ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ದ ನೂತನ ಅಧ್ಯಕ್ಷರಾಗಿ ಡಾ ಹಿ ಶಿ ರಾಮಚಂದ್ರೇಗೌಡ

Dr E C Ramachandre Gowda appointed as new president of Karnataka Janapada Parishad and Janapada Loka
ರಾಮನಗರ: ಹಲವಾರು ದಿನಗಳಿಂದ ವಿವಾದಕ್ಕೀಡಾಗಿ, ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕದ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ ಸಿರಿಭವನದಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಹಿರಿಯ ಜಾನಪದ ವಿದ್ವಾಂಸ ಡಾ ಹಿ ಶಿ ರಾಮಚಂದ್ರೇಗೌಡ ರನ್ನು ಆಯ್ಕೆಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ನಾಡೋಜ ಹೆಚ್ ಎಲ್ ನಾಗೇಗೌಡರು ಕಟ್ಟಿ ಬೆಳೆಸಿದ ಜಾನಪದ ಪರಿಷತ್ತು ಮತ್ತು ಲೋಕವು ಕೆಲ ದಿನಗಳಿಂದ ಅಧ್ಯಕ್ಷರ ವಿಚಾರದಲ್ಲಿ ವಿವಾದಕ್ಕೆಡೆಮಾಡಿಕೊಂಡಿತ್ತು. ಮೊದಲು ಹೆಚ್ ಎಲ್ ನಾಗೇಗೌಡರು ನಂತರ ನಾಡೋಜ ಜಿ ನಾರಾಯಣ ರವರು ಅಧ್ಯಕ್ಷರಾಗಿದ್ದರು. ತದನಂತರ ಐಎಎಸ್ ಅಧಿಕಾರಿ ಟಿ ತಿಮ್ಮೇಗೌಡರು ಹೆಚ್ಚು ಅವಧಿಗೆ ಅಧಿಕಾರ ಅನುಭವಿಸಿದ್ದರು. ಹಲವಾರು ವಿರೋಧಗಳ ನಡುವೆಯೂ ಅವರು ಮುಂದುವರೆಯಲು ಹರಸಾಹಸ ಪಟ್ಟಿದ್ದರು. ರಾಜೀನಾಮೆ ನೀಡಿದ ನಂತರವೂ ಸಹ ಜಾನಪದ ವಿದ್ವಾಂಸರನ್ನು ಕಡೆಗಣಿಸಿ ಐಎಎಸ್ ಅಧಿಕಾರಿಗಳನ್ನೇ ಕೂರಿಸಲು ಸಹ ಶತಪ್ರಯತ್ನ ಮಾಡಿದ್ದರು ಎನ್ನಲಾಗಿತ್ತು.
ಸಾರ್ವಜನಿಕವಾಗಿಯೂ ಒತ್ತಡ ಬಂದ ಹಿನ್ನೆಲೆಯಲ್ಲಿ ಅನ್ನದಾನೇಶ್ವರನಾಥ ಸ್ವಾಮೀಜಿಗಳ ಮೂಲಕ ಮಹಾಪೋಷಕರಾದ ಡಾ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿಗಳಿಗೆ ವಿಷಯ ಮುಟ್ಟಿದ ನಂತರ ಬುಧವಾರ ಬೆಂಗಳೂರಿನ ಸಿರಿಭವನದಲ್ಲಿ ಹಿ ಶಿ ರಾಮಚಂದ್ರೇಗೌಡ ರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ತೆರವಾಗಿದ್ದ ಎರಡು ಸ್ಥಾನವನ್ನು ಸಹ ಭರ್ತಿ ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಮ್ಯಾನೇಜಿಂಗ್ ಟ್ರಸ್ಟಿಯಾಗಿ ಆದಿತ್ಯ ನಂಜರಾಜ್ ರವರೇ ಮುಂದುವರೆಯಲಿದ್ದಾರೆ.
ಡಾ ಹಿ ಶಿ ರಾಮಚಂದ್ರೇಗೌಡರು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜಾನಪದ ವಿದ್ವಾಂಸರಾಗಿ, 2001-2004 ರ ಅವಧಿಯಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಸಮಗ್ರ ಜನಪದ ಸಾಹಿತ್ಯ ಪ್ರಕಟಣಾ ಸಮಿತಿಯ ಅಧ್ಯಕ್ಷರಾಗಿ ದುಡಿದಿದ್ದಾರೆ.
ಶ್ರೀಯುತರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗೋಪಾಲಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಎಂಭತ್ತು-ತೊಂಭತ್ತರ ದಶಕದಲ್ಲಿ ರೈತ ಹೋರಾಟದ ಗೀತೆ ಸೇರಿದಂತೆ, ಜಾನಪದ ಕ್ಷೇತ್ರದಲ್ಲಿ ಇಪ್ಪತೈದು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಜಾನಪದದಲ್ಲಿ ದೇಶಿ ಚಿಂತನೆ ಬೆಳೆಸುವಲ್ಲಿ, ಪರಂಪರೆ ಮತ್ತು ವಿಜ್ಞಾನವನ್ನು ಮೇಳೈಸಿ ಚಿಂತಿಸುವ ಲೇಖನಗಳನ್ನು ರಚಿಸುವ ಮೂಲಕ ಓದುಗರ ಮತ್ತು ಕಲಾವಿದರ ಮನಸ್ಸಿನ್ನು ಗೆದ್ದಿದ್ದಾರೆ.
ಇದೇ ತಿಂಗಳ 22ನೇ ತಾರೀಖಿನಂದು ಜಾನಪದ ಲೋಕದಲ್ಲಿ ವಿಶ್ವ ಜಾನಪದ ದಿನಾಚರಣೆ ಇದ್ದು ಅಂದೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
Recent news in arts »

