Tel: 7676775624 | Mail: info@yellowandred.in

Language: EN KAN

    Follow us :


ಪದವೀಧರ ಶಿಕ್ಷಕರ ಪರೀಕ್ಷೆ ಫಲಿತಾಂಶ ಚುನಾವಣೆ ಬಳಿಕ

Posted Date: 07 Apr, 2018

ಪದವೀಧರ ಶಿಕ್ಷಕರ ಪರೀಕ್ಷೆ ಫಲಿತಾಂಶ ಚುನಾವಣೆ ಬಳಿಕ

ಬೆಂಗಳೂರು : ರಾಜ್ಯದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ 10 ಸಾವಿರ ಶಿಕ್ಷಕರ ಹುದ್ದೆಗೆ ಬಿ.ಇಡಿ ಪದವೀಧರರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ನಡೆಸಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಫ‌ಲಿತಾಂಶಕ್ಕೆ ರಾಜ್ಯ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯಬೇಕಾಗಿದೆ.

ರಾಜ್ಯದ ಸರ್ಕಾರಿ ಶಾಲೆಗಳ 6 ಮತ್ತು 8ನೇ ತರಗತಿಯಲ್ಲಿ ಖಾಲಿ ಇರುವ ಗಣಿತ ಮತ್ತು ವಿಜ್ಞಾನದ 4,233, ಆಂಗ್ಲ ಭಾಷೆಯ 4,531 ಹಾಗೂ ಸಮಾಜ ಪಾಠದ 1,236 ಹುದ್ದೆ ಸೇರಿ 10 ಸಾವಿರ ಪದವೀಧರ ಶಿಕ್ಷಕ ಹುದ್ದೆಗಳಿಗೆ ಪದವಿ ಜತೆಗೆ ಬಿ.ಇಡಿ ಪೂರೈಸಿದ ಅಭ್ಯರ್ಥಿಗಳಿಂದ 2017ರ ಸೆಪ್ಟೆಂಬರ್‌ ಅಂತ್ಯದವರೆಗೆ ಅರ್ಜಿ ಆಹ್ವಾನಿಸಲಾಗಿತ್ತು.

ಕೇಂದ್ರೀಕೃತ ದಾಖಲಾತಿ ಘಟಕದ (ಸಿಎಸಿ) ಮೂಲಕ ಜಿಲ್ಲಾ ಮಟ್ಟದಲ್ಲೇ ಸ್ಪರ್ಧಾತ್ಮಕ ಪರೀಕ್ಷೆನಡೆಸಲಾಗಿತ್ತು.

ಜಿಲ್ಲಾ ಉಪನಿರ್ದೇಶಕರು ಪರೀಕ್ಷೆ ನಡೆಸಿ, ಜಿಲ್ಲಾಮಟ್ಟದಲ್ಲೇ ಉತ್ತರ ಪತ್ರಿಕೆಯ ಮೌಲ್ಯಮಾಪನ ನಡೆಸಿದ್ದಾರೆ. ಪರೀಕ್ಷೆಯ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಬಿಡಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಫ‌ಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಬಹುದು ಎಂಬ ಉದ್ದೇಶದಿಂದ ಫ‌ಲಿತಾಂಶ ಪ್ರಕಟಿಸಿಲ್ಲ.

ಚುನಾವಣಾ ಆಯೋಗಕ್ಕೆ ಪತ್ರ:

ಪದವೀಧರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಫ‌ಲಿತಾಂಶ ನೀಡಲು ಅವಕಾಶ ಕೋರಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಆಯೋಗ ಅವಕಾಶ ನೀಡದೆ ಮೇ 15ರ ನಂತರ ಫ‌ಲಿತಾಂಶ ಪ್ರಕಟಿಸುವಂತೆ ತಿಳಿಸಿದೆ. ಹೀಗಾಗಿ ಫ‌ಲಿತಾಂಶ ಪ್ರಕಟಿಸಿಲ್ಲ ಎಂದು ಇಲಾಖೆಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ 6 ಮತ್ತು 8ನೇ ತರಗತಿಯ ಪದವೀಧರ ಶಿಕ್ಷಕರ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಫ‌ಲಿತಾಂಶವನ್ನು ಚುನಾವಣಾ ಫ‌ಲಿತಾಂಶದ ನಂತರ ಪ್ರಕಟಿಸಲಾಗುವುದು.

- ಫಿಲೋಮಿನಾ ಲೋಬೊ, ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕಿ

(ಸಂಗ್ರಹ ವರದಿ)

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in jobs »

ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸಂದರ್ಶನ
ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸಂದರ್ಶನ

ರಾಮನಗರ:ಏ/೦೩/೨೦/ಶುಕ್ರವಾರ. ರಾಜ್ಯಾದ್ಯಂತ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖ

ಸೇನೆ ಹುದ್ದೆಗೆ ಅರ್ಜಿ ಹಾಕಿ

ಹೊಸದಿಲ್ಲಿ: ಭಾರತೀಯ ಸೇನೆಯ ವಿವಿಧ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಶಸ್ತ್ರ ಪಡೆಯ ತಳಮಟ್ಟದಲ್ಲಿ ಹೋರಾಟ ನಡೆಸುವ ಘಟಕದ 175 ವಿವಿಧ ಶ್ರೇಣಿಯ ಹುದ್ದೆಗಳನ್ನು ತುಂಬಲಾಗುತ್ತದೆ. ಮಹ

