ಕೆರೆಯಲ್ಲಿ ಸಾಕಷ್ಟು ಆಳವಿರುವ ಕಾರಣ ಭಾನುವಾರ ಶವ ಸಿಕ್ಕಿಲ್ಲ. ಸೋಮವಾರ ಬೆಳಗ್ಗೆ ಶೋಧ ನಡೆಸಿ ಮೃತ ದೆಹವನ್ನು ಹೊರಗೆ ತೆಗೆಯಲಾಗಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856138.
ಪ್ರತಿಕ್ರಿಯೆಗಳು