ವನಂ ಶಿವರಾಂ ರವರಿಗೆ ಒಲಿದ ಜಾನಪದ ತಜ್ಞ ಪ್ರಶಸ್ತಿ
ಕನ್ನಡ ಜಾನಪದದ ಮೊದಲ ಪ್ರಾಧ್ಯಾಪಕ ಜೀಶಂಪ ಅವರ ಶಿಷ್ಯರಾಗಿ, ನಾಡೋಜ ಜಾನಪದ ಪರಿಷತ್ತಿನ ರೂವಾರಿ, ಜಾನಪದ ಕಲಾವಿದರ ಆಪ್ತಬಂಧು ಹೆಚ್ ಎಲ್ ನಾಗೇಗೌಡರ ಗರಡಿ ಜಾನಪದ ಲೋಕದಲ್ಲಿ ದುಡಿದು ದಣಿವರಿಯದೆ ಜಾನಪದ

ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕ ದ ನೂತನ ಅಧ್ಯಕ್ಷರಾಗಿ ಡಾ ಹಿ ಶಿ ರಾಮಚಂದ್ರೇಗೌಡ
ರಾಮನಗರ: ಹಲವಾರು ದಿನಗಳಿಂದ ವಿವಾದಕ್ಕೀಡಾಗಿ, ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಜಾನಪದ ಲೋಕದ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ

ತಿಂಗಳಿಂದ ಖಾಲಿ ಉಳಿದಿರುವ ಜಾನಪದ ಪರಿಷತ್ ಅಧ್ಯಕ್ಷ ಸ್ಥಾನ* ಐಎಎಸ್ ಅಧಿಕಾರಿಗಳು ಬೇಡ ಜನಪದ ಹಿನ್ನೆಲೆಯುಳ್ಳವರ ನೇಮಕಕ್ಕೆ ಪಟ್ಟು
ರಾಮನಗರ: ರಾಜ್ಯ ಮತ್ತು ದೇಶದ ಜಾನಪದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಕರ್ನಾಟಕ ಜಾನಪದ ಪರಿಷತ್ತು ಮತ್ತ