2,997 ಅತಿಥಿ ಉಪನ್ಯಾಸಕರ ನೇಮಕ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಖಾಲಿ ಇರುವ 2,997 ಉಪನ್ಯಾಸಕರ ಹುದ್ದೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿ

ಪಿಡಿಒ ನೇಮಕಾತಿಗೆ ತಾತ್ಕಾಲಿಕ ಬ್ರೇಕ್

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಬಿಸಿ ಪಿಡಿಒ ಹಾಗೂ ಗ್ರಾಪಂ ಕಾರ್ಯದರ್ಶಿಗಳ ನೇಮಕಾತಿಗೂ ತಟ್ಟಿದೆ. ಇನ್ನೇನು ಹುದ್ದೆಗಳನ್ನು ವಹಿಸಿಕೊಂಡು ಸೇವೆಗೆ ಅಣಿಯಾಗಬೇಕು ಅಂದುಕೊಂಡಿದ್ದ ಪಿಡಿಒ ಮತ್ತು ಪಂಚಾಯಿತ

ಉಚಿತ ಐಎಎಸ್‌ ಮತ್ತು ಕೆಎಎಸ್ ತರಬೇತಿಗೆ ಅರ್ಜಿ ಅಹ್ವಾನ

ಬೆಂಗಳೂರು:ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18 ನೇ ಸಾಲಿನ ಉಚಿತ ಐ.ಎ.ಎಸ್. ಮತ್ತು ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಪ್ರವರ್ಗ-1, 2 (ಎ), 3 (ಎ) ಹಾ

ಪದವೀಧರ ಶಿಕ್ಷಕರ ಪರೀಕ್ಷೆ ಫಲಿತಾಂಶ ಚುನಾವಣೆ ಬಳಿಕ
ಪದವೀಧರ ಶಿಕ್ಷಕರ ಪರೀಕ್ಷೆ ಫಲಿತಾಂಶ ಚುನಾವಣೆ ಬಳಿಕ

ಬೆಂಗಳೂರು : ರಾಜ್ಯದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಖಾಲಿ ಇರುವ 10 ಸಾವಿರ ಶಿಕ್ಷಕರ ಹುದ್ದೆಗೆ ಬಿ.ಇಡಿ ಪದವೀಧರರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ನಡೆಸಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು ಫ&

265 ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ

ಶಿಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಖಾಲಿ ಇರುವ 265 ಬೋಧಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು ಅರ್ಹ ಹಾಗೂ ಆಸಕ್ತ ವಿದ್ಯಾರ್ಥಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ_ಸಲ್ಲಿಸಲು_ಕೊನೆಯ_ದಿನಾಂ

ಮಾರ್ಚ್ 24ರಂದು ಉದ್ಯೋಗ ಮೇಳ

ಮಂಡ್ಯ :ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯಮ ಶೀಲತೆ ಮಂತ್ರಾಲಯದ ಸಹಕಾರದಲ್ಲಿ ಮಾರ್ಚ್ 24 ರ ಬೆಳಿಗ್ಗೆ 10.30 ಗಂಟೆಗೆ ಉದ್ಯೋಗ ಮೇಳವನ್ನು ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸಮಾರಂಭದ ಉದ್ಘಾಟನಾ ಕಾರ್ಯಕ್

ಮಾರ್ಚ್ 18 ಹಾಗೂ 19 ರಂದು ಚಿತ್ರದುರ್ಗದಲ್ಲಿ ಏರ್‍ಮೆನ್ ಭರ್ತಿ ರ್ಯಾಲಿ

ಕಲಬುರಗಿ : ಭಾರತೀಯ ವಾಯುಪಡೆಯ ಗ್ರೂಪ್-ವೈ ಟ್ರೇಡ್‍ಗಳ ಏರಮೆನ್ ಹುದ್ದೆಗಳ ಭರ್ತಿಗಾಗಿ ಇದೇ ಮಾರ್ಚ್ 18 ಮತ್ತು 19 ರಂದು ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ ಎಂದು ಬೆಂಗಳೂರಿನ

ಚಿತ್ರದುರ್ಗದಲ್ಲಿ ಮೆಗಾ ರಿಕ್ರೋಟ್‍ಮೆಂಟ್ ರ್ಯಾಲಿ

ಹಾಸನ : ಚಿತ್ರದುರ್ಗ ದಲ್ಲಿ ಭಾರತೀಯ ವಾಯುಪಡೆಯ ಗ್ರೂಪ್ “ವೈ”(ಮೆಡ್ ಅಸಿಸ್ಟೆಂಟ್) ಹುದ್ದೆಗಳ ನೇಮಕಾತಿ ರ್ಯಾಲಿಯು ಮಾ.18 ಮತ್ತು ಮಾ.19 ಚಿತ್ರದುರ್ಗದ ಓನಕೆ ಓಬವ್ವ ಜಿಲ್ಲಾ ಸ್ಟೇಡಿಯಂ ನಲ್ಲಿ ನಡೆಯಲಿದೆ. 
ವಿದ್

Top Stories »  


Top ↑