ಕಲೆ ಉಳಿಯಬೇಕಾದರೆ ಕಲೆಗಾರ ಉಳಿಯಬೇಕು ಅಬ್ಬಿಗೆರೆ ರಾಜಣ್ಣ
ಚನ್ನಪಟ್ಟಣ: ಕಣ್ಮರೆಯಾಗುತ್ತಿರುವ ಜನಪದ ಕಲೆ.
ರಂಗಭೂಮಿ ಕಲೆ. ಸಂಸ್ಕೃತಿ ಸೇರಿದಂತೆ ವಿವಿಧ ಜನಪರ ಕಲೆಗಳ ತವರು ಬೊಂಬೆನಾಡ

ಸಂಗೀತ ಸೌರಭ ಟ್ರಸ್ಟ್ ನಿಂದ ಇದೇ ತಿಂಗಳ 17 ರಂದು ರಸಮಂಜರಿ ಕಾರ್ಯಕ್ರಮ
ಚನ್ನಪಟ್ಟಣ: ಸಂಗೀತ ಸೌರಭ ವಾದ್ಯಗೋಷ್ಠಿ ವತಿಯಿಂದ ನಗರದ ಜೆಸಿ ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ಆವರಣದಲ್ಲಿ ಜು.17 ರ

ವಿಶ್ವ ಪ್ರವಾಸೋದ್ಯಮ ದಿನಾಚರಣೆಗೆ ಚಾಲನೆ ನೀಡಿದ ತಹಶಿಲ್ದಾರ್ ನಾಗೇಶ್
ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಲ ಗ್ರಾಮ ಟ್ರೈಕ್ವೆಟ್ರಾ ಅಡ್ವೆಂಚರ್ ಕ್ಯಾಂಪ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಗ

20 ಕೆಜಿಯ ಕಾಸ್ಟ್ಯೂಮ್ ಧರಿಸಿ ಲಂಬಾಣಿಯಾಗಿ ಶುಭಾಪುಂಜಾ
ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ ಶುಭಾಪುಂಜಾ ಇದೀಗ ಲಂಬಾಣಿ ಹುಡುಗಿಯಾಗಿ ಮತ್ತೆ ತೆರೆ ಮೇಲೆ ರಂಜಿಸಲು ಸಿದ್ದರಾಗಿದ್ದಾರೆ.

ಕಲಾವಿದರಿಗೆ ಪ್ಯಾಕೇಜ್: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ
ರಾಮನಗರ, 28ನೇ ಮೇ: ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾಗಶಃ ಲಾಕಡೌನ್ ಜಾರಿಯಲ್ಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ ಕಲಾತಂಡಗಳಿಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ.3,000/- ಗಳಂ

ಸಂಗೀತ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ. ಡಿವೈಎಸ್ಪಿ ರಮೇಶ್
ಸಂಗೀತ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಸಕಲ ಜೀವ ರಾಶಿಗಳಿಗೂ ಸಂಗೀತದ ಇಂಪು ಗೊತ್ತಿದೆ. ಪ್ರಾಣಿ ಪಕ್ಷಿಗಳೂ ಸಹ ಸಂಗೀತಕ್ಕೆ ತಲೆದೂಗುತ್ತವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಸಾಕು ಪ್

ಐವತ್ತೈದು ವರ್ಷಗಳ ಸಾಧನೆಗೆ ನೂರಕ್ಕೂ ಹೆಚ್ಚು ಶಿಷ್ಯರನ್ನು ತಯಾರಿಗೆ ಸಿಕ್ಕ ಪ್ರಶಸ್ತಿ: ಬ್ರಹ್ಮಣಿಪುರ ತಮಟೆ ತಿಮ್ಮಯ್ಯಗೆ ಒಲಿದ ಪ್ರಶಸ್ತಿ
ಚನ್ನಪಟ್ಟಣ:ಜ/05/21/ಮಂಗಳವಾರ. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ತಮಟೆ ವಾದನದಲ್ಲಿ ಸೈ ಎನಿಸಿಕೊಂಡು, ಕಳೆದ ಐವತ್ತೈದು ವರ್ಷಗಳಿಂದ ಮೈಸೂರು ದ
ಪ್ರತಿಕ್ರಿಯೆಗಳು